ಮೂಲ್ಕಿ: ಮೂಲ್ಕಿಯ ಕಾರ್ನಾಡ್ ಕೊಕ್ಕರಕಲ್ ಪೆಟ್ರೋಲ್ ಬಂಕ್ ಬಳಿ ವಿದ್ಯುತ್ ಚಾಲಿತ ಆಟೋ ಪಲ್ಟಿಯಾಗಿ ಆಟೋದಲ್ಲಿದ್ದ ಚಾಲಕ ಸಹಿತ ಮೂವರು ಪ್ರಯಾಣಿಕರು ಪವಾಡ ಸದೃಶ ಪಾರಾದ ಘಟನೆ ನಡೆದಿದೆ.
ಮೂಲ್ಕಿ: ಮೂಲ್ಕಿಯ ಕಾರ್ನಾಡ್ ಕೊಕ್ಕರಕಲ್ ಪೆಟ್ರೋಲ್ ಬಂಕ್ ಬಳಿ ವಿದ್ಯುತ್ ಚಾಲಿತ ಆಟೋ ಪಲ್ಟಿಯಾಗಿ ಆಟೋದಲ್ಲಿದ್ದ ಚಾಲಕ ಸಹಿತ ಮೂವರು ಪ್ರಯಾಣಿಕರು ಪವಾಡ ಸದೃಶ ಪಾರಾದ ಘಟನೆ ನಡೆದಿದೆ.
ಮೂಲ್ಕಿಯ ಕೊಕ್ಕರಕಲ್ ಪೆಟ್ರೋಲ್ ಬಂಕ್ ಬಳಿ ಎದುರಿನಿಂದ ಅಡ್ಡ ಬಂದ ವಾಹನವನ್ನು ತಪ್ಪಿಸಲು ಚಾಲಕ ಯತ್ನಿಸಿದಾಗ ಆಟೋ ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಬಂಕ್ ಎದುರು ಭಾಗದ ಚರಂಡಿಗೆ ಬಿದ್ದು ಪಲ್ಟಿಯಾಗಿದೆ. ಅಪಘಾತದ ಸಂದರ್ಭ ಆಟೋದೊಳಗಡೆ ಸಿಲುಕಿಕೊಂಡಿದ್ದ ಚಾಲಕ ಸಹಿತ ಪ್ರಯಾಣಿಕರನ್ನು ಪೆಟ್ರೋಲ್ ಬಂಕ್ ಸಿಬ್ಬಂದಿ ಹೊರತೆಗೆದು ಸುರತ್ಕಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದಿಂದ ವಿದ್ಯುತ್ ಚಾಲಿತ ಆಟೋ ಸಂಪೂರ್ಣ ಹಾನಿಯಾಗಿದ್ದು ಮಂಗಳೂರು ಉತ್ತರ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಮೂಲ್ಕಿಯ ಕೊಕ್ಕರಕಲ್ ಪೆಟ್ರೋಲ್ ಬಂಕ್ ಬಳಿ ಎದುರಿನಿಂದ ಅಡ್ಡ ಬಂದ ವಾಹನವನ್ನು ತಪ್ಪಿಸಲು ಚಾಲಕ ಯತ್ನಿಸಿದಾಗ ಆಟೋ ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಬಂಕ್ ಎದುರು ಭಾಗದ ಚರಂಡಿಗೆ ಬಿದ್ದು ಪಲ್ಟಿಯಾಗಿದೆ. ಅಪಘಾತದ ಸಂದರ್ಭ ಆಟೋದೊಳಗಡೆ ಸಿಲುಕಿಕೊಂಡಿದ್ದ ಚಾಲಕ ಸಹಿತ ಪ್ರಯಾಣಿಕರನ್ನು ಪೆಟ್ರೋಲ್ ಬಂಕ್ ಸಿಬ್ಬಂದಿ ಹೊರತೆಗೆದು ಸುರತ್ಕಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದಿಂದ ವಿದ್ಯುತ್ ಚಾಲಿತ ಆಟೋ ಸಂಪೂರ್ಣ ಹಾನಿಯಾಗಿದ್ದು ಮಂಗಳೂರು ಉತ್ತರ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.