ಸಾರಾಂಶ
ಪಕ್ಷದ ಬಾವುಟ ನೀಡಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸ್ವಾಗತ
ಕನ್ನಡಪ್ರಭ ವಾರ್ತೆ ಹಾಸನಅರಕಲಗೂಡು ತಾಲೂಕಿನ ಪ್ರಭಾವಿ ಮುಖಂಡ ಹಾಗೂ ಸಮಾಜ ಸೇವಕ ಎಂ.ಟಿ.ಕೃಷ್ಣೇಗೌಡ ತಮ್ಮ ಅಪಾರ ಬೆಂಬಲಿಗರೊಂದಿಗೆ ಶುಕ್ರವಾರ ಕಾಂಗ್ರೆಸ್ ಸೇರ್ಪಡೆಯಾದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಕೃಷ್ಣೇಗೌಡ ಅವರನ್ನು ಬರಮಾಡಿಕೊಂಡರು.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಕೃಷ್ಣೇಗೌಡ ಕಾಂಗ್ರೆಸ್ ಸೇರ್ಪಡೆ ಆಗಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕೃಷ್ಣೇಗೌಡರಿಗೆ ಕಾಂಗ್ರೆಸ್ ಟಿಕೆಟ್ ಸಿಗಲಿಲ್ಲ. ಬದಲಾಗಿ ನಿವೃತ್ತ ಪೊಲೀಸ್ ಅಧಿಕಾರಿ ಶ್ರೀಧರ್‌ಗೌಡ ಅವರಿಗೆ ಟಿಕೆಟ್ ಸಿಕ್ಕಿತ್ತು. ಹಾಗಾಗಿ ಕೃಷ್ಣೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ 55,038 ಮತ ಪಡೆಯುವ ಮೂಲಕ ಎರಡನೇ ಸ್ಥಾನಕ್ಕೇರಿದ್ದರು. ಅಲ್ಲದೆ ಕಾಂಗ್ರೆಸ್ ಅಭ್ಯರ್ಥಿಯನ್ನು 3 ನೇ ಸ್ಥಾನಕ್ಕೆ ಹೋಗುವಂತೆ ಮಾಡಿದ್ದರು.
ಈ ಹಿನ್ನೆಲೆ ಚುನಾವಣೆ ಸಂದರ್ಭದಲ್ಲೇ ಕೃಷ್ಣೇಗೌಡ ಅವರನ್ನು ಕಾಂಗ್ರೆಸ್‌ನಿಂದ ಉಚ್ಛಾಟನೆ ಮಾಡಲಾಗಿತ್ತುಇದೀಗ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮರಳಿ ಕಾಂಗ್ರೆಸ್ ಪಕ್ಷಕ್ಕೆ ಕೃಷ್ಣೇಗೌಡ ಅವರನ್ನು ಸೇರಿಸಿಕೊಂಡಿರುವುದು ಜಿಲ್ಲೆಯ ರಾಜಕಾರಣದಲ್ಲಿ ಕೆಲವರ ಲೆಕ್ಕಾಚಾರವನ್ನು ಬುಡಮೇಲು ಮಾಡಲಿದೆ ಎಂಬ ಲೆಕ್ಕಾಚಾರ ಹಾಕಲಾಗಿದೆ.
ಹಾಸನ ಲೋಕಸಭಾ ಕ್ಷೇತ್ರ: ೩ ನಾಮಪತ್ರ ತಿರಸ್ಕೃತಹಾಸನ: ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರಗಳ ಪರಿಶೀಲನೆ ಶುಕ್ರವಾರ ನಡೆಯಿತು. ಒಟ್ಟು ೩ ನಾಮಪತ್ರಗಳು ತಿರಸ್ಕೃತಗೊಂಡಿದ್ದು, ೧೮ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿ ಸಿ.ಸತ್ಯಭಾಮಾ ತಿಳಿಸಿದ್ದಾರೆ.ಶೇಖ್ ಅಹಮದ್ (ನವರಂಗ್ ಕಾಂಗ್ರೆಸ್), ಜೆ.ಕೆ.ಚಿಕ್ಕಯ್ಯ (ಪಕ್ಷೇತರ) ಮತ್ತು ಪರಮೇಶ ಎನ್.ಎಂ. (ಪಕ್ಷೇತರ) ಅವರ ನಾಮಪತ್ರಗಳು ತಿರಸ್ಕೃತಗೊಂಡಿವೆ.ಕ್ರಮಬದ್ಧವಾಗಿರುವ ನಾಮಪತ್ರಗಳು: ಗಂಗಾಧರ್ ಬಹುಜನ್ (ಬಹುಜನ ಸಮಾಜ ಪಕ್ಷ), ಪ್ರಜ್ವಲ್ ರೇವಣ್ಣ (ಜಾತ್ಯತೀತ ಜನತಾದಳ), ಶ್ರೇಯಸ್ ಎಂ.ಪಟೇಲ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ಆನಂದ್ ಜಿ.ಎನ್. (ಭಾರತೀಯ ಡಾ. ಬಿ.ಆರ್. ಅಂಬೇಡ್ಕರ್ ಜನತಾ ಪಾರ್ಟಿ), ದೇವರಾಜಾಚಾರಿ ಎಂ.ವೈ. (ಕರ್ನಾಟಕ ರಾಷ್ಟ್ರ ಸಮಿತಿ), ಎಸ್.ಕೆ. ನಿಂಗರಾಜ (ಬಹುಜನ್ ಭಾರತ್ ಪಾರ್ಟಿ), ಪ್ರತಾಪ ಕೆ.ಎ. (ಉತ್ತಮ ಪ್ರಜಾಕೀಯ ಪಕ್ಷ), ಎಚ್.ಡಿ. ರೇವಣ್ಣ (ಪೂರ್ವಾಂಚಲ ಮಹಾಪಂಚಾಯತ್), ಶಿವರಾಜ್ ಬಿ. (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಭಾರತ್)ಪಕ್ಷೇತರ ಅಭ್ಯರ್ಥಿಗಳು: ಕೆ.ಆರ್. ಗಂಗಾಧರಪ್ಪ, ಬಸವರಾಜು ಜೆ.ಡಿ, ಎಂ. ಮಹೇಶ್ ಉ. ಹರ್ಷ, ಆರ್.ಜಿ. ಸತೀಶ್, ಸಂತೋಷ್ ಬಿ.ಎನ್, ಸಿದ್ಧಾಭೋವಿ, ಬಿ.ಎನ್. ಸುರೇಶ, ಹೇಮಂತ್ ಕುಮಾರ್, ಬಿ.ಎನ್, ಹೊಳೆಯಪ್ಪ ಜಿ. ನಾಮಪತ್ರ ವಾಪಸ್ ಪಡೆಯಲು ಏ.೮ರಂದು ಕೊನೆಯ ದಿನವಾಗಿದೆ.ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಕೃಷ್ಣೇಗೌಡ ಅವರನ್ನು ಸ್ವಾಗತಿಸಿದರು.