ಸಾರಾಂಶ
ಚೇರಂಬಾಣೆ ಅರುಣ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಭಾಗಮಂಡಲ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕೊಟ್ಟೂರು ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಭಾಗಮಂಡಲ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕೊಟ್ಟೂರು ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಪಿ. ಎನ್ ಜೀವ ನಾಣಯ್ಯ 400 ಮೀಟರ್ ಓಟದಲ್ಲಿ ಪ್ರಥಮ, 800 ಮೀಟರ್ ಓಟದಲ್ಲಿ ಆದರ್ಶ್ ಕೆ. ಬಿ ದ್ವಿತೀಯ, 400 ಮೀಟರ್ ಓಟದಲ್ಲಿ ಯಶ್ವಿನ್ ಕೆ. ಎಲ್ ಎರಡನೇ ಸ್ಥಾನ, ಬಾಲಕರ 4x400 ರೀಲೆಯಲ್ಲಿ ದ್ವಿತೀಯ ಸ್ಥಾನ, ಭಾರದ ಗುಂಡು ಹಾಗೂ ತಟ್ಟೆ ಎಸೆತದಲ್ಲಿ ಪಿ. ಸಿ ಶರಣ್ ಚಂಗಪ್ಪ ಪ್ರಥಮ ಸ್ಥಾನ, ಜಾವೇಲಿನ್ ಎಸೆತದಲ್ಲಿ ಆಶಿಕ್ ಮಂದಣ್ಣ ಕೆ. ಪಿ ಪ್ರಥಮ ಸ್ಥಾನ, ಬಾಲಕಿಯರ ಭಾರದ ಗುಂಡು ಎಸೆತದಲ್ಲಿ ಚಸ್ಮಿತಾ ಪ್ರಥಮ, ತಟ್ಟೆ ಎಸೆತದಲ್ಲಿ ಶಿವಾನಿ ಕೆ. ಸಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.ಬಾಲಕಿಯರ 200 ಮೀಟರ್ ಓಟದಲ್ಲಿ ವರುಣಿಕ ಪಿ. ಎಂ. ಮೂರನೇ, ಬಾಲಕರ ಫುಟ್''''''''ಬಾಲ್ ಹಾಗೂ ಕಬಡ್ಡಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ತಾಲೂಕು ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಈ ಶಾಲೆಯ ವನ್ಯಕೃಷ್ಣ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿ ಸಾಧನೆ ಮಾಡಿದ್ದಾರೆ.
ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಮುಖ್ಯ ಶಿಕ್ಷಕರಾದ ಕುದುಪಜೆ ಕವನ್ ಕುಮಾರ್, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕಿಯಾದ ಸ್ವರೂಪ್ ಕೆ. ಬಿ., ದೈಹಿಕ ಶಿಕ್ಷಕಿಯಾದ ಸೀಮಾ ಕರವಂಡ, ತಂಡದ ವ್ಯವಸ್ಥಾಪಕರಾದ ಸಜನಿ ಎ. ಟಿ., ಅನಿಲ್ ಯು. ಎಂ. ಕ್ರೀಡಾ ಮಾರ್ಗದರ್ಶನ ನೀಡಿದ್ದರು.