ಚಿಂಚೋಳಿ ತಾಲೂಕಿನಲ್ಲಿ ಮೊಹರಂ ಆಚರಣೆ

| Published : Jul 07 2025, 11:48 PM IST

ಸಾರಾಂಶ

ತಾಲೂಕಿನ ಅನೇಕ ಗ್ರಾಮಗಳಲ್ಲಿ ಹಿಂದು-ಮುಸ್ಲಿಂ ಭಾವೈಕ್ಯತೆ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಭಕ್ತಿ-ಶ್ರದ್ಧೆಯಿಂದ ಸಡಗರದಿಂದ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿಂಚೋಳಿ

ತಾಲೂಕಿನ ಅನೇಕ ಗ್ರಾಮಗಳಲ್ಲಿ ಹಿಂದು-ಮುಸ್ಲಿಂ ಭಾವೈಕ್ಯತೆ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಭಕ್ತಿ-ಶ್ರದ್ಧೆಯಿಂದ ಸಡಗರದಿಂದ ಆಚರಿಸಲಾಯಿತು.

ಪಟ್ಟಣದ ಬಡಿದರ್ಗಾದಲ್ಲಿ ಹೈದ್ರಾಬಾದಿನ ನಿಜಾಮನ ದೊರೆ ಆಡಳಿತದಿಂದಲೂ ಆಚರಿಸಿಕೊಂಡು ಬರುವ ಐತಿಹಾಸಿಕ ಚಂದಾಹುಸೇನ, ಹಸೇನ ಮತ್ತು ಬೀಬೀ ಫಾತಿಮಾ ಅಲಾಯಿ ಪೀರಗಳನ್ನು ಐದು ದಿನಗಳಿಂದ ಪ್ರತಿಪ್ಠಾಪಿಸಿ ಭಾನುವಾರ ಅಲಾಯಿ ಪೀರಗಳನ್ನು ಮೊಹರಂ ಕೊನೆಯ ದಿನ ಮೊಹರಂ ಹಬ್ಬದಂದು ಬಡಿದರ್ಗಾದಲ್ಲಿ ನಿಮಾಹೊಸಳ್ಳಿ,ಐನೋಳಿ ಗ್ರಾಮದ ಯುವಕರು ಹುಲಿ ವೇಷ ಧರಿಸಿ ಕುಣಿದು ಸಂಭ್ರಮಿಸಿದರು. ಚಂದಾಹುಸೇನ ಮತ್ತು ಹಸೇನಹುಸೇನ ಪೀರಗಳಿಗೆ ಹೂವುಮಾಲೆ ಹಾಕಿ ಕೊಬ್ಬರಿ ಉಡಿಅಕ್ಕಿ ತುಂಬಿದ ನಂತರ ಪೀರಗಳ ಮೇಲೆ ವಿವಿಧ ಗ್ರಾಮಗಳಿಂದ ಆಗಮಿಸಿದ ಜನರು ನಾಣ್ಯ ಮತ್ತು ಹೂವು ಚೆಲ್ಲಿ ಭಕ್ತಿ ಅರ್ಪಿಸಿದರು. ಚಂದಾಹುಸೇನ ಅಲಾಯಿ ಪೀರ ಮೇಲೆ ಜನರು ಹೂವು, ನಾಣ್ಯ, ಕೊಬ್ಬರಿ ಎಸೆದರು.

ಬಡಿದರ್ಗಾದ ಸಜ್ಜಾದೇ ನಶೀನ ಪೀರ ಸೈಯದ ಅಕಬರ ಹುಸೇನಿ ಇವರ ನೇತೃತ್ವದಲ್ಲಿ ಮೊಹರಂ ಆಚರಣೆ ನಡೆಯಿತು. ಅಬ್ದುಲ್ಲ ಬಾಸೀತ, ಕೆ.ಎಂ. ಬಾರಿ, ಗೋಪಾಲರಾವ ಕಟ್ಟಿಮನಿ, ಎಂ.ಕೆ. ಮಗದೂಮ, ಹಸೇನ ಹಾಶ್ಮಿ, ಎಸ್.ಕೆ.ಮುಕ್ತಾ. ಮೈನೋದ್ದೀನ್ ಬಗಲಿ, ಮಸ್ತಾನ ಇಟಲಿ,ಶಬ್ಬೀರ ಅಹಮ್ಮದ್‌, ಮಹಮ್ಮದ್‌ ಅಕರಬರ ಇದ್ದರು. ಸಿಪಿಐ ಕಪಿಲದೇವ, ಪಿಎಸ್‌ಐ ಗಂಗಮ್ಮ ಜಿನಿಕೇರಿ ಸೂಕ್ತ ಪೋಲಿಸ ಬಂದೋಬಸ್ತ ವ್ಯವಸ್ಥೆಗೊಳಿಸಿದ್ದರು.