ಸಾರಾಂಶ
ಎಂಆರ್‌ಪಿಎಲ್- ಒಎನ್‌ಜಿಸಿ ನಿರ್ವಸಿತ ಕುಟುಂಬಗಳ 10 ಮತ್ತು 12 ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಸನ್ಮಾನ ಹಾಗೂ ನಿವೃತ್ತ ಉದ್ಯೋಗಿಗಳಿಗೆ ಅಭಿವಂದನೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಎಂಆರ್‌ಪಿಎಲ್ ಉದ್ಯೋಗಿಗಳ ರಿಕ್ರಿಯೇಷನ್ ಸಭಾಂಗಣದಲ್ಲಿ ಜರುಗಿತು.
ಕನ್ನಡಪ್ರಭ ವಾತ್ರೆ ಮೂಲ್ಕಿ
ಎಂ.ಆರ್‌ಪಿಎಲ್- ಒಎನ್‌ಜಿಸಿ ನಿರ್ವಸಿತ ಉದ್ಯೋಗಿಗಳ ಕಲ್ಯಾಣ ಸಂಘದ ವತಿಯಿಂದ ಎಂಆರ್‌ಪಿಎಲ್- ಒಎನ್‌ಜಿಸಿ ನಿರ್ವಸಿತ ಕುಟುಂಬಗಳ 10 ಮತ್ತು 12 ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಸನ್ಮಾನ ಹಾಗೂ ನಿವೃತ್ತ ಉದ್ಯೋಗಿಗಳಿಗೆ ಅಭಿವಂದನೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಎಂಆರ್‌ಪಿಎಲ್ ಉದ್ಯೋಗಿಗಳ ರಿಕ್ರಿಯೇಷನ್ ಸಭಾಂಗಣದಲ್ಲಿ ಜರುಗಿತು. ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿ ಮಾನತಾಡಿದರು. ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಕಾರ್ಯಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸಿದರು.ಮುಖ್ಯ ಅತಿಥಿ ಪದ್ಮನಾಭ ಬಿ. ಮಾತನಾಡಿದರು.
ಎಂಆರ್‌ಪಿಎಲ್‌ನ ಮಹಾಪ್ರಬಂಧಕ ಸತೀಶ್ ಎಂ., ಎಂಆರ್‌ಪಿಎಲ್ ಮಾನೇಜೆಂಟ್ ಸ್ವಾಫ್ ಅಸೋಸಿಯಶನ್ ಅಧ್ಯಕ್ಷ ಸಂಪತ್ ರೈ ಮಾತನಾಡಿದರು.ಕಾರ್ಯಕ್ರಮದಲ್ಲಿ ನಿರ್ವಸಿತ ಕುಟುಂಬಗಳ 10 ಮತ್ತು 12 ನೇ ತರಗತಿಯ ಒಟ್ಟು 70 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ನಿವೃತ್ತ ಉದ್ಯೋಗಿಗಳಾದ ಬಾಲಕೃಷ್ಣ ಮತ್ತು ರೋನಿ ಅವರನ್ನು ಸನ್ಮಾನಿಸಲಾಯಿತು.
ನಿರ್ವಸಿತ ಕುಟುಂಬಗಳ ಸದಸ್ಯರಾದ ರಾಜ್ಯ ಅಗ್ನಿ ಶಾಮಕ ದಳದ ಉದ್ಯೋಗಿ, ರಾಜ್ಯದ ಮುಖ್ಯಮಂತ್ರಿಗಳಿಂದ ಚಿನ್ನದ ಪದಕದ ಗೌರವ ಹಾಗೂ ಪದೋನ್ನತಿ ಪಡೆದ ಠಾಣಾಧಿಕಾರಿ ರವೀಂದ್ರ ಬಾಳ ಮತ್ತು ಎಳವೆಯಲ್ಲಿಯೇ ಹಲವು ಬರವಣಿಗೆಗಳಿಂದ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದ ಬರಹಗಾರ್ತಿ ಕುಮಾರಿ ರೇಶಲ್ ಬ್ರೆಟ್ಟಿ ಫರ್ನಾಂಡಿಸ್ ಅವರನ್ನು ಸನ್ಮಾನಿಸಲಾಯಿತು. ಆರ್ಥಿಕ ದುರ್ಬಲರಾಗಿರುವ 4 ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡಲಾಯಿತು.ವೇದಿಕೆಯಲ್ಲಿ ಎಂಆರ್‌ಪಿಎಲ್ ಉದ್ಯೋಗಿಗಳ ಯೂನಿಯನ್‌ನ ಕಾರ್ಯದರ್ಶಿ ಅಭಿಷೇಕ್ ಕಾರಂತ್, ಉಪಾಧ್ಯಕ್ಷ ಯುವರಾಜ್, ಪ್ರಸಾದ್ ವಿ., ಎಂಆರ್‌ಪಿಎಲ್‌ನ ಲಲಿತಾ ಪಾಂಡೆ, ಆರೋಮಾಟಿಕ್ ಕಾಂಪ್ಲೆಕ್ಸ್ ಉದ್ಯೋಗಿಗಳ ಯೂನಿಯನ್ ಅಧ್ಯಕ್ಷ ಸುಧೀರ್ ಎಂ. ಉಪಸ್ಥಿತರಿದ್ದರು.