ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದ ಹೊಸ್ಕೇರಿ ಪ್ರದೇಶದ ನಿವಾಸಿಯಾದ ದೇವಯ್ಯ ಅವರ ತೋಟದ ಲೈನುಮನೆಯಲ್ಲಿ ವಾಸವಿದ್ದ ಬುರೋ ಎಂಬಾತನನ್ನು ದೊಣ್ಣೆಯಿಂದ ಹೊಡೆದ ಕೊಲೆ ಮಾಡಿ ಮೃತ ದೇಹವನ್ನು ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಡಿಕೇರಿ: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದ ಹೊಸ್ಕೇರಿ ಪ್ರದೇಶದ ನಿವಾಸಿಯಾದ ದೇವಯ್ಯ ಅವರ ತೋಟದ ಲೈನುಮನೆಯಲ್ಲಿ ವಾಸವಿದ್ದ ಬುರೋ ಎಂಬಾತನನ್ನು ದೊಣ್ಣೆಯಿಂದ ಹೊಡೆದ ಕೊಲೆ ಮಾಡಿ ಮೃತ ದೇಹವನ್ನು ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯ ನಡೆದ ಸ್ಥಳಕ್ಕೆ ಸೂರಜ್ ಪಿ.ಎ., ಡಿಎಸ್‌ಪಿ, ಮಡಿಕೇರಿ ಉಪವಿಭಾಗ, ಚಂದ್ರಶೇಖರ್ ಎಚ್.ವಿ., ಪಿಐ, ಮಡಿಕೇರಿ ಗ್ರಾಮಾಂತರ ಪೊ.ಠಾ, ಜವರೇ ಗೌಡ, ಪಿಎಸ್‌ಐ, ಮಡಿಕೇರಿ ಗ್ರಾಮಾಂತರ ಪೊ.ಠಾ ಮತ್ತು ಠಾಣೆ ಅಪರಾಧ ಪತ್ತೆ ಸಿಬ್ಬಂದಿಗಳು, ಅಪರಾಧ ಕೃತ್ಯ ಪರಿಶೀಲನಾ ತಜ್ಞರ ತಂಡ ಭೇಟಿ ನೀಡಿ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷಾಧಾರಗಳನ್ನು ಕಲೆ ಹಾಕಿದ್ದಾರೆ.

ಜ.11ರಂದು ರಾತ್ರಿ ಸಮಯದಲ್ಲಿ ಬುರೋ ಮತ್ತು ಪ್ರಶಾಂತ್ ಮುದಿ (ಬುರೋನ ಮಗ) ಮಧ್ಯಪಾನ ಮಾಡಿ ಕ್ಷುಲಕ ಕಾರಣಕ್ಕೆ ಜಗಳವಾಡಿದ್ದು, ಕುಡಿದ ಮತ್ತಿನಲ್ಲಿ ಪ್ರಶಾಂತ್ ಮುದಿ ದೊಣ್ಣಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರಿಂದ ಬುರೋ ಮೃತಪಟ್ಟಿದ್ದರು. ಬಳಿಕ ಬುರೋನ ಮೃತದೇಹವನ್ನು ಸುಟ್ಟುಹಾಕಿ ಸಾಕ್ಷ್ಯ ನಾಶ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿರುತ್ತದೆ.ಕೃತ್ಯ ನಡೆಸಿದ 8 ಜನ ಆರೋಪಿಗಳನ್ನು ಜ. 14 ರಂದು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.ಪ್ರಶಾಂತ್ ಮುದಿ (27), ದೇವಯ್ಯ ಎಂ.ಎಸ್. (71), ಭಾರತಿ ಎಂ.ಡಿ., (57) ವರ್ಷ, ಶ್ರೀಕಾಂತ್ ಮುದಿ (25), ಸುಧನ್ ಮುದಿ (50), ಲಕ್ಷ್ಮೀ ಮುದಿ (37), ತನುಶ್ರೀ (20), ಬಸಂತಿ ಮುದಿ, (49) ಬಂಧಿತ ಆರೋಪಿಗಳು.