ಮುನಿಯಾಲ್ ಆಯುರ್ವೇದ ಕಾಲೇಜಿಗೆ ರಾಷ್ಟ್ರ ಮಟ್ಟದಲ್ಲಿ ‘ಎ’ ಗ್ರೇಡ್

| Published : Nov 07 2024, 11:52 PM IST

ಮುನಿಯಾಲ್ ಆಯುರ್ವೇದ ಕಾಲೇಜಿಗೆ ರಾಷ್ಟ್ರ ಮಟ್ಟದಲ್ಲಿ ‘ಎ’ ಗ್ರೇಡ್
Share this Article
  • FB
  • TW
  • Linkdin
  • Email

ಸಾರಾಂಶ

ನ್ಯಾಷನಲ್ ಕಮಿಷನ್ ಫಾರ್ ಇಂಡಿಯನ್ ಸಿಸ್ಟಂ ಆಫ್ ಮೆಡಿಸಿನ್ (ಭಾರತೀಯ ಚಿಕಿತ್ಸಾ ಪದ್ಧತಿ ರಾಷ್ಟ್ರೀಯ ಆಯೋಗ) ನಡೆಸಿದ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ (ಭಾರತೀಯ ಗುಣವತ್ತಾ ಪರಿಷದ್) ಮೌಲ್ಯಾಂಕನದಲ್ಲಿ ಇಲ್ಲಿನ ಮುನಿಯಾಲ್ ಆಯುರ್ವೇದ ಕಾಲೇಜು, ರಾಷ್ಟ್ರಮಟ್ಟದಲ್ಲಿ ‘ಎ’ ಗ್ರೇಡ್ ಪಡೆದಿದೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ನ್ಯಾಷನಲ್ ಕಮಿಷನ್ ಫಾರ್ ಇಂಡಿಯನ್ ಸಿಸ್ಟಂ ಆಫ್ ಮೆಡಿಸಿನ್ (ಭಾರತೀಯ ಚಿಕಿತ್ಸಾ ಪದ್ಧತಿ ರಾಷ್ಟ್ರೀಯ ಆಯೋಗ) ನಡೆಸಿದ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ (ಭಾರತೀಯ ಗುಣವತ್ತಾ ಪರಿಷದ್) ಮೌಲ್ಯಾಂಕನದಲ್ಲಿ ಇಲ್ಲಿನ ಮುನಿಯಾಲ್ ಆಯುರ್ವೇದ ಕಾಲೇಜು, ರಾಷ್ಟ್ರಮಟ್ಟದಲ್ಲಿ ‘ಎ’ ಗ್ರೇಡ್ ಪಡೆದಿದೆ.ಈ ಮೌಲ್ಯಾಂಕನವು ಶೈಕ್ಷಣಿಕ ಗುಣಮಟ್ಟ, ಶಿಕ್ಷಕರ ಕ್ಷಮತೆ, ವಿದ್ಯಾರ್ಥಿಗಳ ಕಾರ್ಯ ಕ್ಷಮತೆ, ಸಂಶೋಧನೆ ಹಾಗೂ ಉತ್ಕೃಷ್ಟ ಗ್ರಂಥ ಪ್ರಕಟಣೆಗಳು ಮತ್ತು ಅಳವಡಿಸಿಕೊಂಡ ನೂತನ ಕಲಿಕಾ ವಿಧಾನಗಳು ಮೊದಲಾದ ಮಾನದಂಡಗಳ ಆಧಾರದ ಮೇಲೆ ನಡೆಸಲ್ಪಡುತ್ತದೆ.ಜೀವಿಗಳನ್ನು ಕಾಡುವ ಕಷ್ಟಸಾಧ್ಯ ಕಾಯಿಲೆಗಳಿಗೆ ಸಂಸ್ಥೆಯ ವಿನೂತನ ಔಷಧಿಗಳ ಆವಿಷ್ಕಾರ ಹಾಗೂ ಆ ಸಂಶೋಧನೆಗಳ ರಕ್ಷಣೆಗೆ ದೊರೆತ ೨೦ ವರ್ಷಗಳ ೧೭ ಅಮೆರಿಕದ ಪೇಟೆಂಟ್‌ಗಳು ಸಂಸ್ಥೆಯ ರಾಷ್ಟ್ರಮಟ್ಟದ ಪ್ರಗತಿಗೆ ತನ್ನ ಕೊಡುಗೆ ನೀಡಿದೆ.ದೇಶದಲ್ಲಿರುವ ೫೦೦ಕ್ಕೂ ಹೆಚ್ಚಿನ ಆಯುರ್ವೇದ ಕಾಲೇಜುಗಳ ನಡುವೆ ಮೊದಲ ಹಂತದ ಮೌಲ್ಯಾಂಕನದಲ್ಲಿಯೇ ಉನ್ನತ ‘ಎ’ ಗ್ರೇಡ್ ಪಡೆದದ್ದು ಸಂಸ್ಥೆಯ ಗುಣಮಟ್ಟದ ಶಿಕ್ಷಣಕ್ಕೆ ದ್ಯೋತಕವಾಗಿದ್ದು, ಆಯುರ್ವೇದದ ಬೋಧನೆ, ಸಂಶೋಧನೆ ಹಾಗೂ ಚಿಕಿತ್ಸಾ ಕ್ಷೇತ್ರಗಳಲ್ಲಿ ಇನ್ನಷ್ಟು ಸಾಧನೆ ಮಾಡಲು ಸ್ಫೂರ್ತಿಯಾಗಿದೆ ಎಂದು ಕಳೆದ ೮೦ ವರ್ಷಗಳಿಂದ ಆಯುರ್ವೇದ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿರುವ ಸಂಸ್ಥೆಯ ಅಧ್ಯಕ್ಷ ಡಾ. ಎಂ. ವಿಜಯಭಾನು ಶೆಟ್ಟಿ ತಿಳಿಸಿದ್ದಾರೆ.