ಮೂಲ್ಕಿ ಸೀಮೆ ಅರಸು ಕಂಬಳ ಸಮಿತಿ ಸಭೆ

| Published : Nov 11 2024, 11:46 PM IST

ಸಾರಾಂಶ

ಮೂಲ್ಕಿ ಸೀಮೆಯ ಒಂಭತ್ತು ಮಾಗಣೆಯ ಮೂಲ್ಕಿ ಸೀಮೆ ಅರಸು ಕಂಬಳವು ಡಿ. 22ರಂದು ನಡೆಯಲಿದ್ದು ಪೂರ್ವಭಾವಿಯಾಗಿ ಕಂಬಳ ಸಮಿತಿಯ ಸಭೆಯು ಸಮಿತಿಯ ಅಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಕೊಲ್ನಾಡು ಗುತ್ತು ಅವರ ನೇತೃತ್ವದಲ್ಲಿ ಮೂಲ್ಕಿಯ ಹೋಟೆಲ್ ಆದಿಧನ್ ಸಭಾಂಗಣದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಮೂಲ್ಕಿ ಸೀಮೆಯ ಒಂಭತ್ತು ಮಾಗಣೆಯ ಮೂಲ್ಕಿ ಸೀಮೆ ಅರಸು ಕಂಬಳವು ಡಿ. 22ರಂದು ನಡೆಯಲಿದ್ದು ಪೂರ್ವಭಾವಿಯಾಗಿ ಕಂಬಳ ಸಮಿತಿಯ ಸಭೆಯು ಸಮಿತಿಯ ಅಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಕೊಲ್ನಾಡು ಗುತ್ತು ಅವರ ನೇತೃತ್ವದಲ್ಲಿ ಮೂಲ್ಕಿಯ ಹೋಟೆಲ್ ಆದಿಧನ್ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಬಪ್ಪನಾಡು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸುನಿಲ್ ಆಳ್ವ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಕಂಬಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕಂಬಳ ಯಶಸ್ವಿಗೆ ಶ್ರಮಿಸುತ್ತಿದ್ದು ಮೂಲ್ಕಿ ಸೀಮೆಯ ಅರಸರು, ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಬಾರಿಯ ಮೂಲ್ಕಿ ಸೀಮೆಯ ಅರಸು ಕಂಬಳ ಯಶಸ್ವಿಗೊಳಿಸಬೇಕೆಂದು ಹೇಳಿದರು.

ಸಮಿತಿಯ ಮೋಹನ್ ಕೋಟ್ಯಾನ್ ಶಿಮಂತೂರು ಮಾತನಾಡಿ ಮೂಲ್ಕಿ ಸೀಮೆಯ ಅರಸು ಕಂಬಳದ ಮಹತ್ವದ ಬಗ್ಗೆ ತಿಳಿಸಿ ಒಗ್ಗಟ್ಟಾಗಿ ಈ ಬಾರಿಯ ಅರಸು ಕಂಬಳ ನಡೆಸಲು ಮನವಿ ಮಾಡಿದರು. ಸಭೆಯಲ್ಲಿ ಮೂಲ್ಕಿ ನ.ಪಂ. ಅಧ್ಯಕ್ಷ ಸತೀಶ್ ಅಂಚನ್, ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷೆ ಕುಸುಮಾ ಚಂದ್ರಶೇಖರ್, ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್ ಕೊಳುವೈಲು, ರಾಮದಾಸ್ ಶೆಟ್ಟಿ ಬಾಳಿಕೆ ಮನೆ, ಕಿಶೋರ್ ಶೆಟ್ಟಿ ದೆಪ್ಪಣಿಗುತ್ತು, ವಿನೋದ್ ಬೊಳ್ಳೂರು, ಕೃಷ್ಣಶೆಟ್ಟಿಗಾರ್ ಪಡು ಪಣಂಬೂರು ಮತ್ತಿತರರು ಮಾತನಾಡಿದರು.

ಸಭೆಯಲ್ಲಿ ಕಂಬಳ ಸಮಿತಿ ಸದಸ್ಯರು, ಕಂಬಳ ಕೋಣದ ಯಜಮಾನರು, ಮೂಲ್ಕಿತಾಲೂಕಿನ ವಿವಿಧ ಗ್ರಾ.ಪಂ. ಸದಸ್ಯರು ಹಾಗೂ ಕಂಬಳ ಅಭಿಮಾನಿಗಳು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.