ಸಾರಾಂಶ
ಮುಂಡಗೋಡ: ಅ. ೧೬ರಂದು ನಡೆಯುವ ಮುಂಡಗೋಡ ತಾಲೂಕು ೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶಿಕ್ಷಣಪ್ರೇಮಿ ಎಸ್. ಫಕೀರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ವಸಂತ ಕೊಣಸಾಲಿ ತಿಳಿಸಿದರುಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅ. ೧೬ರಂದು ಬೆಳಗ್ಗೆ ೯ ಗಂಟೆಗೆ ಪ್ರವಾಸಿ ಮಂದಿರದಿಂದ ಕನ್ನಡ ತಾಯಿ ಭುವನೇಶ್ವರಿ ಹಾಗೂ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಪ್ರಾರಂಭವಾಗಲಿದೆ. ೧೦ ಗಂಟೆಗೆ ವಿವೇಕಾನಂದ ಬಯಲು ರಂಗಮಂದಿರದ ವೇದಿಕೆಯಲ್ಲಿ ಉದ್ಘಾಟನೆ ಸಮಾರಂಭ ನಡೆಯಲಿದೆ. ಪ್ರಕೃತಿ ಮತ್ತು ಮಾನವ ಹಾಗೂ ಕನ್ನಡ ಸಾಹಿತ್ಯಕ್ಕೆ ಸರ್ಕಾರದ ಕೊಡುಗೆ ಎಂಬ ವಿಷಯ ಗೋಷ್ಠಿಗಳು, ಕವಿಗೋಷ್ಠಿ ನಡೆಯಲಿದೆ. ತಾಲೂಕಿನ ೯ ಜನ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ನಡೆಯಲಿದೆ ಎಂದರು.ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಎಸ್.ಡಿ. ಮುಡೆಣ್ಣವರ್ ಹಾಗೂ ವಿನಾಯಕ ಶೇಟ, ಕೋಶಾಧ್ಯಕ್ಷ ನಾಗರಾಜ ಅರ್ಕಸಾಲಿ, ಎಸ್.ಕೆ. ಬೋರ್ಕರ, ಡಾ. ರಮೇಶ ಅಂಬಿಗೇರ, ಸಂಗಪ್ಪ ಕೊಳೂರ, ಎಸ್.ಬಿ. ಹೂಗಾರ, ಶಾರದಾ ರಾಠೋಡ, ಸುಭಾಸ ವಡ್ಡರ, ಆನಂದ ಹೊಸೂರ ಇದ್ದರು.
ತಾಲೂಕಿನ ಸಾಹಿತಿಗಳು ಹೊಸದಾಗಿ ಬರೆದ ಕವನ, ಕಥಾ ಸಂಕಲನ ಪುಸ್ತಕಗಳನ್ನು ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುವುದು. ಮೊ. ೯೮೪೫೨೭೨೩೪೯ ಸಂಪರ್ಕಿಸುವಂತೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಸಂತ ಕೊಣಸಾಲಿ ತಿಳಿಸಿದರು.