2008ರಲ್ಲಿ ನಡೆದ ಮುಂಬೈ ಭಯೋತ್ಪಾದನಾ ದಾಳಿಯ ಸಂದರ್ಭ ಉಗ್ರರ ವಿರುದ್ಧ ಹೋರಾಡಿ ಬಲಿದಾನಗೈದ ಸೈನಿಕರು ಹಾಗೂ ಬಲಿಯಾದ ಅಮಾಯಕರನ್ನು ಸ್ಮರಿಸಿ ನುಡಿ ನಮನ ಸಲ್ಲಿಸುವ ಅಸುವು ರಾಷ್ಟ್ರ ಸಮರ್ಪಿತ ಕಾರ್ಯಕ್ರಮ ಕದ್ರಿ ಯುದ್ಧ ಸ್ಮಾರಕದಲ್ಲಿ ಬುಧವಾರ ನಡೆಯಿತು.
ಮಂಗಳೂರು: ರಾಷ್ಟ್ರೀಯವಾದಿ ಕ್ರಿಸ್ತರ ವೇದಿಕೆ ಮಂಗಳೂರು ವತಿಯಿಂದ, 2008ರಲ್ಲಿ ನಡೆದ ಮುಂಬೈ ಭಯೋತ್ಪಾದನಾ ದಾಳಿಯ ಸಂದರ್ಭ ಉಗ್ರರ ವಿರುದ್ಧ ಹೋರಾಡಿ ಬಲಿದಾನಗೈದ ಸೈನಿಕರು ಹಾಗೂ ಬಲಿಯಾದ ಅಮಾಯಕರನ್ನು ಸ್ಮರಿಸಿ ನುಡಿ ನಮನ ಸಲ್ಲಿಸುವ ಅಸುವು ರಾಷ್ಟ್ರ ಸಮರ್ಪಿತ ಕಾರ್ಯಕ್ರಮ ಕದ್ರಿ ಯುದ್ಧ ಸ್ಮಾರಕದಲ್ಲಿ ಬುಧವಾರ ನಡೆಯಿತು.
ಮಂಗಳೂರು ಜಿಲ್ಲಾ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನೀಸಾ ಅವರು ಸಂವಿಧಾನ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಉಗ್ರವಾದ ಪಿಡುಗಿನ ವಿರುದ್ಧ ಒಗ್ಗಟ್ಟನ್ನು ಪ್ರದರ್ಶಿಸಿ ದೇಶದ ಐಕ್ಯತೆಯನ್ನು ಕಾಪಾಡುವ ಅಗತ್ಯವಿದೆ. ದೇಶದಲ್ಲಿ ಜಾತಿ, ರಾಜಕೀಯ, ಧರ್ಮ ಮತ ಭೇದಗಳನ್ನು ಬದಿಗಿಟ್ಟು ಸಂವಿಧಾನದ ಆಶಯದಂತೆ ದೇಶ ಕಟ್ಟುವ ಕಾರ್ಯ ಮಾಡಬೇಕಿದೆ ಎಂದರು.ಶಾಸಕ ವೇದವ್ಯಾಸ ಕಾಮತ್ ಮಾತನಾಡಿದರು. ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ರೆ.ಫಾ.ಮೆಲ್ವಿನ್ ಜೋಸೆಫ್ ಪಿಂಟೊ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಕಜೆಂಪಾಡಿ ಸುಬ್ರಹ್ಮಣ್ಯ ಭಟ್, ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಟರಾಜ್ ಬಿ.ಎನ್, ಎನ್‌ಸಿಸಿ ಕಮಾಂಡಿಂಗ್ ಅಧಿಕಾರಿ ಆರ್‌ಪಿ ರೈ, ಪ್ರಮುಖರಾದ ಲಿಬಿನ್ ಎ ಜಾನ್ಸನ್, ನಿವೃತ್ತ ಸೈನಿಕ ಗೋಪಾಲಕೃಷ್ಣ ಶೆಣೈ, ರವಿಶಂಕರ್ ಮಿಜಾರ್, ವೇದಿಕೆಯ ಪದಾಧಿಕಾರಿಗಳಾದ ರಿಚರ್ಡ್ ರಸ್ಕೀನಾ, ಅರುಣ್ ಡಿಸೋಜ, ಪ್ರೀತಿ ಮಿನೇಜಸ್, ಲ್ಯಾನಿ ಪಿಂಟೋ ಇದ್ದರು.ಶಾಸಕ ವೇದವ್ಯಾಸ ಕಾಮತ್ ಸ್ಕೇಟಿಂಗ್‌ಗೆ ಚಾಲನೆ ನೀಡಿದರು. ಭರತನಾಟ್ಯದಲ್ಲಿ ವಿಶ್ವದಾಖಲೆಗೈದ ಕಲಾವಿದೆ ರೆಮೋನಾ ಇವೆಟ್ ಪಿರೇರಾ ಮತ್ತು ತಂಡದವರಿಂದ ನೃತ್ಯನಮನ ಕಾರ್ಯಕ್ರಮ ನಡೆಯಿತು. ರಾಷ್ಟ್ರೀಯವಾದಿ ಕ್ರಿಸ್ತರ ವೇದಿಕೆ ಸ್ಥಾಪಕ ಪ್ರ್ಯಾಂಕ್ಲಿನ್ ಮೊಂತೆರೊ ಸ್ವಾಗತಿಸಿದರು. ವಿವಿಧ ಕ್ಷೇತ್ರಗಳ ಮುಖಂಡರು ಇದ್ದರು.