ಸಾಮಾಜಿಕ ಹೊಣೆಗಾರಿಕೆ ಅರಿತು ಎಂಆರ್‌ಪಿಎಲ್‌ ಸೇವೆ: ಸ್ಟೀವನ್ ಪಿಂಟೋ

| Published : Feb 19 2025, 12:46 AM IST

ಸಾರಾಂಶ

ಶಿಕ್ಷಣ, ಆರೋಗ್ಯ, ಸಂಸ್ಕೃತಿ, ಪ್ರಕೃತಿ ಬಹುಜನ ಎಂಬ ಐದು ಅಂಶಗಳನ್ನು ಇಟ್ಟುಕೊಂಡು ಎಂಆರ್‌ಪಿಎಲ್ ಕಂಪನಿ ಸಿಎಸ್‌ಆರ್ ಫಂಡ್ ಚಟುವಟಿಕೆಗಳ ಮೇಲೆ ಕಾರ್ಯನಿರ್ವಹಿಸುತ್ತದೆ ಎಂದು ಮಂಗಳೂರಿನ ರಿಫೈನರಿ ಮತ್ತು ಪೆಟ್ರೋ ಕೆಮಿಕಲ್ ಲಿ. (ಎಂಆರ್‌ಪಿಎಲ್ ) ವ್ಯವಸ್ಥಾಪಕ ಸ್ಟೀವನ್ ಪಿಂಟೋ ಹೇಳಿದ್ದಾರೆ.

- ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಗೆ ಕ್ರ್ಯಾಶ್ ಕಾಟ್ ವಿತ್ ಮೆಡಿಸಿನ್ ಟ್ರ್ಯಾಲಿ ವಿತರಣೆ

- - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಶಿಕ್ಷಣ, ಆರೋಗ್ಯ, ಸಂಸ್ಕೃತಿ, ಪ್ರಕೃತಿ ಬಹುಜನ ಎಂಬ ಐದು ಅಂಶಗಳನ್ನು ಇಟ್ಟುಕೊಂಡು ಎಂಆರ್‌ಪಿಎಲ್ ಕಂಪನಿ ಸಿಎಸ್‌ಆರ್ ಫಂಡ್ ಚಟುವಟಿಕೆಗಳ ಮೇಲೆ ಕಾರ್ಯನಿರ್ವಹಿಸುತ್ತದೆ ಎಂದು ಮಂಗಳೂರಿನ ರಿಫೈನರಿ ಮತ್ತು ಪೆಟ್ರೋ ಕೆಮಿಕಲ್ ಲಿ. (ಎಂಆರ್‌ಪಿಎಲ್ ) ವ್ಯವಸ್ಥಾಪಕ ಸ್ಟೀವನ್ ಪಿಂಟೋ ಹೇಳಿದರು.

ಪಟ್ಟಣದ ಹಳೆಯ ಆಸ್ಪತ್ರೆ ಕಟ್ಟಡದಲ್ಲಿರುವ ಸಭಾಂಗಣದಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯವಾಗಿ ಬೇಕಾಗಿರುವ 19 ಕ್ರ್ಯಾಶ್ ಕಾಟ್ ವಿತ್ ಮೆಡಿಸಿನ್ ಟ್ರ್ಯಾಲಿ ತಮ್ಮ ಕಂಪನಿಯಿಂದ ಉಚಿತವಾಗಿ ನೀಡಿ ಅವರು ಮಾತನಾಡಿದರು.

ನಮ್ಮ ಕಂಪನಿಯು ಸಾಮಾಜಿಕ ಹೊಣೆಗಾರಿಕೆ ಅರಿತು ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ, ರಾಯಚೂರು ಯಾದಗಿರಿ ಜಿಲ್ಲೆಗಳಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಿಎಸ್‌ಆರ್ ಫಂಡ್ ಕೊಟ್ಟಿದ್ದೇವೆ ಎಂದು ವಿವರಿಸಿದರು.

ಸ್ಪೂರ್ತಿ ಸಂಸ್ಥೆ ಮುಖ್ಯಸ್ಥರಾದ ಕೆ.ಬಿ.ರೂಪ್ಲಾನಾಯ್ಕ ಮಾತನಾಡಿ, ದೇಶದಲ್ಲಿ ಯಾವುದೇ ಕಂಪನಿ ತನ್ನ ಆದಾಯ ₹500 ಕೋಟಿ ಗಳಿಸಿದ್ದಲ್ಲಿ ಅದರಲ್ಲಿ ಶೇ.2ರಷ್ಟು ಆದಾಯವನ್ನು ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್‌ಆರ್) ಅಡಿಯಲ್ಲಿ ಸಮಾಜ ಅಭಿವೃದ್ಧಿ, ಒಳಿತಿಗಾಗಿ ಕೊಡುವ ಕಾನೂನು ಈ ದೇಶದಲ್ಲಿದೆ. ಅದರಂತೆ ಈ ಕಂಪನಿ ತನ್ನ ಹೊಣೆಗಾರಿಕೆ ನಿಭಾಯಿಸುತ್ತಿದೆ ಎಂದು ಹೇಳಿದರು.

ಉಪವಿಭಾಗಾಧಿಕಾರಿ ವಿ.ಅಭಿಷೇಕ್ ಮಾತನಾಡಿದರು. ಈ ಸಂದರ್ಭ ತಾಲೂಕು ಆರೋಗ್ಯಾಧಿಕಾರಿ ಡಾ. ಗಿರೀಶ್, ತಾ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರುಣ್, ಶ್ರೀ ಸಾಯಿಗುರುಕುಲ ಸಂಸ್ಥೆ ಕಾರ್ಯದರ್ಶಿ ಸೌಮ್ಯ ಪ್ರದೀಪ್‌ಗೌಡ, ಭ್ರಷ್ಟಾಚಾರ ವಿರೋಧಿ ವೇದಿಕೆ ಅಧ್ಯಕ್ಷ ಗುರುಪಾದಯ್ಯ ಮಠದ್, ಕರವೇ ಅಧ್ಯಕ್ಷ ವಿನಯ್ ಸ್ಫೂರ್ತಿ ಸಂಸ್ಥೆಯ ತಾಲೂಕು ಸಂಯೋಜಕರು ಎಂ.ಸುಜಾತ ಸಮುದಾಯ ಸಂಘಟಿಕರು ನೇತ್ರಾವತಿ ಉಪಸ್ಥಿತರಿದ್ದರು.

- - - -18ಎಚ್.ಎಲ್.ಐ1.ಜೆಪಿಜಿ:

ಹೊನ್ನಾಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಎಂಆರ್‌ಪಿಎಲ್ ಕಂಪನಿ ವ್ಯವಸ್ಥಾಪಕ ಸ್ಟೀವನ್ ಪಿಂಟೋ ಅವರು 19 ಕ್ರ್ಯಾಶ್ ಕಾಟ್ ವಿತ್ ಮೆಡಿಸಿನ್ ಟ್ರ್ಯಾಲಿಗಳನ್ನು ಕೊಡುಗೆಯಾಗಿ ನೀಡಿದರು.