ಸಾರಾಂಶ
ಪೌರ ಕಾರ್ಮಿಕರಿಲ್ಲದೆ ಪಟ್ಟಣವು ಶುಚಿಯಾಗಿರಲು ಅಸಾಧ್ಯ
ಕನಕಗಿರಿ: ಪಟ್ಟಣದ ಸ್ವಚ್ಛತಾ ರೂವಾರಿಗಳು ಪೌರ ಕಾರ್ಮಿಕರಾಗಿದ್ದಾರೆ ಎಂದು ಪಪಂ ಮುಖ್ಯಾಧಿಕಾರಿ ಲಕ್ಷ್ಮಣ್ಣ ಕಟ್ಟಿಮನಿ ಹೇಳಿದರು.
ಅವರು ಪಟ್ಟಣದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಶುಕ್ರವಾರ ಮಾತನಾಡಿ, ಪೌರ ಕಾರ್ಮಿಕರಿಲ್ಲದೆ ಪಟ್ಟಣವು ಶುಚಿಯಾಗಿರಲು ಅಸಾಧ್ಯ. ನಗರದ ಸೌಂದರ್ಯಕರಣಕ್ಕೆ ಪೌರ ಕಾರ್ಮಿಕರು ಮಹತ್ವದ ಪಾತ್ರವಹಿಸಿದ್ದಾರೆ. ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಾಗ ಸುರಕ್ಷತಾ ಕವಚ ಧರಿಸಬೇಕು. ಸರ್ಕಾರದಿಂದ ಸೌಲಭ್ಯ ದೊರಕಿಸಿ ಕೊಡಲಾಗುವುದು. ಸ್ವಚ್ಛ ಮಾಡುವ ಕಾರ್ಮಿಕರೆನ್ನುವ ಕೀಳು ಭಾವನೆ ಯಾರಲ್ಲಿಯೂ ಬರಬಾರದು. ಅವರನ್ನು ಪ್ರತಿಯೊಬ್ಬರು ನಮ್ಮವರೆಂದು ಭಾವಿಸಬೇಕೆಂದು ತಿಳಿಸಿದರು.ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ ಹಾಗೂ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು. ಪೌರ ಕಾರ್ಮಿಕರನ್ನು ಪಪಂ ವತಿಯಿಂದ ಸನ್ಮಾನಿಸಲಾಯಿತು. ನಂತರ ಪೌರ ಕಾರ್ಮಿಕರ ಜತೆ ಮುಖ್ಯಾಧಿಕಾರಿ, ಸದಸ್ಯರು ಡಿಜೆ ಸೌಂಡಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಅನಿಲ ಬಿಜ್ಜಳ, ಸಂಗಪ್ಪ ಸಜ್ಜನ, ಹನುಮಂತ ಬಸರಗಿಡ, ನಂದಿನಿ ರಾಮಾಂಜನೇಯರೆಡ್ಡಿ, ಶೇಷಪ್ಪ ಪೂಜಾರ, ರಾಕೇಶ ಕಂಪ್ಲಿ, ಸಿದ್ದೇಶ ಕಲುಬಾಗಿಲಮಠ, ರಾಜಸಾಬ್ ನಂದಾಪೂರ, ಸುರೇಶ ಗುಗ್ಗಳಶೆಟ್ರ, ಪಪಂ ನಾಮನಿರ್ದೇಶಿತ ಸದಸ್ಯರಾದ ಈರಪ್ಪ ಹಾದಿಮನಿ, ಶಾಂತಪ್ಪ ಬಸರಿಗಿಡ, ಗಂಗಾಧರ ಚೌಡ್ಕಿ, ಕನಕಪ್ಪ ಸೇರಿದಂತೆ ಇತರರಿದ್ದರು.