ಸಾರಾಂಶ
ಬಾಲಕನ ಮನೆಗೆ ತೆರಳಿ ಬಾಲಕನ ಶಾಲಾ ಶುಲ್ಕ, ಪುಸ್ತಕ, ಸಮವಸ್ತ್ರ ವ್ಯವಸ್ಥೆಯನ್ನು ಸಾರ್ವಜನಿಕರ ಸಹಾಯದಿಂದ ನೀಡಿ ಬಾಲಕನನ್ನು ಕಿನ್ನಿಗೋಳಿ ಶಾಲೆಗೆ ಸೇರಿಸಲಾಗಿದೆ.
ಮೂಲ್ಕಿ: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಸಮೀಪ ಬಾಲಕನೊಬ್ಬ ಹಣಕಾಸಿನ ತೊಂದರೆಯಿಂದ 9ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮುಟಕುಗೊಳಿಸಿ ಮನೆಯಲ್ಲಿದ್ದ. ಈ ಬಗ್ಗೆ ಮಾಹಿತಿ ತಿಳಿದ ಮೂಲ್ಕಿ ಪೊಲೀಸ್ ಠಾಣೆಯ ಅಧಿಕಾರಿಗಳು ಬಾಲಕನಿಗೆ ವಿದ್ಯಾಭ್ಯಾಸ ಮುಂದುವರಿಸಲು ನೆರವಾಗಿದ್ದಾರೆ.
ಪೊಲೀಸ್ ಠಾಣೆಯ ಅಧಿಕಾರಿಗಳ ಮಾರ್ಗದರ್ಶನದಂತೆ ಸಿಬ್ಬಂದಿ ವರ್ಗ ಬಾಲಕನ ಮನೆಗೆ ತೆರಳಿ ಬಾಲಕನ ಶಾಲಾ ಶುಲ್ಕ, ಪುಸ್ತಕ, ಸಮವಸ್ತ್ರ ವ್ಯವಸ್ಥೆಯನ್ನು ಸಾರ್ವಜನಿಕರ ಸಹಾಯದಿಂದ ನೀಡಿ ಬಾಲಕನನ್ನು ಕಿನ್ನಿಗೋಳಿ ಶಾಲೆಗೆ ಸೇರಿಸಲಾಗಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿಗಳಾದ ಎಎಸ್‌ಐ ಸಂಜೀವ್ ಪಿ., ಮಹಿಳಾ ಮುಖ್ಯ ಪೇದೆ ಜಾಯ್ಸ್ ಸುಚಿತ ಡಿಸೋಜಾ, ಹೆಡ್ ಕಾನ್ಸ್‌ಟೆಬಲ್‌ಗಳಾದ ಪವನ್ ಕುಮಾರ್, ಸತೀಶ್, ಚಂದ್ರಶೇಖರ್, ಹರಿಪ್ರಸಾದ್ ಮತ್ತು ಊರಿನ ಪ್ರಮುಖರಾದ ಸ್ಟ್ಯಾನಿ ಮತ್ತಿತರು ಸಹಕಾರ ನೀಡಿದರು.