ಮಾನಸಿಕ ವಿಕಾಸಕ್ಕೆ ಸಂಗೀತ ಸಹಾಯಕ

| Published : Mar 17 2024, 02:00 AM IST

ಸಾರಾಂಶ

ಬೆಳಗಾವಿ: ಸಂಗೀತ ಜೀವನಕ್ಕೆ ಶಾಂತಿ, ನೆಮ್ಮದಿ ನೀಡುತ್ತದೆ. ಜೊತೆಗೆ ಮಾನಸಿಕ ವಿಕಾಸಕ್ಕೂ ಸಂಗೀತ ಸಹಯೋಗಿ ಎಂದು ವೇಣು ಗ್ರಾಮ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ನಾರಾಯಣ ಗಣಾಚಾರಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಂಗೀತ ಜೀವನಕ್ಕೆ ಶಾಂತಿ, ನೆಮ್ಮದಿ ನೀಡುತ್ತದೆ. ಜೊತೆಗೆ ಮಾನಸಿಕ ವಿಕಾಸಕ್ಕೂ ಸಂಗೀತ ಸಹಯೋಗಿ ಎಂದು ವೇಣು ಗ್ರಾಮ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ನಾರಾಯಣ ಗಣಾಚಾರಿ ಹೇಳಿದರು .

ಕೆಎಲ್ಇ ಸಂಗೀತ ವಿಭಾಗದ ಸಭಾಗೃಹದಲ್ಲಿ ಹಿಂದುಸ್ತಾನಿ ಸಂಗೀತ ಸಂಜೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಗೀತ ಮಾನಸಿಕ ಸದೃಢತೆಗೆ ಮತ್ತು ಮಾನಸಿಕ ಸಂತುಲನಕ್ಕೆ ಹೇಳಿ ಮಾಡಿಸಿದ ಔಷಧಿ. ಸಂಗೀತ ಎಲ್ಲ ರೋಗಗಳಿಗೆ ಮದ್ದು. ಆದ್ದರಿಂದ ಎಲ್ಲರೂ ಸಂಗೀತ ಕೇಳುವ ಹವ್ಯಾಸ ಹೆಚ್ಚು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೆಎಲ್ಇ ಸಂಗೀತ ವಿಭಾಗದ ಮುಖ್ಯಸ್ಥ ರಾಜಾರಾಮ್ ಅಂಬರಡೆಕರ್ ಉದ್ಘಾಟಿಸಿದರು. ಸಂಗೀತ ಕಾರ್ಯಕ್ರಮ ನೀಡಲು ಆಗಮಿಸಿದ್ದ ಧಾರವಾಡದ ರಾಧಾ ದೇಸಾಯಿ ಮತ್ತು ಕಿತ್ತೂರಿನ ರಜತ್ ಕುಲಕರ್ಣಿ ಅವರು ನೆರೆದಂತ ಸಂಗೀತ ರಸಿಕರನ್ನು ಸಂಗೀತ ಲೋಕದಲ್ಲಿ ತೇಲಿಸಿದರು. ಡಾ.ಸುನೀತಾ ಪಾಟೀಲ್ ಸ್ವಾಗತಿಸಿದರು. ಪ್ರಮೋದ್ ಶೇಟ್ ವಂದಿಸಿದರು.