ಮುದಗಲ್: ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ಸಂಪನ್ನ

| Published : Mar 08 2024, 01:47 AM IST

ಮುದಗಲ್: ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಮುದಗಲ್‌ನ ರಾಮಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ನಿಮಿತ್ತ ಕಳಸ ಮೆರವಣಿಗೆ ನಡೆಯಿತು. ಭಕ್ತರಿಗೆ ಅನ್ನದಾಸೋಹ ಜರುಗಿತು.

ಮುದಗಲ್: ಪಟ್ಟಣದ ಶ್ರೀ ರಾಮಲಿಂಗೇಶ್ವರ ಕಾಲೋನಿಯಲ್ಲಿ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ಗುರುವಾರ ಶ್ರದ್ಧಾ ಭಕ್ತಿಯಿಂದ ಅದ್ಧೂರಿಯಾಗಿ ಜರುಗಿತು.

ಜಾತ್ರಾ ಮಹೋತ್ಸವ ನಿಮಿತ್ತ ಬೆಳಗಿನ ಜಾವ ಶ್ರೀರಾಮಲಿಂಗೇಶ್ವರ ಮೂರ್ತಿಗೆ ರುದ್ರಾಭಿಷೇಕ ಎಲೆ ಚಟ್ಟು ಸೇವೆ ಸೇರಿದಂತೆ ಅನೇಕ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ಗಂಗಾಸ್ಥಳದಿಂದ ಕಳಸ ಭಾಜಾ ಬಜಂತ್ರಿಯೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನ ತಲುಪಿದ ಬಳಿಕ ದೇವಾಲಯದಲ್ಲಿ ಕಳಸಾರೋಹಣ ನಡೆಯಿತು. ಭಕ್ತರಿಗೆ ಅನ್ನದಾಸೋಹ ಜರುಗಿತು. ಈ ಸಂದರ್ಭದಲ್ಲಿ ಮಹೇಶ ವಸ್ತ್ರದ, ಶಂಕ್ರಯ್ಯಸ್ವಾಮಿ ರಜನಿಕಾಂತ ಶೆಟ್ಟಿ, ಬಾಲಣ್ಣ, ಸಂಜೀವ ಭಮಸಾಗರ ಶಂಕರಗೌಡ ಕಿಡದೂರ, ಬ್ರಹ್ಮರಡ್ಡಿ, ಡಾ.ಮಂಜು ರೇಣುಕಾಚಾರ್ಯ, ಚಂದ್ರಶೇಖರ ಪಾಟೀಲ್, ಎಲ್.ಟಿ ನಾಯ್ಕ, ಬಸವರಾಜ ಚುಕನಟ್ಟಿ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.