ಮೂಡಿಗೆರೆ: 231 ಮತಗಟ್ಟೆ, 24 ಸೂಕ್ಷ್ಮ, 5 ಅತಿಸೂಕ್ಷ್ಮ,

| Published : Apr 26 2024, 12:45 AM IST / Updated: Apr 26 2024, 12:46 AM IST

ಮೂಡಿಗೆರೆ: 231 ಮತಗಟ್ಟೆ, 24 ಸೂಕ್ಷ್ಮ, 5 ಅತಿಸೂಕ್ಷ್ಮ,
Share this Article
  • FB
  • TW
  • Linkdin
  • Email

ಸಾರಾಂಶ

ಮೂಡಿಗೆರೆ ತಾಲೂಕಿನಲ್ಲಿ 231 ಮತಗಟ್ಟೆಗಳಿಗೆ ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿ ಭದ್ರತೆಗೆ ಶಸ್ತ್ರಸಜ್ಜಿತ ಪ್ಯಾರಾ ಮಿಲಟರಿ, ಸಿಆರ್‌ಪಿಎಫ್, ಕೆಎಸ್‌ಆರ್‌ಪಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಲ್ಲಾ ಮತಗಟ್ಟೆಗಳಿಗೂ ಇವಿಎಂ ಯಂತ್ರಗಳನ್ನು ಗುರುವಾರ ಬಿಗಿ ಭದ್ರತೆಯಲ್ಲಿ ಚುನಾವಣಾ ಸಿಬ್ಬಂದಿ ಸಾಗಿಸಿದರು.

ಶಸ್ತ್ರಸಜ್ಜಿತ ಪ್ಯಾರಾ ಮಿಲಿಟರಿ, ಸಿಆರ್‌ಪಿಎಫ್, ಕೆಎಸ್‌ಆರ್‌ಪಿ ಸಿಬ್ಬಂದಿ ಭದ್ರತೆ

ಕನ್ನಡಪ್ರಭ ವಾರ್ತೆ, ಮೂಡಿಗೆರೆತಾಲೂಕಿನಲ್ಲಿ 231 ಮತಗಟ್ಟೆಗಳಿಗೆ ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿ ಭದ್ರತೆಗೆ ಶಸ್ತ್ರಸಜ್ಜಿತ ಪ್ಯಾರಾ ಮಿಲಟರಿ, ಸಿಆರ್‌ಪಿಎಫ್, ಕೆಎಸ್‌ಆರ್‌ಪಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಲ್ಲಾ ಮತಗಟ್ಟೆಗಳಿಗೂ ಇವಿಎಂ ಯಂತ್ರಗಳನ್ನು ಗುರುವಾರ ಬಿಗಿ ಭದ್ರತೆಯಲ್ಲಿ ಚುನಾವಣಾ ಸಿಬ್ಬಂದಿ ಸಾಗಿಸಿದರು.231 ಮತಗಟ್ಟೆ ಪೈಕಿ 24 ಸೂಕ್ಷ್ಮ, 5 ಅತಿ ಸೂಕ್ಷ್ಮ, 202 ಸಾಮಾನ್ಯ ಮತಗಟ್ಟೆ ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಯಲ್ಲಿ ಶಸ್ತ್ರಸಜ್ಜಿತ ಪ್ಯಾರಾ ಮಿಲಿಟರಿ, ಸಿಆರ್‌ಪಿಎಫ್, ಕೆಎಸ್‌ಆರ್‌ಪಿ ಸಿಬ್ಬಂದಿ ಸಾಮಾನ್ಯ ಮತಗಟ್ಟೆಗಳಲ್ಲಿ ಸೂಕ್ತ ಭದ್ರತೆ ಕೈಗೊಳ್ಳಲಾಗಿದೆ.

ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಸ್ಟ್ರಾಂಗ್‌ ರೂಂನಲ್ಲಿದ್ದ ಮತ ಯಂತ್ರಗಳನ್ನು ಅಧಿಕಾರಿಗಳು ಎಲ್ಲಾ ಮತಗಟ್ಟೆಗಳಿಗೂ ಕಳುಹಿಸಿಕೊಟ್ಟರು. ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು ಮಾಕ್ಸಿಕ್ಯಾಬ್, ಬಾಡಿಗೆ ಜೀಪು ಮತ್ತು ಕಾರುಗಳಲ್ಲಿ ಇವಿಎಂ ಯಂತ್ರವನ್ನು ಸಿಬ್ಬಂದಿ ಮತಗಟ್ಟೆಗೆ ಸಾಗಿಸಿದರು.

ಎಲ್ಲಾ ಮತಗಟ್ಟೆಗಳ 100 ಮೀಟರ್ ವ್ಯಾಪ್ತಿಯಲ್ಲಿ ರಾಜಕೀಯ ಪಕ್ಷಗಳು ಪ್ರಚಾರಕ್ಕೆ ಹಾಗೂ ಮತಗಟ್ಟೆಯಿಂದ 200 ಮೀಟರ್ ವ್ಯಾಪ್ತಿಯಲ್ಲಿ ವಾಹನ ಪ್ರವೇಶ ನಿಷೇಧವಿದೆ. ಮತಗಟ್ಟೆ ಆವರಣದಲ್ಲಿ ರಾಜಕೀಯ ಪಕ್ಷಗಳು ಒಂದು ಟೇಬಲ್ ಮತ್ತು ಎರಡು ಕುರ್ಚಿಗಳನ್ನು ಮಾತ್ರಇಟ್ಟು ಮತದಾರರ ಪಟ್ಟಿಯಲ್ಲಿರುವ ಕ್ರಮಸಂಖ್ಯೆ ಬರೆದುಕೊಡಲು ಅವಕಾಶವಿದೆ. ಅಭ್ಯರ್ಥಿಗಳ ಹೆಸರು ಪಕ್ಷದ ಚಿಹ್ನೆಇರುವ ಚೀಟಿಗಳನ್ನು ಮತಗಟ್ಟೆಯೊಳಗೆ ಕೊಂಡೊಯ್ಯಲು ಅವಕಾಶವಿಲ್ಲ.25-ಎಂಡಿಜಿ-1ಮೂಡಿಗೆರೆ ಪಟ್ಟಣದ ಡಿಎಸ್ ಬಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿರಿಸಿರುವ ಮತಯಂತ್ರಗಳನ್ನು ಮತಗಟ್ಟೆಗೆ ಸಾಗಿಸಲು ಸಜ್ಜಾಗಿನಿಂತಿದ್ದ ವಾಹನಗಳು.