ಯುವಕನ ಕೊಲೆ: ಕಾಲುವೆ ಬಳಿ ಶವ

| Published : Feb 17 2024, 01:16 AM IST / Updated: Feb 17 2024, 01:17 AM IST

ಸಾರಾಂಶ

ತಾಲೂಕಿನ ಹುಲಿಗೊಂದಿ ಗ್ರಾಮದಲ್ಲಿ ಯುವಕನ ಕೊಲೆ ಮಾಡಿ ಶವವನ್ನು ಕಾಲುವೆ ಬಳಿ ಎಸೆದು ಹೋಗಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ಕನ್ನಡಪ್ರಭ ವಾರ್ತೆ, ಕಡೂರು

ತಾಲೂಕಿನ ಹುಲಿಗೊಂದಿ ಗ್ರಾಮದಲ್ಲಿ ಯುವಕನ ಕೊಲೆ ಮಾಡಿ ಶವವನ್ನು ಕಾಲುವೆ ಬಳಿ ಎಸೆದು ಹೋಗಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಾರೀ ಬೀಳು ಎಂಬ ಗ್ರಾಮದ ದರ್ಶನ್ (22) ಕೊಲೆಯಾದ ಯುವಕ. ಈತ ಬೆಂಗಳೂರಿನಲ್ಲಿ ಸ್ನೇಹಿತರೊಂದಿಗೆ ವಾಸಿಸುತ್ತಿದ್ದ.

ಕಡೂರು ತಾಲೂಕಿನ ಹುಲಿಗೊಂದಿ ಗ್ರಾಮದ ಮಲ್ಲೇಶಪ್ಪ ಅವರ ಮಗಳನ್ನು ಮಾರಿಬೀಳು ಗ್ರಾಮದ ಕೃಷ್ಣಮೂರ್ತಿ ಎಂಬುವರಿಗೆ ಮದುವೆ ಮಾಡಿದ್ದು ಅವರ ಮಗನೇ ಕೊಲೆಯಾಗಿರುವ ಈ ದರ್ಶನ್. ಸ್ನೇಹಿತರೊಂದಿಗೆ ದರ್ಶನ್‌ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ .

1 ತಿಂಗಳ ಹಿಂದೆ ದರ್ಶನ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಕಡೂರು ತಾಲೂಕಿನ ಹುಲಿಗೊಂದಿ ಗ್ರಾಮದ ತನ್ನ ತಾತ ಮಲ್ಲೇಶಪ್ಪನ ಮನೆಗೆ ಬಂದಿದ್ದು ನಂತರ ಇಬ್ಬರು ಸ್ನೇಹಿತರು ವಾಪಸ್ ತೆರಳಿದ್ದರು ಎನ್ನಲಾಗಿದೆ. ದರ್ಶನ್ ಕಳೆದ ಫೆ 15ರ ಗುರುವಾರ ಸಂಜೆ 6 ಗಂಟೆಗೆ ಮತಿಘಟ್ಟಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿ, ರಾತ್ರಿ 10 ಗಂಟೆಗೆ ವಾಪಸ್ ತಾತನ ಮನೆಗೆ ಬಂದು ಊಟ ಮಾಡಿ ಮಲಗಿದ್ದನು.

ಆಗ ಮಧ್ಯರಾತ್ರಿ ಸುಮಾರು12 ಗಂಟೆಗೆ ಸ್ನೇಹಿತರು ಬಂದಿರುವುದಾಗಿ ತಿಳಿಸಿ ಹೋದ ದರ್ಶನ್‌ ನಂತರ ಅವನು ಹಿಂದುರುಗಿರಲಿಲ್ಲ. ಶುಕ್ರವಾರ ಬೆಳಿಗ್ಗೆ ರಸ್ತೆ ಪಕ್ಕದ ಕಾಲುವೆಯಲ್ಲಿ ಯಾರೋ ಅಪರಿಚಿತರು ಅವನನ್ನು ಕೊಲೆ ಮಾಡಿ ಬಿಸಾಕಿ ಹೋಗಿದ್ದಾರೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ತಾತ ಮಲ್ಲೇಶಪ್ಪ ನೀಡಿದ ದೂರನ್ನು ಪೊಲೀಸರು ದಾಖಲಿಸಿದ್ದಾರೆ.

ಸ್ಥಳಕ್ಕೆ ತರೀಕೆರೆ ಡಿವೈಎಸ್ಪಿ ಹಾಲಮೂರ್ತಿರಾವ್, ವೃತ್ತನಿರೀಕ್ಷಕ ದುಗ್ಗಪ್ಪ, ಸಬ್ ಇನ್ಸ್ ಪೆಕ್ಟರ್ ಧನಂಜಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಂದಿನ ಕ್ರಮ ಕೈಗೊಂಡು ಆರೋಪಿಗಳ ಪತ್ತೆಗೆ ಕಡೂರು ಪೊಲೀಸರು ಬಲೆ ಬೀಸಿದ್ದಾರೆ.