ಇಂದು ಮುಳಿಯ ಜ್ಯುವೆಲ್ಸ್ ನೂತನ ಲಾಂಛನ, ಬ್ಯ್ರಾಂಡ್ ಅಂಬಾಸಿಡರ್ ಪರಿಚಯ, ಬೆಳ್ಳಿ ಶೋರೂಂ ಅನಾವರಣ

| Published : May 02 2025, 12:12 AM IST

ಇಂದು ಮುಳಿಯ ಜ್ಯುವೆಲ್ಸ್ ನೂತನ ಲಾಂಛನ, ಬ್ಯ್ರಾಂಡ್ ಅಂಬಾಸಿಡರ್ ಪರಿಚಯ, ಬೆಳ್ಳಿ ಶೋರೂಂ ಅನಾವರಣ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗಿನ ಹೆಸರಾಂತ ಚಿನ್ನದ ಮಳಿಗೆ ಮುಳಿಯ ಜ್ಯುವೆಲ್ಸ್‌ನ ನೂತನ ಲಾಂಛನ ಬಿಡುಗಡೆ, ಬ್ರ್ಯಾಂಡ್‌ ಅಂಬಾಸಿಡರ್‌ ಪರಿಚಯ ಹಾಗೂ ವಿಶಾಲ ಬೆಳ್ಳಿ ಶೋರೂಂ ಅನಾವರಣ ಮೇ 2ರಂದು ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗಿನ ಹೆಸರಾಂತ ಚಿನ್ನದ ಮಳಿಗೆ ಮುಳಿಯ ಜ್ಯುವೆಲ್ಸ್ ನ ನೂತನ ಲಾಂಛನ ಬಿಡುಗಡೆ, ಬ್ಯ್ರಾಂಡ್ ಅಂಬಾಸಿಡರ್ ಪರಿಚಯ ಹಾಗೂ ವಿಶಾಲ ಬೆಳ್ಳಿ ಶೋರೂಂ ಅನಾವರಣ ಮೇ 2ರಂದು ನಡೆಯಲಿದೆ.

ಈ ಬಗ್ಗೆ ನಗರದ ಸುದ್ದಿಗೋಷ್ಠಿಯಲ್ಲಿ ಮುಳಿಯ ಸಂಸ್ಥೆಯ ಚೇರ್ಮನ್ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಮುಳಿಯ ಬ್ಯ್ರಾಂಡ್ ಅಂಬಾಸಿಡರ್, ಖ್ಯಾತ ಚಿತ್ರ ನಟ ರಮೇಶ್ ಅರವಿಂದ್ ಅವರು, ಶುಕ್ರವಾರ ಬೆಳಗ್ಗೆ 10.55ರ ನಂತರ ಹೊಸ ಶೋರೂಂ ಹಾಗೂ ಲೋಗೋ ಅನಾವರಣ ಮಾಡಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಸಹಕರಿಸಬೇಕು ಎಂದು ತಿಳಿಸಿದರು.

ಇದಕ್ಕೂ ಮುನ್ನ ಪವಿತ್ರ ಕ್ಷೇತ್ರ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿ ಕಾವೇರಿ ತೀರ್ಥದೊಂದಿಗೆ ಮಡಿಕೇರಿಯ ಮುಳಿಯ ಶೋರೂಂಗೆ ಆಗಮಿಸಿ ತುಳಸಿ ಗಿಡಕ್ಕೆ ಕಾವೇರಿ ತೀರ್ಥ ಹಾಕುವ ಮೂಲಕ ಶೋರೂಂ ಉದ್ಘಾಟಿಸಲಿದ್ದಾರೆ.

ನಕಲಿ ಡೈಮಂಡ್ ಹಾಗೂ ಚಿನ್ನ ಪರೀಕ್ಷೆಯ ಹೊಸ ಯಂತ್ರಗಳನ್ನು ಅನಾವರಣ ಮಾಡಲಿದ್ದಾರೆ. ಹಲವು ಹೊಸತನದೊಂದಿಗೆ, ಹೊಸ ಲಾಂಛನದೊಂದಿಗೆ ಮುಳಿಯ ಸೇವೆಗೆ ಸಿದ್ಧಗೊಂಡಿದ್ದು, ಇನ್ನಷ್ಟು ಹೊಸತನ, ಸೇವೆಯೊಂದಿಗೆ ಮುಳಿಯ ಇರಲಿದೆ ಎಂದು ತಿಳಿಸಿದರು.

ಮುಳಿಯ ಜ್ಯುವೆಲ್ಸ್ ನ ಮಡಿಕೇರಿ ಶಾಖಾ ಪ್ರಬಂಧಕರಾದ ತೀತಮಾಡ ಸೋಮಣ್ಣ, ಮಾರ್ಕೆಟಿಂಗ್ ಮ್ಯಾನೇಜರ್ ಸಂಜೀವ ಇದ್ದರು.