ಸಂಘದಲ್ಲಿ ನಿಷ್ಠೆಯಿಂದ ಸೇವೆ ಮಾಡುತ್ತ ಬಂದಿರುವ ಶಂಕರ ರೂಡಗಿ ಪ್ರಚಾರ ಬಯಸದೇ ಕಲಾಸೇವೆ ಮಾಡುತ್ತಿದ್ದಾರೆ. ಅವರ ಕುರಿತಾದ ಅಭಿನಂದನಾ ಗ್ರಂಥ ಹೊರತಂದಿರುವುದು ಶ್ಲಾಘನೀಯ ಎಂದು ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಶ್ರೀನಿವಾಸ ಬಳ್ಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಸಂಘದಲ್ಲಿ ನಿಷ್ಠೆಯಿಂದ ಸೇವೆ ಮಾಡುತ್ತ ಬಂದಿರುವ ಶಂಕರ ರೂಡಗಿ ಪ್ರಚಾರ ಬಯಸದೇ ಕಲಾಸೇವೆ ಮಾಡುತ್ತಿದ್ದಾರೆ. ಅವರ ಕುರಿತಾದ ಅಭಿನಂದನಾ ಗ್ರಂಥ ಹೊರತಂದಿರುವುದು ಶ್ಲಾಘನೀಯ ಎಂದು ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಶ್ರೀನಿವಾಸ ಬಳ್ಳಿ ಹೇಳಿದರು.

ಪಟ್ಟಣದಲ್ಲಿ ಸಂಘ ಜೀವಿ ಶಂಕರ ರೂಡಗಿ ಅಭಿನಂದನಾ ಸಮಿತಿ ಹಮ್ಮಿಕೊಂಡಿದ್ದ ಸೇವಾನಿರತ ಸಂಘಜೀವಿ ಅಭಿನಂದನಾ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ರಂಗಭೂಮಿ, ಸಂಘದ ನಿಷ್ಠಾವಂತ ಕಾರ್ಯಕರ್ತ ಬಹುಮಖ ಪ್ರತಿಭೆ ಶಂಕರ ರೂಡಗಿ ತಮ್ಮ ಕೈಮಗ್ಗ ನೇಕಾರಿಕೆ ಉದ್ಯೋಗದೊಂದಿಗೆ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಕೊಂಡವರು ಎಂದರು.

ಪಾರಂಪರಿಕ ವೈದ್ಯ ಹನಮಂತ ಮಳಲಿ ಮಾತನಾಡಿ, ಕರ್ತವ್ಯ ಸೇವೆಗಿಂತ ದೊಡ್ಡದು. ಇಂತಹ ಸ್ವಯಂ ಸೇವಕರ ಶ್ರದ್ಧೆಯಿಂದ ಸಂಘ ಬೆಳೆದಿದೆ. ಹತ್ತು, ಹನ್ನೊಂದು ವರ್ಷಗಳಿಂದ ಈ ಜಗತ್ತು ಭಾರತದತ್ತ ನೋಡುತ್ತಿದೆ ಎಂದರೆ ಅದಕ್ಕೆ ಕಾರಣ ತ್ಯಾಗ ಮತ್ತು ಸೇವೆಯಿಂದ ದೇಶದಲ್ಲಿ ಸ್ವಯಂ ಸೇವಕರು ಕೆಲಸ ಮಾಡಿದ ಪರಿಣಾಮ ಎಂದು ಸ್ಮರಿಸಿದರು.ಸಂಸ್ಕಾರ ಭಾರತಿ ಕರ್ನಾಟಕ ಉತ್ತರ ಪ್ರಾಂತ ಪ್ರಮುಖ ಶಶಿಧರ ನರೇಂದ್ರ ಮಾತನಾಡಿ, ಶಂಕರಪ್ಪ ರೂಡಗಿ ಅವರು ನಾಟಕದಲ್ಲಿ ಸ್ತ್ರೀಪಾತ್ರಗಳಿಂದ ಗುರುತಿಸಿಕೊಂಡವರು. ಅದ್ಭುತ ರಾಮಯಾಯ, ರಕ್ತರಾತ್ರಿಯಂತಹ ಪೌರಾಣಿಕ ನಾಟಕಗಳಲ್ಲಿ ಅವರು ಅಭಿನಯಿಸಿದವರು. ಕಷ್ಟದ ಜೀವನದಲ್ಲಿ ರಂಗಭೂಮಿಯ ಜೊತೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಸರಸ್ವತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಘನಶ್ಯಾಮ ರಾಠಿ, ಅಭಿನಂದನಾ ಸಮಿತಿ ಅಧ್ಯಕ್ಷ ಅಮಾತೆಪ್ಪ ಕೊಪ್ಪಳ, ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿದರು. ಮುರುಘಾಮಠದ ಶ್ರೀಕಾಶೀನಾಥ ಶ್ರೀಗಳು, ಶ್ರೀಚಿದಾನಂದಸ್ವಾಮಿ ದೇವಾಂಗಮಠ ಸಾನಿಧ್ಯ ವಹಿಸಿದ್ದರು. ಸಂಪಾದಕ ವಿ.ಎ. ಬೆನಕನಾಳ, ನಿವೃತ್ತ ಉಪತಹಶೀಲ್ದಾರ ಪಿ.ವಿ.ದೇಸಾಯಿ, ಎಸ್.ವಿ.ಬನ್ನಿ, ಶಂಕರ ಹಾಗೂ ನೀಲಮ್ಮ ದಂಪತಿ, ರಾಚಣ್ಣ ಕೆರೂರ, ರಾಮಣ್ಣ ಚಂದರಗಿ, ನಂದಪ್ಪ ಉಮಚಗಿ, ಮೇಘರಾಜಪ್ಪ ಮುಳಗುಂದ, ಶಂಕರ ಮುಂದಿನಮನಿ, ವಿನೋದ ಅಂಬೇಕರ, ಸುರೇಶ ವಗ್ಗಾ, ಹುಚ್ಚೇಶ ಯಂಡಿಗೇರಿ, ಮಲ್ಲಿಕಾರ್ಜುನ ರಾಜನಾಳ, ಮಹಾದೇವ ಜಗತಾಪ, ಶಂಕ್ರಪ್ಪ ಶೇಬಿನಕಟ್ಟಿ, ಮೋಹನ ಕರನಂದಿ, ಮುತ್ತು ಅಚನೂರ, ರಾಜು ರೂಡಗಿ, ಹನಮಂತ ರೂಡಗಿ, ಘನಶ್ಯಾಮ ರೂಡಗಿ, ಕೃಷ್ಣ ರೂಡಗಿ, ಭಾಗ್ಯ ಘಂಟಿ, ಶಾರದಾ ಕಡೂರ, ಮೀನಾಕ್ಷಿ ನಿಲೂಗಲ್ಲ, ಚನ್ನಮ್ಮ ರೂಡಗಿ, ಕಾವೇರಿ ಅಚನೂರ, ಐಶ್ವರ್ಯ ಕಂಠಿಗೌಡರ ಇತರರು ಇದ್ದರು.