ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಪುರಸಭೆ ಕಟ್ಟಡ ಸೋರುತ್ತಿದ್ದು ಈ ಬಗ್ಗೆ ಕಟ್ಟಡ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೊಡಗು ಅಭಿವೃದ್ಧಿ ಸಮಿತಿಯ ಕುಶಾಲನಗರ ತಾಲೂಕು ಘಟಕದ ಕಾರ್ಯಕರ್ತರು ಪುರಸಭಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷರಾದ ಕೆ ಎನ್ ನಾಗೇಂದ್ರ ನೇತೃತ್ವದಲ್ಲಿ ಪ್ರಮುಖರು, ಕಾರ್ಯಕರ್ತರು, ಮುಖ್ಯ ಅಧಿಕಾರಿ ಟಿ ಎಸ್ ಗಿರೀಶ್ ಅವರಿಗೆ ಮನವಿ ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.----------------------------
ಶಾಲೆ ವಿದ್ಯಾರ್ಥಿಗಳಿಗೆ ಅಕ್ಕಪಡೆ ಮಾರ್ಗದರ್ಶನಕನ್ನಡಪ್ರಭವಾರ್ತೆ ನಾಪೋಕ್ಲು
ಅಕ್ಕಪಡೆಯಿಂದ ನಾಪೋಕ್ಲು ಪರಿಸರದ ಶಾಲಾ ವಿದ್ಯಾರ್ಥಿಗಳಿಗೆ ಮೌಲ್ಯಶಿಕ್ಷಣ ಮಾಹಿತಿ ನೀಡಲಾಯಿತು. ಪಾರಾಣಿ (ಬಲಮುರಿ) ಮತ್ತು ಬೋಲ್ಲುಮಾಡು, ಮಾರುತಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಪಾಲ್ಗೊಂಡಿದ್ದರು. ಮೌಲ್ಯ ಶಿಕ್ಷಣದ ಮಹತ್ವ, ಪರಿಸರ ಜಾಗೃತಿ, ನೈರ್ಮಲ್ಯ ಸ್ವಚ್ಛತೆ ಮತ್ತು ಸುರಕ್ಷತೆ ಬಗ್ಗೆ ಜಾಗೃತಿ, ದೈಹಿಕ ಶಿಕ್ಷಣದ ಮಹತ್ವ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಕಡ್ಡಾಯ ಶಿಕ್ಷಣ, ನಿರಂತರ ಹಾಜರಾತಿ ಅರಿವು ಮೂಡಿಸಲಾಯಿತು. ಜಿಲ್ಲಾ ಪೊಲೀಸ್ ಮತ್ತು ಮಹಿಳಾ ಮಕ್ಕಳ ಸಬಲೀಕರಣ ಇಲಾಖೆ ಅಧೀನದಲ್ಲಿ ಬರುವ ಅಕ್ಕ ಪಡೆ ಸಿಬ್ಬಂದಿ ಕೌಶಲ್ಯ, ಕುಮಾರಿ ಇದ್ದರು.