ಮಣೂರು ದೇಗುಲದಿಂದ ಮುದ್ದು ಕೃಷ್ಣ ಸ್ಪರ್ಧೆ

| Published : Aug 26 2024, 01:38 AM IST

ಸಾರಾಂಶ

ಮಣೂರು ಶ್ರೀ ಮಹಾಲಿಂಗೇಶ್ವರ ದೇಗುಲದ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶ್ರೀ ರಾಮಪ್ರಸಾದ ಅಂಗವಾಡಿ ನೇತೃತ್ವದಲ್ಲಿ ಮುದ್ದು ಶ್ರೀಕೃಷ್ಣ ಸ್ಪರ್ಧಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕೋಟ

ಶ್ರೀ ಕೃಷ್ಣ ಜನ್ಮಾಷ್ಟಮಿ ಮುಂತಾದ ಹಬ್ಬಗಳ ಸಂದರ್ಭದಲ್ಲಿ ನಡೆಸಲಾಗುವ ಸಾಂಸ್ಕೃತಿಕ, ಧಾರ್ಮಿಕ ಸ್ಪರ್ಧೆಗಳು ಮಕ್ಕಳಲ್ಲಿ ಧಾರ್ಮಿಕ ಚಿಂತನೆ ಬೆಳೆಯಲು ಸಹಕಾರಿ ಎಂದು ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಎಚ್. ಕುಂದರ್ ಹೇಳಿದರು.

ಅವರು ಇಲ್ಲಿನ ಮಣೂರು ಶ್ರೀ ಮಹಾಲಿಂಗೇಶ್ವರ ದೇಗುಲದ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶ್ರೀ ರಾಮಪ್ರಸಾದ ಅಂಗವಾಡಿ ನೇತೃತ್ವದಲ್ಲಿ ಆಯೋಜಿಸಲಾದ ಮುದ್ದು ಶ್ರೀಕೃಷ್ಣ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಲ್ಲಿ ಕ್ರೀಯಾಶೀಲತೆಗೆ ಇಂಥಹ ಕಾರ್ಯಕ್ರಮಗಳು ವೇದಿಕೆಯನ್ನು ಕಲ್ಪಿಸುತ್ತದೆ ಎಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.ಸ್ಪರ್ಧಾ ಕಾರ್ಯಕ್ರಮದಲ್ಲಿ ೧೫೦ಕ್ಕೂ ಅಧಿಕ ಪುಟಾಣಿಗಳು ಭಾಗವಹಿಸಿದ್ದರು. ವಿಜೇತ ಪುಟಾಣಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಸ್ನೇಹಕೂಟ ಮಣೂರು ಸಂಚಾಲಕಿ ಭಾರತಿ ವಿ. ಮಯ್ಯ, ಸಾಂಸ್ಕೃತಿಕ ಚಿಂತಕಿ ಪ್ರತಿಭಾ ಎಸ್. ಕುಂದರ್, ನಮೃತಾ ಪೈ, ಕೋಟದ ಪಂಚವರ್ಣದ ಸದಸ್ಯ ದಿನೇಶ್ ಆಚಾರ್, ದೇಗುಲದ ಟ್ರಸ್ಟಿ ದಿವ್ಯ ಪ್ರಭು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕೋಟತಟ್ಟು ಕಲ್ಮಾಡಿ ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮೀ ನಿರೂಪಿಸಿದರು. ಶ್ರೀ ರಾಮಪ್ರಸಾದ ಅಂಗನವಾಡಿ ಕಾರ್ಯಕರ್ತೆ ನಿರ್ಮಲಾ ಉರಾಳ ವಂದಿಸಿದರು.