ಸಾರಾಂಶ
ಮಂಗಳೂರು: ಕೇಂದ್ರ ಸರ್ಕಾರ ಸ್ವಾಮ್ಯದ ಒಎನ್‌ಜಿಸಿ ಅಂಗಸಂಸ್ಥೆಯಾದ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಡಿಯಲ್ಲಿ ಬರುವ ಕ್ಯಾಟಗರಿ-1 ಮಿನಿರತ್ನ ಸಾರ್ವಜನಿಕ ವಲಯ ಉದ್ಯಮವಾದ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) 28ನೇ ಇಂಧನ ತಂತ್ರಜ್ಞಾನ ಸಮಾವೇಶ (ಇಟಿಎಂ 2025)ದಲ್ಲಿ 2024-25ನೇ ಸಾಲಿನ ಸಂಸ್ಕರಣಾ ತಂತ್ರಜ್ಞಾನದಲ್ಲಿ ಉತ್ತಮ ನಾವೀನ್ಯತೆಗಾಗಿ ಆವಿಷ್ಕಾರ ಪ್ರಶಸ್ತಿ ಗಳಿಸಿ ಮತ್ತೊಂದು ಗೌರವ ಮುಡಿಗೇರಿಸಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರದೀಪ್ ಸಿಂಗ್ ಪುರಿ, ಸಚಿವಾಲಯ ಕಾರ್ಯದರ್ಶಿ ಪಂಕಜ್ ಜೈನ್ ಅವರ ಸಮ್ಮುಖದಲ್ಲಿ ಸೆಂಟರ್ ಫಾರ್ ಹೈ ಟೆಕ್ನಾಲಜಿ ಆಶ್ರಯದಲ್ಲಿ ಹೈದರಾಬಾದ್ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನೆರವೇರಿತು. ಎಂಆರ್‌ಪಿಎಲ್ ಪರವಾಗಿ ರಿಫೈನರಿ ನಿರ್ದೇಶಕ ನಂದಕುಮಾರ್ ವಿ. ಪಿಳ್ಳೈ, ನಾವೀನ್ಯತಾ ಕೇಂದ್ರದ ಮುಖ್ಯ ವ್ಯವಸ್ಥಾಪಕ ಕಾರ್ತಿಕ್ ಆರ್. ಮತ್ತು ಎಸ್. ನಿರ್ಮಲ್ ಗಣೇಶ್ ಪ್ರಶಸ್ತಿ ಸ್ವೀಕರಿಸಿದರು.ಈ ಪ್ರಶಸ್ತಿಯು ಎಂಆರ್‌ಪಿಎಲ್‌ಗೆ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಸತತ ನಾಲ್ಕನೇ ಬಾರಿಗೆ ದೊರೆತಿದ್ದು, ಸಂಸ್ಕರಣಾ ಕ್ಷೇತ್ರದಲ್ಲಿ ಸ್ವದೇಶಿ ನಾವೀನ್ಯತೆಯಲ್ಲಿ ಇದರ ನಿರಂತರ ನಾಯಕತ್ವವನ್ನು ಮತ್ತೊಮ್ಮೆ ದೃಢಪಡಿಸಿದೆ.ಎಂಆರ್‌ಪಿಎಲ್‌ನ ಆರ್ ಅಂಡ್ ಡಿ ತಂಡದಿಂದ ಸ್ವದೇಶಿಯಾಗಿ ಅಭಿವೃದ್ಧಿಪಡಿಸಲಾದ ‘ಗ್ರಾಡ್ಯುಯಲ್ ಒಲಿಫಿನ್ಸ್ ಅಂಡ್ ಆರೊಮ್ಯಾಟಿಕ್ ಟೆಕ್ನಾಲಜಿ’- ಕಚ್ಚಾ ತೈಲದಿಂದ ರಾಸಾಯನಿಕ (Crude-to-Chemicals) ಪ್ರಕ್ರಿಯೆಯ ಭಾಗವಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))