ಸಂಗೀತಕ್ಕೆ ಮನಸ್ಸು ಹಗುರಗೊಳಿಸುವ ಶಕ್ತಿ ಇದೆ

| Published : Apr 01 2025, 12:46 AM IST

ಸಾರಾಂಶ

ಇಂದಿನ ತಂತ್ರಜ್ಞಾನ ಯುಗದಲ್ಲಿ ಮನುಷ್ಯ ಮಾನಸಿಕ ಒತ್ತಡದಲ್ಲಿ ಬದುಕಿದ್ದಾನೆ. ಕಲೆ, ಸಾಹಿತಿ, ಸಂಗೀತದ ಕಡೆ ಮನಸ್ಸು ಕೊಟ್ಟರೆ ಸ್ವಲ್ಫವಾದರೂ ನೆಮ್ಮದಿ ಕಂಡುಕೊಳ್ಳಬಹುದು. ಸಂಗೀತಕ್ಕೆ ಮನಸ್ಸನ್ನು ಹಗುರಗೊಳಿಸುವ ಶಕ್ತಿ ಇದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಆರ್.ಕೆ.ಬೈರಲಿಂಗಯ್ಯ ಹೇಳಿದರು. ನಗರದಲ್ಲಿ ಸಂಸ್ಕೃತಿ ಸೌರಭ ಟ್ರಸ್ಟ್ ಆಯೋಜಿ

ಕನ್ನಡಪ್ರಭ ವಾರ್ತೆ ರಾಮನಗರ

ಇಂದಿನ ತಂತ್ರಜ್ಞಾನ ಯುಗದಲ್ಲಿ ಮನುಷ್ಯ ಮಾನಸಿಕ ಒತ್ತಡದಲ್ಲಿ ಬದುಕಿದ್ದಾನೆ. ಕಲೆ, ಸಾಹಿತಿ, ಸಂಗೀತದ ಕಡೆ ಮನಸ್ಸು ಕೊಟ್ಟರೆ ಸ್ವಲ್ಫವಾದರೂ ನೆಮ್ಮದಿ ಕಂಡುಕೊಳ್ಳಬಹುದು. ಸಂಗೀತಕ್ಕೆ ಮನಸ್ಸನ್ನು ಹಗುರಗೊಳಿಸುವ ಶಕ್ತಿ ಇದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಆರ್.ಕೆ.ಬೈರಲಿಂಗಯ್ಯ ಹೇಳಿದರು.

ನಗರದಲ್ಲಿ ಸಂಸ್ಕೃತಿ ಸೌರಭ ಟ್ರಸ್ಟ್ ಆಯೋಜಿಸಿದ್ದ 18ನೇ ಸಂಸ್ಕೃತಿ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು,

ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ, ಎಷ್ಟೋ ತೆರೆ ಮರೆಯ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸುತ್ತಾ, ಅನೇಕ ಕಲಾವಿದರಿಗೆ ವೇದಿಕೆ ಸೃಷ್ಟಿಸಿ ಪ್ರೋತ್ಸಾಹಿಸುತ್ತಾ ಬರುತ್ತಿರುವ ಸಂಸ್ಕೃತಿ ಸೌರಭ ಟ್ರಸ್ಟ್ ಅಧ್ಯಕ್ಷ ಡಾ.ರಾ.ಬಿ.ನಾಗರಾಜ್ ನಮ್ಮ ಜಿಲ್ಲೆಯ ಸಾಂಸ್ಕೃತಿಕ ರಾಯಬಾರಿ. ಇಂತಹವರಿಗೆ ಸರ್ಕಾರದ ಪ್ರಶಸ್ತಿ ಗೌರವ ಸಿಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಕೆ.ಸತೀಶ್ ಮಾತನಾಡಿ, ಸಂಸ್ಕೃತಿ ಸೌರಭ ಟ್ರಸ್ಟ್ ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಾ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಸರ್ಕಾರಿ ನೌಕರರ ಸಂಘ ಮರಿದೇವರ ಕಾಲದಿಂದಲೂ ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ. ಸಾಂಸ್ಕೃತಿಕ ಸಂಘಟಕರಾದ ಡಾ.ರಾ.ಬಿ.ನಾಗರಾಜ್ ಕಲಾ ಸೇವೆಗೆ ಸಿಗಬೇಕಾದ ಗೌರವ ಸಿಗುವಲ್ಲಿ ನಾನೂ ಕೂಡಾ ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.

ಹರಿಕಥಾ ವಿದೂಷಿ ಶೀಲಾನಾಯ್ಡು ಮಾತನಾಡಿ, ನಮ್ಮ ಸನಾತನ ಭಕ್ತಿ ಮಾರ್ಗ, ಸಂಸ್ಕೃತಿಯನ್ನು ಇಂದಿನ‌ ಪೀಳಿಗೆ ಮರೆಯುತ್ತಿದೆ. ನಮ್ಮ ತಂದೆ ಆರ್.ಗುರುರಾಜುಲು ನಾಯ್ಡು ಕಥೆಗಳನ್ನು ಮಾಡುತ್ತಿದ್ದಾಗ ಅತ್ಯಂತ ವೈಭವದಿಂದ ಇದ್ದ ಈ ಪರಂಪರೆ ಇಂದು ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಸಂಸ್ಕೃತಿ ಸೌರಭ ಟ್ರಸ್ಟ್ ಅಧ್ಯಕ್ಷ ಡಾ.ರಾ.ಬಿ.ನಾಗರಾಜ್, ವಕೀಲ ಎಚ್.ಜಯರಾಮು, ಶ್ರೀ ಕೃಷ್ಣ ಸ್ಮೃತಿ ಕಲ್ಯಾಣ ಮಂಟಪ ಮಾಲೀಕರಾದ ಎ.ಎಸ್.ಕೃಷ್ಣಮೂರ್ತಿ, ರಂಗಭೂಮಿ ಕಲಾವಿದ ಎಚ್.ಎನ್.ರಮೇಶ್, ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಶ್ರೀಧರ್, ರೋಟರಿ ಮಾಜಿ ಅಧ್ಯಕ್ಷ ಆರ್.ಜಿ.ಚಂದ್ರಶೇಖರ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಬಿ.ಡಿ.ಚಿಕ್ಕಪುಟ್ಟೇಗೌಡ, ಸಮಾಜ ಸೇವಕ ಮಂಡ್ಯದ ಎಂ.ಜೆ.ನಾಗರಾಜು, ಗ್ರಾಪಂ ಮಾಜಿ ಸದಸ್ಯ ಕೂನಮುದ್ದನಹಳ್ಳಿ ರುದ್ರೇಶ್, ಡಿ.ದೇವರಾಜ ಅರಸು ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಎಚ್.ಸುರೇಶ್, ಭಾರತ್ ವಿಕಾಸ್ ಪರಿಷತ್ ಅಧ್ಯಕ್ಷ ರಾ.ಶಿ.ಬಸವರಾಜು,ರಂಗಭೂಮಿ ಕಲಾವಿದ ಎಸ್.ರುದ್ರೇಶ್, ಸಂಸ್ಕೃತಿ ಸೌರಭ ಟ್ರಸ್ಟ್ ಕಾರ್ಯದರ್ಶಿ ಎಚ್.ಬಿ.ಸಿದ್ಧರಾಜು ಉಪಸ್ಥಿತರಿದ್ದರು.

ಹಿರಿಯ ಗಾಯಕ ಎಸ್.ರಘುನಾಥ್, ಗಾಯಕಿ ಮೈಸೂರು ಶಾರದಾ ಯಾದವ್,ಜಿ.ಲಕ್ಷ್ಮೀದೇವಿ, ಬೇಲೂರು ಕುಮಾರ್, ನೂಪುರ ಸಂಗೀತ ತಂಡದ ಸಂಜಿತ್, ಧನ್ಯಂತ್, ದೀಕ್ಷಿತ್, ಹರ್ಷ,ಹಾಗೂ ಪುಟಾಣಿ ಅನ್ವಿತ್ ಭಕ್ತಿ, ಭಾವ, ಮಧುರ ಗೀತಗಾಯನ ನಡೆಸಿಕೊಟ್ಟರು. ಜಾಹ್ನವಿ ಸಿಂಗ್ ಭರತನಾಟ್ಯ, ಜಯಸೂರ್ಯ ವೀರಗಾಸೆ ಗಮನಸೆಳೆಯಿತು. ಪ್ರಭು ಮಾರ್ಷಲ್ ಆರ್ಡನ ಎಂ.ಪ್ರಭುದಾಸ್, ಶ್ಯಾಮ್ ಸುಂದರ್ ತಂಡ ಕರಾಟೆ ಪ್ರದರ್ಶನ ಮಾಡಿದರು.

ಪ್ರಶಸ್ತಿ ಪುರಸ್ಕೃತರು:

ಪ್ರತಿ ವರ್ಷದಂತೆ ವಿವಿಧ ಕ್ಷೇತ್ರದ ಮಹನೀಯರಿಗೆ ನೀಡುವ ಸಂಸ್ಕೃತಿ ಪುರಸ್ಕಾರವನ್ನ ನಿವೃತ್ತ ಉಪ ಶಿಕ್ಷಣಾಧಿಕಾರಿ ಕೆ.ಪಿ.ಶಿವಪ್ಪ, ಆಧ್ಯಾತ್ಮಿಕ ಚಿಂತಕರಾದ ಗೋಪಾಲಸ್ವಾಮಿ, ಸಮಾಜ ಸೇವಕ ಎಂ.ಮಹಾದೇವಪ್ಪ, ನಿವೃತ್ತ ಯೋಧ ಬಿ.ರಾಮಯ್ಯ, ಧಾರ್ಮಿಕ ಗಾಯನ ಕ್ಷೇತ್ರದ ಶಾಂತಾ ನಾಗಪ್ರದೀಪ್, ಸಂಗೀತ ವಿದೂಷಿ ರಮಣಿ ರಂಗರಾಜನ್, ಗಾಯಕ, ನಟ. ನಿರ್ದೇಶಕ ವಿ.ಲಿಂಗರಾಜು, ಸಾಹಿತಿ, ನಾಟಕಕಾರ ಡಾ.ಬಿ.ಜಯದೇವ್‌ಗೆ ನೀಡಿ ಗೌರವಿಸಲಾಯಿತು.

29ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ ಶ್ರೀ ಕೃಷ್ಣ ಸ್ಮೃತಿ ಕಲ್ಯಾಣ ಮಂಟಪದಲ್ಲಿನ ಸಂಗೀತ ವಿದ್ವಾನ್ ಬಿ.ಎಸ್.ನಾರಾಯಣ ಅಯ್ಯಂಗಾರ್ ವೇದಿಕೆಯಲ್ಲಿ ಸಂಸ್ಕೃತಿ ಸೌರಭ ಟ್ರಸ್ಟ್ ಆಯೋಜಿಸಿದ್ದ 18ನೇ ವರ್ಷದ ಸಂಸ್ಕೃತಿ ಉತ್ಸವವನ್ನು ಆರ್.ಕೆ.ಬೈರಲಿಂಗಯ್ಯ ಉದ್ಘಾಟಿಸಿದರು.