ಸಂಗಿತದಿಂದ ಮನಸ್ಸಿಗೆ ನೆಮ್ಮದಿ ಸಾಧ್ಯ: ಗವಿಸಿದ್ಧಯ್ಯ ಶ್ರೀ

| Published : Jul 11 2025, 12:31 AM IST

ಸಂಗಿತದಿಂದ ಮನಸ್ಸಿಗೆ ನೆಮ್ಮದಿ ಸಾಧ್ಯ: ಗವಿಸಿದ್ಧಯ್ಯ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಮಾನವ ಎಲ್ಲದರಲ್ಲೂ ಮುಂದೆ ಇದ್ದಾನೆ, ಆದರೆ ಮನಸ್ಸಿಗೆ ನೆಮ್ಮದಿ ಪಡೆಯುವಲ್ಲಿ ಹಿಂದೆ ಇದ್ದಾನೆ

ಗದಗ: ಸಂಗೀತ ಆಲಿಸುವುದರಿಂದ ಮನಸ್ಸಿಗೆ ಸಮಾಧಾನ, ನೆಮ್ಮದಿ ಸಿಗುತ್ತದೆ ಎಂದು ಅರಳಹಳ್ಳಿಯ ಗವಿಶಿದ್ದಯ್ಯ ಸ್ವಾಮಿಗಳು ಹೇಳಿದರು.

ತಾಲೂಕಿನ ಹರ್ಲಾಪೂರ ಗ್ರಾಮದಲ್ಲಿ ಶ್ರೀಗುರು ಬಸವಾನಂದ ಸಾಂಸ್ಕೃತಿಕ ಸೇವಾ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಂಯುಕ್ತಾಶ್ರಯದಲ್ಲಿ ನಡೆದ ಗಾನ ಲಹರಿ ಸಂಗಿತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಾನವ ಎಲ್ಲದರಲ್ಲೂ ಮುಂದೆ ಇದ್ದಾನೆ, ಆದರೆ ಮನಸ್ಸಿಗೆ ನೆಮ್ಮದಿ ಪಡೆಯುವಲ್ಲಿ ಹಿಂದೆ ಇದ್ದಾನೆ. ಜೀವ ಕೊಡುವ ಶಕ್ತಿ ಜೀವನ ಪುರಿ ರಾಗಕ್ಕೆ ಇದ್ದರೆ, ಮೇಗ ಮಲಾರ ರಾಗಕ್ಕೆ ಮಳೆ ಭರಿಸುವ ಶಕ್ತಿ ಇದೆ. ಸಂಗೀತಕ್ಕೆ ಸೋಲದೆ ಇರುವ ಮನಸ್ಸುಗಳಿಲ್ಲ, ಸೋಲದಿದ್ದರೆ ಅವುಗಳು ಮನಸ್ಸುಗಳು ಅಲ್ಲ ಎಂದರು.

ಈ ವೇಳೆ ವಕೀಲ ಶರಯ್ಯಸ್ವಾಮಿ, ಫಕ್ಕಿರಪ್ಪ ತಳವಾರ, ಶರಣಪ್ಪ ತೋಟದ, ಶರಣಪ್ಪ ಸರಗಣಾಚಾರ್ಯ, ಫಕ್ಕಿರಯ್ಯಸ್ವಾಮಿ ಹರ್ತಿಮಠ ಸೇರಿದಂತೆ ಮುಂತಾದವರು ಇದ್ದರು. ಬಸವರಾಜ ವಂದಿಸಿದರು.