ಸಾರಾಂಶ
ಉಳ್ಳಾಲ ತಾಲೂಕು ಮುಡಿಪು ಶ್ರೀ ಭಾರತೀ ಶಾಲೆಯಿಂದ ವಯೋನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕ ಕೆ.ರಾಮಕೃಷ್ಣ ಭಟ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಶಾಲಾವರಣದಲ್ಲಿ ಭಾನುವಾರ ನೆರವೇರಿತು.
ಉಳ್ಳಾಲ: ಮುಡಿಪು ಶ್ರೀ ಭಾರತೀ ಶಾಲೆಯಲ್ಲಿ ಶಿಕ್ಷಕರಾಗಿ ಹಾಗೂ ಸುದೀರ್ಘ ಅವಧಿಗೆ ಮುಖ್ಯ ಶಿಕ್ಷಕರಾಗಿ 35 ವರ್ಷ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ಕೆ.ರಾಮಕೃಷ್ಣ ಭಟ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಶಾಲಾವರಣದಲ್ಲಿ ಭಾನುವಾರ ನೆರವೇರಿತು.ಹಳೆ ವಿದ್ಯಾರ್ಥಿ ಸಂಘ ಹಾಗೂ ಶಾಲಾಡಳಿತ ಮಂಡಳಿ ಹಾಗೂ 1992-93ನೇ ಸಾಲಿನ ಹಳೆ ವಿದ್ಯಾರ್ಥಿಗಳ ಬಳಗದ ವತಿಯಿಂದ ರಾಮಕೃಷ್ಣ ಭಟ್-ಸುಜಯಾ ದಂಪತಿಯನ್ನು ಸನ್ಮಾನಿಸಲಾಯಿತು.ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ನಿಶ್ಚಲ್ ಡಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಉದ್ಯಮಿ ರಾಧಾಕೃಷ್ಣ ರೈ ಉಮಿಯ ಪ್ರಾಸ್ತಾವಿಕ ಮಾತನಾಡಿ, ಸನ್ಮಾನ ನೆರವೇರಿಸಿದರು.
ಶಾಲಾ ಸಂಚಾಲಕ ಸುಬ್ರಹ್ಮಣ್ಯ ಭಟ್, ನಿವೃತ್ತ ಶಿಕ್ಷಕ ರಾಮರಾವ್, ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷರಾಗಿದ್ದ ಉಮೇಶ್ ಕೆ.ಆರ್., ಹಿರಿಯ ವಿದ್ಯಾರ್ಥಿ ರಂಗನಾಥ ಕೊಂಡೆ, ಶಿಕ್ಷಕರಾಗಿದ್ದ ವಿಠಲ್ ವೀರಪ್ಪ ತಳವಾರ್, ಮಹಾಲಿಂಗೇಶ್ವರ್ ಎನ್., ಹರೀಶ್ ಕುಮಾರ್ ಎನ್., ಕೆ.ಡಿ.,ಲಮಾಣಿ, ಹಿರಿಯ ಶಿಕ್ಷಕಿ ಶಶಿಕಲಾ, ಶಂಕರನಾರಾಯಣ ಭಟ್, ಗಣಪತಿ ಭಟ್ ಮತ್ತಿತರರು ಪಾಲ್ಗೊಂಡರು.ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ಸ್ವಾಗತಿಸಿದರು. ಜಯಂತಿ ಶೇಟ್ ಪ್ರಾರ್ಥಿಸಿದರು. ಸುರೇಖಾ ಯಳವಾರ ನಿರೂಪಿಸಿದರು. ವಿಠಲ್ ವೀರಪ್ಪ ತಳವಾರ್ ಹಾಗೂ ರೇಖಾ ಸಿಎಚ್ ಸನ್ಮಾನ ಪತ್ರ ವಾಚಿಸಿದರು.
ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಶಾಲಾ ಶಿಕ್ಷಕರು, ಬೋಧಕೇರ ಸಿಬ್ಬಂದಿ, ಪೋಷಕರು ಹಾಜರಿದ್ದರು.