ರಾಮನಗರ: ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮಸ್ಲಿಂ ಬಾಂಧವರೊಂದಿಗೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಶುಭಾಶಯ ವಿನಿಮಯ ಮಾಡಿಕೊಂಡು ತಂಪು ಪಾನೀಯ, ಮಜ್ಜಿಗೆ ವಿತರಣೆ ಮಾಡಿದರು
ರಾಮನಗರ: ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮಸ್ಲಿಂ ಬಾಂಧವರೊಂದಿಗೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಶುಭಾಶಯ ವಿನಿಮಯ ಮಾಡಿಕೊಂಡು ತಂಪು ಪಾನೀಯ, ಮಜ್ಜಿಗೆ ವಿತರಣೆ ಮಾಡಿದರು.
ನಗರದ ಗಾಂಧಿ ಪಾರ್ಕ್ ಬಳಿ ಬೃಹತ್ ಶಾಮಿಯಾನ ಅಳವಡಿಸಿ ಮಸ್ಲಿಂ ಬಾಂಧವರಿಗೆ ಮಜ್ಜಿಗೆ ವಿತರಣೆ ಮಾಡಿದರು. ಕೆ.ಶೇಷಾದ್ರಿರವರು ಮುಸ್ಲಿಂ ಬಾಂಧವರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು.ಈ ವೇಳೆ ಮಾತನಾಡಿದ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿ, ರಂಜಾನ್ ಮಾಸದಲ್ಲಿ ಒಂದು ತಿಂಗಳ ಕಾಲ ಉಪವಾಸ ಅಂದರೆ, ಆಹಾರ ತ್ಯಜಿಸುವುದಲ್ಲ. ಬದಲಾಗಿ ಕೆಟ್ಟ ಆಲೋಚನೆಗಳು, ಸುಳ್ಳು, ಅಸೂಯೆ ಮತ್ತು ದ್ವೇಷವನ್ನು ತ್ಯಜಿಸಿ, ಮನಸ್ಸು ಮತ್ತು ಆತ್ಮವನ್ನು ಶುದ್ಧೀಕರಿಸುವ ಪ್ರಕ್ರಿಯೆಯಾಗಿದೆ ಎಂದು ಹೇಳಿದರು.
ರಾಮನಗರದಲ್ಲಿ ಹಿಂದಿನಿಂದಲೂ ಹಿಂದೂಗಳು ಮತ್ತು ಮುಸಲ್ಮಾನ ಬಾಂಧವರು ಸಾಮರಸ್ಯದಿಂದ ಬದುಕು ನಡೆಸುತ್ತಿದ್ದಾರೆ. ಅದನ್ನು ಮುಂದುವರೆಸಿಕೊಂಡು ಹೋಗುವ ಕೆಲಸ ಮಾಡುತ್ತಿದ್ದೇವೆ ಎಂದರು.ಟಿಎಪಿಸಿಎಂಎಸ್ ಅಧ್ಯಕ್ಷ ಸುರೇಶ್ (ದೊಡ್ಡಿ), ನಗರಸಭೆ ಸದಸ್ಯ ಮುತ್ತುರಾಜು, ನಗರಾಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಪ್ರವೀಣ್, ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಭೂಷಣ್, ಮುಖಂಡರಾದ ಹಾಲಿನಚಂದ್ರು, ಕಬ್ಬಡಿ ವಿಜಿ, ದೇವರಾಜು, ಮಲ್ಲೇಗೌಡ, ರಾಮು, ಪ್ರಮೋದ್ , ಉಮಾಶಂಕರ್, ಲವ, ನಂದೀಶ್, ಶಿವರಾಜು ಮತ್ತಿತರರು ಹಾಜರಿದ್ದರು.
21ಕೆಆರ್ ಎಂಎನ್ 3.ಜೆಪಿಜಿರಾಮನಗರದ ಗಾಂಧಿ ಪಾರ್ಕ್ ಬಳಿ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ)ರವರು ಮುಸ್ಲಿಂ ಬಾಂಧವರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು.