ವಿಜೃಂಭಣೆಯ ಮುಂಡರಗಿ ಅನ್ನದಾನೀಶ್ವರ ಮಹಾರಥೋತ್ಸವ

| Published : Feb 23 2024, 01:50 AM IST

ವಿಜೃಂಭಣೆಯ ಮುಂಡರಗಿ ಅನ್ನದಾನೀಶ್ವರ ಮಹಾರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಡರಗಿ ಅನ್ನದಾನೀಶ್ವರ ಮಹಾಶಿವಯೋಗಿಗಳ 154ನೇ ಯಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅನ್ನದಾನೀಶ್ವರ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಮುಂಡರಗಿ: ಇಲ್ಲಿಯ ಅನ್ನದಾನೀಶ್ವರ ಮಹಾಶಿವಯೋಗಿಗಳ 154ನೇ ಯಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅನ್ನದಾನೀಶ್ವರ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ಮಡಿಕೇರಿಯ ಪದ್ಮಶ್ರೀ ಪುರಸ್ಕೃತೆ ರಾಣಿ ಮಾಚಯ್ಯ ಚಾಲನೆ ನೀಡಿದರು.

ಶ್ರೀಮಠದ ಉತ್ತರಾಧಿಕಾರಿ ಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ ನಾಡಿನ ಅನೇಕ ಹರ, ಗುರು, ಚರಮೂರ್ತಿಗಳು ಹಾಗೂ ಗಣ್ಯರು ಮತ್ತು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಪಟ್ಟಣದ ಗಾಂಧಿ ವೖತ್ತದಿಂದ ಪ್ರಾರಂಭವಾದ ರಥೋತ್ಸವ ಸರ್ ಸಿದ್ದಪ್ಪ ಕಂಬಳಿ ವೖತ್ತದವರೆಗೆ ಸಾಗಿ ಮತ್ತೆ ಶ್ರೀಮಠವನ್ನು ತಲುಪಿತು.

ಈ ಸಂದರ್ಭದಲ್ಲಿ ಕರಬಸಪ್ಪ ಹಂಚಿನಾಳ, ಎಂ.ಎಸ್. ಶಿವಶೆಟ್ಟರ, ಎಸ್.ವಿ. ಲಿಂಬಿಕಾಯಿ, ಬಾಬಣ್ಣ ಘಟ್ಟಿ, ಬಸವರಾಜ ದೇಸಾಯಿ, ಯಾತ್ರಾ ಕಮಿಟಿ ಅಧ್ಯಕ್ಷ ನಾಗೇಶ ಹುಬ್ಬಳ್ಳಿ, ಗುಡದಪ್ಪ ಲಿಂಬಿಕಾಯಿ, ಮಂಜುನಾಥ ಶಿವಶೆಟ್ಟರ, ಅನುಪಕುಮಾರ ಹಂಚಿನಾಳ, ಕೈಲಾಸ ಹಿರೇಮಠ, ವೀರೇಶ ಸಜ್ಜನ, ಮಂಜುನಾಥ ಇಟಗಿ, ರವೀಂದ್ರಗೌಡ ಪಾಟೀಲ, ಮಂಜುನಾಥ ಕಾಲವಾಡ, ರಾಘವೇಂದ್ರ ಪಟಗೆ, ಆಕಾಶ ಹಂಚಿನಾಳ, ಪ್ರಶಾಂತಗೌಡ ಗುಡದಪ್ಪನವರ, ದೇವು ಹಡಪದ, ನಾಗರಾಜ ಗುಡಿಮನಿ, ವಿಶ್ವನಾಥ ಗಡ್ಡದ, ಮಂಜುನಾಥ ಮುಧೋಳ, ರಂಗಪ್ಪ ಕೋಳಿ, ರವಿ ಕುಂಬಾರ, ಕುಮಾರ ಬನ್ನಿಕೊಪ್ಪ, ಪವನ್ ಮೇಟಿ, ಭರತ್ ಮೇಟಿ, ಗಿರೀಶ ಶೀರಿ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡರು.ಪುರಸ್ಕಾರ ಪ್ರದಾನ

ಇಲ್ಲಿಯ ಅನ್ನದಾನೀಶ್ವರ ಯಾತ್ರಾ ಮಹೋತ್ಸವದ ಧರ್ಮಸಭೆ ಕಾರ್ಯಕ್ರಮದಲ್ಲಿ ಶ್ರೀಮಠದಿಂದ ನಾಡಿನ ಸಾಧಕರಿಗೆ ಕೊಡಮಾಡುವ ಅನ್ನದಾನೀಶ್ವರ ಪ್ರತಿಷ್ಠಾನ ಪುರಸ್ಕಾರವನ್ನು ಸ್ಥಳೀಯ ಖ್ಯಾತ‌ ಉದ್ದಿಮೆದಾರ ಕರಬಸಪ್ಪ ಹಂಚಿನಾಳ ಅವರಿಗೆ ಶ್ರೀಮಠದ ಡಾ. ಅನ್ನದಾನೀಶ್ವರ ಸ್ವಾಮೀಜಿ ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ಶ್ರೀಮಠದ ಉತ್ತರಾಧಿಕಾರಿ ಜ.ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಸ್ವಾಮೀಜಿಯವರು, ಯಾತ್ರಾ ಕಮಿಟಿ ಅಧ್ಯಕ್ಷ ನಾಗೇಶ ಹುಬ್ಬಳ್ಳಿ ಹಾಗೂ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.