ಸಾರಾಂಶ
ಮುದ್ದಂಡ ಹಾಕಿ ಕಪ್‌ನಲ್ಲಿ ಪುಚ್ಚಿಮಾಡ ತಂಡ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮುದ್ದಂಡ ಹಾಕಿ ಕಪ್ ನಲ್ಲಿ ಪುಚ್ಚಿಮಾಡ ತಂಡ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು.ಪುಚ್ಚಿಮಾಡ ಮತ್ತು ಮಂಡೀರ (ಮಾದಪುರ) ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ಪುಚ್ಚಿಮಾಡ ತಂಡ 3 ಗೋಲುಗಳನ್ನು ಬಾರಿಸಿ ಮಂಡೀರ ತಂಡವನ್ನು ಪರಾಭವಗೊಳಿಸಿತು. ಪುಚ್ಚಿಮಾಡ ತಂಡದ ಯಶ್ವಿನ್ ಗಣಪತಿ 2 ಹಾಗೂ ಭವನ್ ಬೋಪಣ್ಣ 1 ಗೋಲು ದಾಖಲಿಸಿದರು.
ಮುಕ್ಕಾಟಿರ (ಮುವತ್ತೊಕ್ಲು) ಮತ್ತು ಚೆಯ್ಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆಯ್ಯಂಡ ತಂಡ ಭರ್ಜರಿ 5 ಗೋಲುಗಳನ್ನು ದಾಖಲಿಸುವ ಮೂಲಕ ಗೆಲುವು ಸಾಧಿಸಿತು. ಪುಚ್ಚಿಮಂಡ ಮತ್ತು ಕಾಂಗಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಾಂಗಂಡ ತಂಡ 2-0 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು.ಕುಪ್ಪಂಡ (ನಾಂಗಲ) ಮತ್ತು ಬೊಳ್ಳೆಪಂಡ ತಂಡಗಳ ನಡುವಿನ ಪಂದ್ಯಾವಳಿಯಲ್ಲಿ ಕುಪ್ಪಂಡ ತಂಡ 2-1 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಮರ್ಚಂಡ ಮತ್ತು ಮಾಣೀರ ತಂಡಗಳ ನಡುವಿನ ಪಂದ್ಯಾಟದಲ್ಲಿ 5-0 ಗೋಲುಗಳ ಅಂತರದಲ್ಲಿ ಮರ್ಚಂಡ ತಂಡ ಗೆಲುವು ಪಡೆಯಿತು.ಉಳಿದಂತೆ ಪಳೆಯಂಡ, ನಂದೇಟಿರ, ದಾಸಂಡ, ಬೊಪ್ಪಂಡ, ಮೈನಪಂಡ, ಮಲ್ಲಮಾಡ, ತೆನ್ನಿರಾ, ಮಾದಂಡ, ಚಂಗುಲಂಡ, ಮೆಚಂಡ, ವಾಟೇರಿರ, ಕೆಚ್ಚೆಟೀರ (ಕಡಗದಾಳು) ತಂಡಗಳು ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.