ಹುಲಿಗೆಮ್ಮದೇವಿ ದರ್ಶನ ಪಡೆದ ಮುಜರಾಯಿ ಸಚಿವರು

| Published : Dec 20 2023, 01:15 AM IST

ಸಾರಾಂಶ

ಪುರೋಹಿತರಾದ ಗೋಪಾಲಕೃಷ್ಣ ಜೋಶಿ, ಶ್ರೀನಿವಾಸ ಶರ್ಮಾ ಮತ್ತು ನಾಗರಾಜ ಭಟ್ ವಿಶೇಷ ಪೂಜೆ ನೆರವೇರಿಸಿ ಸಚಿವರಿಗೆ ಹಾಗೂ ಶಾಸಕರಿಗೆ ಹೂವು, ಪ್ರಸಾದ ನೀಡಿದರು.

ಕನ್ನಡಪ್ರಭ ವಾರ್ತೆ ಕೊಪ್ಪಳ

ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಂಗಳವಾರ ತಾಲೂಕಿನ ಇತಿಹಾಸ ಪ್ರಸಿದ್ಧ ಹುಲಿಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದುಕೊಂಡರು.

ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಇದೇ ವೇಳೆ ಸಚಿವರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಪುರೋಹಿತರಾದ ಗೋಪಾಲಕೃಷ್ಣ ಜೋಶಿ, ಶ್ರೀನಿವಾಸ ಶರ್ಮಾ ಮತ್ತು ನಾಗರಾಜ ಭಟ್ ವಿಶೇಷ ಪೂಜೆ ನೆರವೇರಿಸಿ ಸಚಿವರಿಗೆ ಹಾಗೂ ಶಾಸಕರಿಗೆ ಹೂವು, ಪ್ರಸಾದ ನೀಡಿದರು.

ಈ ಸಂದರ್ಭದಲ್ಲಿ ಮುಜರಾಯಿ ಇಲಾಖೆಯ ಆಯುಕ್ತ ಬಸವರಾಜೇಂದ್ರ ಎಚ್.,ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ, ಬಸವರಾಜ ಹಿಟ್ನಾಳ, ತಹಸೀಲ್ದಾರ್‌ ವಿಠ್ಠಲ್ ಚೌಗಲಾ, ದೇವಾಲಯದ ಆಡಳಿತಾಧಿಕಾರಿ ಅರವಿಂದ ಸುತಗುಂಡಿ, ತಾಪಂ ಇಓ ದುಂಡಪ್ಪ ತುರಾದಿ, ಪೊಲೀಸ್ ಅಧಿಕಾರಿ ಸಿದ್ದಲಿಂಗಪ್ಪಗೌಡ ಪಾಟೀಲ, ಮಹಾಂತೇಶ ಸಜ್ಜನ, ಹುಲಗಿ ಗ್ರಾಪಂ ಅಧ್ಯಕ್ಷೆ ನೀಲಮ್ಮ ಗುಂಗಾಡಿ, ಉಪಾಧ್ಯಕ್ಷ ಸಯ್ಯದ ನ್ಯಾಮತಲಿ, ಸದಸ್ಯರಾದ ಕಿಶೋರ, ಖಾಜಾವಲಿ ಜವಳಿ, ರತ್ನಕಲಾ ಕೇಶವರಾವ್, ಪಿಡಿಓ ಗುರುದೇವಮ್ಮ ಸೇರಿದಂತೆ ಇತರರು ಇದ್ದರು.