ಮುದ್ದಂಡ ಕಪ್ : ಮಾಳೇಟಿರ, ಬಲ್ಲಚಂಡ, ಮೇಕೇರಿರ ತಂಡಕ್ಕೆ ಗೆಲುವು

| Published : Apr 09 2025, 12:31 AM IST

ಮುದ್ದಂಡ ಕಪ್ : ಮಾಳೇಟಿರ, ಬಲ್ಲಚಂಡ, ಮೇಕೇರಿರ ತಂಡಕ್ಕೆ ಗೆಲುವು
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳವಾರ ನಡೆದ ಪಂದ್ಯದಲ್ಲಿ ಮಾಳೇಟಿರ, ಬಲ್ಲಚಂಡ, ಮೇಕೇರಿರ ತಂಡಗಳು ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮುದ್ದಂಡ ಕಪ್ ನ ಮಂಗಳವಾರ ನಡೆದ ಪಂದ್ಯದಲ್ಲಿ ಮಾಳೇಟಿರ, ಬಲ್ಲಚಂಡ, ಮೇಕೇರಿರ ತಂಡಗಳು ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದೆ.

ತೆಕ್ಕಡ ಮತ್ತು ಮಾಳೇಟಿರ (ಕುಕ್ಲೂರು) ನಡುವಿನ ಪಂದ್ಯದಲ್ಲಿ ತಲಾ 1 ಗೋಲು ಸಮಬಲವಾದ ಕಾರಣ ಟೈ ಬ್ರೇಕರ್‌ನಲ್ಲಿ 4-2 ಗೋಲುಗಳ ಅಂತರದಲ್ಲಿ ಮಾಳೇಟಿರ ತಂಡ ಜಯ ದಾಖಲಿಸಿತು. ಬಲ್ಲಚಂಡ ಮತ್ತು ಕಾವಾಡಿಚಂಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಬಲ್ಲಚಂಡ ತಂಡ ಗೆಲುವು ಸಾಧಿಸಿತು.

ಮೇಕೇರಿರ ಮತ್ತು ಕಡೇಮಾಡ ನಡುವಿನ ಪಂದ್ಯದಲ್ಲಿ 5-2 ಗೋಲುಗಳ ಅಂತರದಲ್ಲಿ ಮೇಕೇರಿರ ತಂಡ ಗೆಲುವು ದಾಖಲಿಸಿತು.

ನಂಬುಡಮಾಡ ಮತ್ತು ಉಳ್ಳಿಯಡ ನಡುವಿನ ಪಂದ್ಯದಲ್ಲಿ ವಾಕ್ ಓವರ್ ನಲ್ಲಿ ನಂಬುಡಮಾಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.

ಬಲ್ಲಡಿಚಂಡ ಮತ್ತು ಚೊಟ್ಟೆಯಂಡಮಾಡ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಚೊಟ್ಟೆಯಂಡಮಾಡ ತಂಡ ಗೆಲುವು ಸಾಧಿಸಿತು. ಅಯ್ಯನೆರವಂಡ ಮತ್ತು ತೀತರಮಾಡ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ತಲಾ 1 ಗೋಲುಗಳ ಮೂಲಕ ಸಮಬಲ ತೋರಿದ ಕಾರಣ ನಂತರ ನಡೆದ ಟೈಬ್ರೇಕರ್ ನಲ್ಲಿ 4-3 ಗೋಲುಗಳ ಅಂತರದಲ್ಲಿ ಅಯ್ಯನೆರವಂಡ ಜಯ ಸಾಧಿಸಿತು.

ಅಲ್ಲಪಂಡ ಮತ್ತು ಪಟ್ಟಚೆರುವಂಡ ನಡುವಿನ ಪಂದ್ಯದಲ್ಲಿ 2-2 ಗೋಲುಗಳಿಂದ ಸಮಬಲವಾದ ಕಾರಣ ಟೈ ಬ್ರೇಕರ್‌ನಲ್ಲಿ ಅಲ್ಲಪಂಡ 4-2 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಪಟ್ಟಡ ಮತ್ತು ಬಿದ್ದಂಡ ತಂಡಗಳ ನಡುವಿನ ಪಂದ್ಯದಲ್ಲಿ ತಲಾ 1 ಗೋಲುಗಳ ಸಮಬಲದಿಂದಾಗಿ ನಡೆದ ಟೈ ಬ್ರೇಕರ್‌ನಲ್ಲಿ ಕೂಡ 3-3 ಸಮಬಲ ಎದುರಾಯಿತು. ನಂತರ ನಡೆದ ಸಡನ್ ಡೆತ್‌ನಲ್ಲಿ 2-1 ಗೋಲುಗಳ ಅಂತರದಲ್ಲಿ ಪಟ್ಟಡ ತಂಡ ಜಯ ಸಾಧಿಸಿತು.

ಪಟ್ಟಮಾಡ ಮತ್ತು ಕುಲ್ಲಚಂಡ ನಡುವಿನ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಕುಲ್ಲಚಂಡ ತಂಡ ಜಯ ಸಾಧಿಸಿತು. ಅಜ್ಜಿನಿಕಂಡ ಮತ್ತು ಬೊಳಿಯಾಂಡಿರ ತಂಡಗಳ ನಡುವಿನ ಪಂದ್ಯದಲ್ಲಿ ತಲಾ 1 ಗೋಲುಗಳ ಮೂಲಕ ಎರಡು ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆ ನಂತರ ನಡೆದ ಟೈ ಬ್ರೇಕರ್‌ನಲ್ಲಿ 4-2 ಗೋಲುಗಳ ಅಂತರದಲ್ಲಿ ಬೊಳಿಯಾಂಡಿರ ತಂಡ ವಿಜಯ ಸಾಧಿಸಿತು. ಕೊಂಡಿರ ಮತ್ತು ಪೆಮ್ಮಂಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಪೆಮ್ಮಂಡ ಜಯ ಸಾಧಿಸಿತು.

ಕಂಬೆಯಂಡ ಮತ್ತು ಮಾಚಿಮಂಡ ನುಡವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕಂಬೆಯಂಡ ತಂಡ ಗೆಲುವು ದಾಖಲಿಸಿತು. ಚೀಯಕಪೂವಂಡ ಮತ್ತು ಕಾಂಡಂಡ ನಡುವಿನ ಪಂದ್ಯದಲ್ಲಿ 3-2 ಗೋಲುಗಳ ಅಂತರದಲ್ಲಿ ಕಾಂಡಂಡ ಜಯ ಸಾಧಿಸಿತು. ಚೀರಿಯಂಡ ಮತ್ತು ನುಚ್ಚಿಮಣಿಯಂಡ ನಡುವಿನ ಪಂದ್ಯದಲ್ಲಿ 3-2 ಗೋಲುಗಳ ಅಂತರದಲ್ಲಿ ನುಚ್ಚಿಮಣಿಯಂಡ ಗೆಲುವು ಸಾಧಿಸಿತು.

ಮಲ್ಲಂಡ ಮತ್ತು ಪಾಂಡಿರ (ಗಾಳಿಬೀಡು) ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಮಲ್ಲಂಡ ತಂಡ ಜಯ ಸಾಧಿಸಿತು. ನಾಪನೆರವಂಡ ಮತ್ತು ಮಾಳೆಯಂಡ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಮಾಳೆಯಂಡ ತಂಡ ಜಯ ಸಾಧಿಸಿತು. ಚೆಂಬಂಡ ಮತ್ತು ಮುಂಡಚಾಡಿರ ನಡುವಿನ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಎರಡು ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 6-5 ಗೋಲುಗಳ ಅಂತರದಲ್ಲಿ ಚೆಂಬಂಡ ತಂಡ ಜಯ ಸಾಧಿಸಿತು.