ಕುಸಿತದ ಭೀತಿಯಲ್ಲಿ ಮೂಲ್ಕಿ ಕೇಂದ್ರ ಬಸ್ ತಂಗುದಾಣ

| Published : Jun 26 2024, 12:36 AM IST

ಕುಸಿತದ ಭೀತಿಯಲ್ಲಿ ಮೂಲ್ಕಿ ಕೇಂದ್ರ ಬಸ್ ತಂಗುದಾಣ
Share this Article
  • FB
  • TW
  • Linkdin
  • Email

ಸಾರಾಂಶ

ಕೆಲವು ದಿನಗಳ ಹಿಂದೆ ಬಸ್ ನಿಲ್ದಾಣದ ಬಳಿಯ ಅಂಗಡಿ ಕೋಣೆಗಳ ಮೇಲಿನ ಕಾಂಕ್ರೀಟ್ ಸ್ಲಾಬ್ ತುಂಡು ಭಾರೀ ಶಬ್ದದೊಂದಿಗೆ ಬೆಳಗಿನ ಜಾವ ಬಿದ್ದಿದ್ದು ಯಾರು ಇಲ್ಲದ ಕಾರಣ ಪ್ರಾಣಾಪಾಯ ತಪ್ಪಿತ್ತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಮೂಲ್ಕಿಯ ಕೇಂದ್ರ ಬಸ್ ತಂಗುದಾಣವು ಕುಸಿತದ ಭೀತಿಯಲ್ಲಿದೆ. 2007ರಲ್ಲಿ ಎಸ್‌ಎಪ್‌ಸಿ ಯೋಜನೆಯಲ್ಲಿ ಸುಮಾರು 50 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಂಡ ಮೂಲ್ಕಿ ಬಸ್ ನಿಲ್ದಾಣ ಹಾಗೂ ಅಂಗಡಿ ಕೋಣೆಗಳು ಶಿಥಿಲಾವಸ್ಥೆಯಲ್ಲಿದ್ದು ಮಳೆಗಾಲದಲ್ಲಿ ಸೋರುತ್ತಿದೆ.

ಬಸ್ ನಿಲ್ದಾಣದ ಸಿಮೆಂಟ್ ಕಾಂಕ್ರೀಟ್ ಸ್ಲಾಬ್‌ಗಳು ಬಿರುಕು ಬಿಟ್ಟಿದ್ದು ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿದೆ. ಕೆಲವು ದಿನಗಳ ಹಿಂದೆ ಬಸ್ ನಿಲ್ದಾಣದ ಬಳಿಯ ಅಂಗಡಿ ಕೋಣೆಗಳ ಮೇಲಿನ ಕಾಂಕ್ರೀಟ್ ಸ್ಲಾಬ್ ತುಂಡು ಭಾರೀ ಶಬ್ದದೊಂದಿಗೆ ಬೆಳಗಿನ ಜಾವ ಬಿದ್ದಿದ್ದು ಯಾರು ಇಲ್ಲದ ಕಾರಣ ಪ್ರಾಣಾಪಾಯ ತಪ್ಪಿತ್ತು.

ಬಳಿಕ ಸ್ಥಳೀಯರು ಮೂಲ್ಕಿ ನಗರ ಪಂಚಾಯಿತಿ ಮಾಹಿತಿ ನೀಡಿ ತಾತ್ಕಾಲಿಕ ನೆಲೆಯಲ್ಲಿ ದುರಸ್ತಿಪಡಿಸಲಾಗಿದೆ. ಮೂಲ್ಕಿ ಬಸ್ ನಿಲ್ದಾಣದ ಕಾಂಕ್ರೀಟ್ ಸ್ಲಾಬ್‌ಗಳು ಬಿರುಕು ಬಿಟ್ಟಿದ್ದು ಜನ ಸಂದಣಿ ಇರುವಾಗ ಕೆಳಗೆ ಬಿದ್ದರೆ ಪ್ರಾಣಪಾಯ ಸಂಭವಿಸುವ ಸಾಧ್ಯತೆಯಿದೆ.

ಕೂಡಲೇ ಮೂಲ್ಕಿ ನಗರ ಪಂಚಾಯಿತಿ ಆಡಳಿತ, ಬಸ್‌ ನಿಲ್ದಾಣ ಕುಸಿದು ಜೀವ ಹಾನಿ ಆಗುವ ಮುನ್ನ ಎಚ್ಚೆತ್ತುಕೊಳ್ಳಬೇಕಾಗಿದೆ.