ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರ
ಇತ್ತೀಚಿಗೆ ಬೆಳಗಾವಿ ಜಿಲ್ಲೆಯ ಮಳೇಕರಣಿ ಸೌಹಾರ್ದ ಸಹಕಾರಿ ಸಂಘ ಉಚಗಾಂವ ಅವರು ಕೊಡಮಾಡಿದ ಶಿಕ್ಷಣ ಭೂಷಣ ಪ್ರಶಸ್ತಿ ಸ್ವೀಕರಿಸಿದ ಪ್ರೌಢಶಾಲಾ ಶಿಕ್ಷಕ ಮೆಹಬೂಬ್ ಮುಲ್ತಾನಿಯವರಿಗೆ ಕಿತ್ತೂರ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಪುರಸ್ಕೃತರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.ಮುಖ್ಯೋಪಾಧ್ಯಾಯ ಬಿ.ಸಿ.ಬಿದರಿ ಮಾತನಾಡಿ, ಮೆಹಬೂಬ್ ಮುಲ್ತಾನಿಯರು ಯಾವುದೇ ಪ್ರಶಸ್ತಿಯನ್ನು ಬಯಸದೇ ಸಾಹಿತ್ಯ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿದ್ದು, ಪ್ರಶಸ್ತಿಗಳೇ ಅವರನ್ನು ಹುಡುಕಿಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಶಿಕ್ಷಕ, ಸಾಹಿತಿ ಮಂಜುನಾಥ ಕಳಸಣ್ಣವರ ಮಾತನಾಡಿ, ಎಲೆಮರೆ ಕಾಯಿಯಂತೆ ಸದಾ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿಯೇ ಹಗಲಿರುಳು ಶ್ರಮಿಸುತ್ತಿರುವ ಇವರನ್ನು ಮುಂಬರುವ ದಿನಗಳಲ್ಲಿ ಶಿಕ್ಷಣ ಇಲಾಖೆ ಗುರುತಿಸುವಂತಾಗಲಿ ಎಂದು ಶುಭ ಕೋರಿದರು.ಶಿಕ್ಷಕ ಮೆಹಬೂಬ್ ಮುಲ್ತಾನಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಶಿಕ್ಷಕ ವೃತ್ತಿಯು ಪವಿತ್ರವಾಗಿದ್ದು, ನಾವುಗಳು ಕಲಿಸುವಿಕೆ ಜೊತೆಗೆ ಸದಾ ಓದುವಿಕೆಯನ್ನೂ ಮೈಗೂಡಿಸಿಕೊಂಡರೇ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿ ಉತ್ತಮ ಶಿಕ್ಷಕ ಎನಿಸಿಕೊಳ್ಳುವದರಲ್ಲಿ ಸಂದೇಹವಿಲ್ಲ. ಸನ್ಮಾನಿಸಿದ ಕಸಾಪ ಎಲ್ಲ ಪದಾಧಿಕಾರಿಗಳಿಗೆ ಕನ್ನಡ ಪುಸ್ತಕಗಳನ್ನು ಕೊಡುವುದರ ಮೂಲಕ ಧನ್ಯವಾದಗಳನ್ನು ತಿಳಿಸಿದರು.ಡಾ.ಎಸ್.ಬಿ.ದಳವಾಯಿ ಅಧ್ಯಕ್ಷಿಯ ನುಡಿಗಳನ್ನಾಡಿ, ಬಹುಭಾಷಾ ಪ್ರವೀಣರಾದ ಮೆಹಬೂಬ್ ಮುಲ್ತಾನಿಯವರು ಸರಳ ಸಜ್ಜನಿಕೆಯ ವ್ಯಕ್ತಿಗಳಾಗಿದ್ದು, ತಮ್ಮಲ್ಲಿಯ ಅಪಾರ ಜ್ಞಾನದಿಂದ ಇಡೀ ರಾಜ್ಯದಲ್ಲಿ ಗುರುತಿಸಿಕೊಂಡ ಅತಿ ಸಣ್ಣ ವಯಸ್ಸಿನ ಸಾಹಿತಿಗಳಾಗಿದ್ದು, ಕಿತ್ತೂರ ನಾಡಿನ ಜನಪ್ರೀಯತೆಗೆ ಸಾಕ್ಷಿಯಾಗಿದ್ದಾರೆ ಎಂದು ಅಭಿನಂದಿಸಿದರು.ಶಿಕ್ಷಕಿ ಭುವನಾ ಹಿರೇಮಠ ಪ್ರಾರ್ಥಿಸಿದರು. ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ರಾಜಶೇಖರ ರಗಟಿ ಸ್ವಾಗತಿಸಿದರು. ಚ.ಕಿತ್ತೂರು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕ್ಯೂರೇಟರ್ ರಾಘವೇಂದ್ರ ಪರಿಚಯಿಸಿದರು. ಶಿಕ್ಷಕ ನಿಂಗಪ್ಪ ನಂದಿಹಳ್ಳಿ ವಂದಿಸಿದರು. ಉಪಪ್ರಾಂಶುಪಾಲ ಮಹೇಶ ಚನ್ನಂಗಿ ನಿರೂಪಿಸಿದರು. ಶಿಕ್ಷಕರಾದ ಮಹೇಶ್ವರ ಹೊಂಗಲ, ಮಂಜುನಾಥ ಕರಿಸಿದ್ಧನವರ ಮುಂತಾದವರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))