ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುನಗರದ ಕೆ.ಆರ್. ಕ್ಷೇತ್ರದಲ್ಲಿ ಬಿಜೆಪಿ ಕಚೇರಿಯನ್ನು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು.ಜಯನಗರದ ಇಸ್ಕಾನ್ ದೇವಸ್ಥಾನದ ಬಳಿ ತೆರೆಯಲಾದ ಈ ಕಚೇರಿ ಉದ್ಘಾಟಿಸಿದ ಸಂಸದ ಯದುವೀರ್ ಮತ್ತು ಶಾಸಕ ಟಿ.ಎಸ್. ಶ್ರೀವತ್ಸ ಅವರು ಕೆ.ಆರ್. ಕ್ಷೇತ್ರದಲ್ಲಿ ಈಗ ಎರಡು ಕಚೇರಿಗಳು ಆಗಿದೆ. ಈಗಾಗಲೇ ಶಾಸಕರ ಕಚೇರಿ ಇದ್ದು, ಕುವೆಂಪುನಗರ, ಶ್ರೀರಾಂಪುರ, ಜೆ.ಪಿ. ನಗರಕ್ಕೆ ಹತ್ತಿರವಾಗುವಂತೆ ಈ ಕಚೇರಿ ಆರಂಭವಾಗಿರುವುದು ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಿದೆ ಎಂದರು.ಸಾರ್ವಜನಿಕರು ಈ ಕಚೇರಿಯ ಸೌಲಭ್ಯವನ್ನು ಪಡೆದುಕೊಳ್ಳಬೇಕು. ತಮ್ಮ ಸಮಸ್ಯೆಗಳನ್ನು ಇಲ್ಲಿ ಬಂದು ಹೇಳಬಹುದು ಎಂದರು.ಮಾಜಿ ಸಂಸದ ಪ್ರತಾಪ ಸಿಂಹ, ನಗರ ಬಿಜೆಪಿ ಅಧ್ಯಕ್ಷ ಎಲ್. ನಾಗೇಂದ್ರ, ವಿಧಾನ ಪರಿಷತ್‌ಮಾಜಿ ಸದಸ್ಯ ತೋಂಟದಾರ್ಯ, ಮಾಜಿ ಶಾಸಕ ಮಾರುತಿ ರಾವ್‌ಪವಾರ್, ಕೆ.ಆರ್. ಕ್ಷೇತ್ರ ಬಿಜೆಪಿ ಅಧ್ಯಕ್ಷ ಯು.ಜಿ. ಗೋಪಾಲರಾಜೇ ಅರಸ್, ಮಾಜಿ ಮೇಯರ್ ಶಿವಕುಮಾರ್, ಮಾಜಿ ಉಪಮೇಯರ್ ವಿ. ಶೈಲೇಂದ್ರ, ನಗರ ಪಾಲಿಕೆ ಮಾಜಿ ಸದಸ್ಯರಾದ ಜಗೀದಶ್, ಎಂ.ಕೆ. ಶಂಕರ್, ಮ.ವಿ. ರಾಮಪ್ರಸಾದ್, ಬಿ.ವಿ. ಮಂಜುನಾಥ್, ನಗರ ಬಿಜೆಪಿ ಉಪಾಧ್ಯಕ್ಷ ಜೋಗಿ ಮಂಜು, ವಿಶ್ವೇಶ್ವರಯ್ಯ, ಯೋಗಾನಂದ ಮೊದಲಾದವರು ಇದ್ದರು.