ಕಲಾ ಸಾಧನಾ ಸಂಸ್ಥೆ ವತಿಯಿಂದ ಆಯೋಜಿಸಲಾದ ಸ್ವರಾನುಬಂಧ ಸಂಗೀತ ಉತ್ಸವ
ಮಂಗಳೂರು: ಸಂಗೀತ ಕಲೆಯನ್ನು ಬೆಳೆಸಲು ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ ಎಂದು ಎಕ್ಸ್‌ಪರ್ಟ್ ಕಾಲೇಜು ಉಪಾಧ್ಯಕ್ಷೆ ಉಷಾಪ್ರಭಾ ನಾಯಕ್ ಹೇಳಿದ್ದಾರೆ.
ನಗರದ ಕಲಾ ಸಾಧನಾ ಸಂಸ್ಥೆ ವತಿಯಿಂದ ಆಯೋಜಿಸಲಾದ ಸ್ವರಾನುಬಂಧ ಸಂಗೀತ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಸಂಗೀತಕ್ಕೂ ಸ್ವರಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಹೇಳಿದರು.ಕಲಾವಿದರಿಗೆ ಸನ್ಮಾನ ನೆರವೇರಿಸಿ ಮಾತನಾಡಿದ ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕಿಶೋರ್ ಆಳ್ವ ಮಾತನಾಡಿ, ಸಂಗೀತ ಆಲಿಸುವುದರ ಮೂಲಕ ಮಾನಸಿಕ ನೆಮ್ಮದಿ ಪಡೆಯಲು ಸಾಧ್ಯ ಎಂದು ಹೇಳಿದರು.
ಎಂಆರ್‌ಪಿಎಲ್ ಕಂಪೆನಿ ಗ್ರೂಪ್ ಜನರಲ್ ಮ್ಯಾನೆಜರ್ ಕೃಷ್ಣ ಹೆಗ್ಡೆ, ಕಾರ್ದೋಲೈಟ್ ಸ್ಪೆಷಲಿಟಿ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ಜನರಲ್ ಮ್ಯಾನೆಜರ್ ದಿವಾಕರ್ ಕೆ., ಮಂಗಳೂರು ಸ್ಮಾರ್ಟ್ ಸಿಟಿ ಜನರಲ್ ಮ್ಯಾನೆಜರ್ ಅರುಣ್‌ಪ್ರಭಾ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಕಲಾ ಸಾಧನಾ ಸಂಸ್ಥೆ ನಿರ್ದೇಶಕಿ ವಿಭಾ ಶ್ರೀನಿವಾಸ್ ನಾಯಕ್, ಸಂಸ್ಥೆ ಗೌರವ ಸಲಹೆಗಾರ ಶ್ರೀನಿವಾಸ್ ನಾಯಕ್ ಇಂದಾಜೆ ಇದ್ದರು. ಭಾಸ್ಕರ್ ರೈ ಕಟ್ಟ ಸ್ವಾಗತಿಸಿದರು. ಪುಷ್ಪರಾಜ್ ಬಿ.ಎನ್. ವಂದಿಸಿದರು. ಆಕಾಂಕ್ಷ ಶ್ರೀಶ ನಾಯಕ್ ವಂದಿಸಿದರು.ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರಾದ ಉಸ್ತಾದ್ ರಫೀಕ್ ಖಾನ್, ಪಂಡಿತ್ ರಾಜೇಂದ್ರ ನಾಕೋಡ್ ಹಾಗೂ ಪಂಡಿತ್ ಸಮೀರ್ ರಾವ್ ಅವರನ್ನು ಸನ್ಮಾನಿಸಲಾಯಿತು. ಬಳಿಕ ನಡೆದ ಜುಗಲ್ ಬಂದಿ ಕಾರ್ಯಕ್ರಮ ಜನಮನ ಸೂರೆಗೊಳಿಸಿತ್ತು.