ಸಾರಾಂಶ
ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿ ವಿಶೇಷ ಅಲಂಕಾರ ಪೂಜೆ ನೆರವೇರಿಸಿದರು.
ಸಿದ್ದಾಪುರ: ನೆಲ್ಯಹುದಿಕೇರಿಯ ಇತಿಹಾಸ ಪ್ರಸಿದ್ಧ ದೇವಸ್ಥಾನವಾದ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಮೈಸೂರು ಕೊಡಗು ಲೋಕ ಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿ ಶ್ರೀ ಸತ್ಯನಾರಾಯಣ ಸ್ವಾಮಿಗೆ ವಿಶೇಷ ಅಲಂಕಾರ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಸೋಮವಾರಪೇಟೆ ಮಂಡಲ ಪ್ರಮುಖ್ ಗೌತಮ್, ನೆಲ್ಯಹುದಿಕೇರಿ ಶಕ್ತಿಕೇಂದ್ರ ಪ್ರಮುಖ್ ಬೆಳ್ಳಿಯಪ್ಪ, ಸತ್ಯನಾರಾಯಣ ದೇವಸ್ಥಾನದ ಪ್ರಮುಖರಾದ ಚಂದ್ರಶೇಖರ್, ರಘು, ಬಿಜೆಪಿ ಪಕ್ಷದ ಪ್ರಮುಖರಾದ ಧರ್ಮಲಿಂಗ, ಪ್ರಮೋದ್ ಸೇರಿದಂತೆ ಇನ್ನಿತರರು ಇದ್ದರು.ನಂತರ ಅವರು ಇತ್ತೀಚೆಗೆ ಮಾತೃ ವಿನಿಯೋಗವಾದ ಎಸ್ ಎನ್ ಡಿ ಪಿ ಕೊಡಗು ಯೂನಿಯನ್ ಅಧ್ಯಕ್ಷ ವಿ ಕೆ ಲೋಕೇಶ್ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.