ಸಾರಾಂಶ
ಬೆಳಗ್ಗೆ 6ಕ್ಕೆ ಶ್ರೀ ದೇವರ ನೈರ್ಮಲ್ಯ ಪೂಜೆಯ ನಂತರ ಋಷಿ ಪೂಜನೆ, ಉಪಾಕರ್ಮ ಹವನ ಹಾಗೂ ಶ್ರೀ ವೆಂಕಟರಮಣ ಹಾಗೂ ಪರಿವಾರ ದೇವರಿಗೆ ನೂತನ ಯಜ್ಞೋಪವೀತ ಸಮರ್ಪಣೆ ನಡೆಯಿತು. ಬಳಿಕ ಸಮಾಜ ಬಾಂಧವರಿಗೆ ಯಜ್ಞೋಪವೀತ ಧಾರಣೆ, ವಿತರಣೆ ನಡೆಯಿತು. ಪ್ರಧಾನ ಅರ್ಚಕರಾದ ಹರೀಶ್ ಭಟ್ ಹಾಗೂ ಪವನ್ ಭಟ್ ಸಹಿತ ಪರಿವಾರ ಅರ್ಚಕರು ಪಾಲ್ಗೊಂಡರು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಹನುಮಂತ ದೇವಸ್ಥಾನದಲ್ಲಿ ಸೋಮವಾರ ಋಗುಪಾಕರ್ಮ ಆಚರಿಸಲಾಯಿತು.ಬೆಳಗ್ಗೆ 6ಕ್ಕೆ ಶ್ರೀ ದೇವರ ನೈರ್ಮಲ್ಯ ಪೂಜೆಯ ನಂತರ ಋಷಿ ಪೂಜನೆ, ಉಪಾಕರ್ಮ ಹವನ ಹಾಗೂ ಶ್ರೀ ವೆಂಕಟರಮಣ ಹಾಗೂ ಪರಿವಾರ ದೇವರಿಗೆ ನೂತನ ಯಜ್ಞೋಪವೀತ ಸಮರ್ಪಣೆ ನಡೆಯಿತು. ಬಳಿಕ ಸಮಾಜ ಬಾಂಧವರಿಗೆ ಯಜ್ಞೋಪವೀತ ಧಾರಣೆ, ವಿತರಣೆ ನಡೆಯಿತು. ಪ್ರಧಾನ ಅರ್ಚಕರಾದ ಹರೀಶ್ ಭಟ್ ಹಾಗೂ ಪವನ್ ಭಟ್ ಸಹಿತ ಪರಿವಾರ ಅರ್ಚಕರು ಪಾಲ್ಗೊಂಡರು.
ಅಶ್ವತ್ಥಪುರದಲ್ಲಿ ಋಗುಪಾಕರ್ಮ :ಶ್ರೀಕ್ಷೇತ್ರ ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಆಶ್ರಯದಲ್ಲಿ ಸೋಮವಾರ ಋಗುಪಾಕರ್ಮ ನಡೆಯಿತು.
ಪುರೋಹಿತರಾದ ಪಟ್ಟೆ ರಂಗನಾಥ ಭಟ್, ಪಟ್ಟೆ ಚಂದ್ರಮೌಳೀಶ್ವರ ಭಟ್, ಸಂತೋಷ ಭಟ್ ಶಾಖಾಪುರ ಹಾಗೂ ಸಂದೇಶ ಭಟ್ ಮಾಯಣ ಧಾರ್ಮಿಕ ವಿಧಿ ನೆರವೇರಿಸಿದರು. ನೂತನ ಉಪನೀತ ವಟುಗಳಿಗೆ ನೂತನ ಉಪಾಕರ್ಮ ನಡೆಸಲಾಯಿತು.ಕಾಂತಾವರ ವಿಶ್ವಕರ್ಮ ಸಂಘದಲ್ಲಿ ಉಪಾಕರ್ಮ ಹೋಮ ಜರಗಿತು.
ಕಾಂತಾವರ ಶ್ರೀ ನಾಗಲಿಂಗ ಸ್ವಾಮಿ ಕೃಪಾ ವಿಶ್ವಕರ್ಮ ಸಮಾಜ ಸಂಘದ ಸಭಾಭವನದಲ್ಲಿ ಉಪಾಕರ್ಮ ಹೋಮವು ಸೋಮವಾರ ಜರಗಿತು.ಪುರೋಹಿತ್ ದಿನೇಶ ಆಚಾರ್ಯ ವಿಧಿವಿಧಾನಗಳನ್ನು ನಡೆಸಿದರು.
ಸಂಘದ ಅಧ್ಯಕ್ಷರು,ಪದಾಧಿಕಾರಿಗಳು, ಸದಸ್ಯರು , ಸಮಾಜ ಬಾಂದವರು ಯಜ್ಞೋಪವೀತ ಧಾರಣೆಯಲ್ಲಿ ಭಾಗವಹಿಸಿದ್ದರು.ಮೂಡುಬಿದಿರೆ ಗುರುಮಠ ಕಾಳಿಕಾಂಬ ದೇವಸ್ಥಾನದಲ್ಲಿ ನಡೆದ ಉಪಾಕರ್ಮ ಹವನ, ಸಮಾಜ ಬಾಂಧವರು ಯಜ್ಞೋಪವೀತ ಧಾರಣೆಯಲ್ಲಿ ಭಾಗವಹಿಸಿದ್ದರು.