ತರೀಕೆರೆ: ಸಂಗೀತವು ಮನಸ್ಸಿಗೆ ಮುದ ನೀಡುತ್ತದೆ. ಆರೋಗ್ಯ ವೃದ್ಧಿಸುತ್ತದೆ ಹಾಗೂ ದೇವರ ದರ್ಶನ ಆಗುತ್ತದೆ ಇದಕ್ಕೆ ಸಾಕ್ಷಿ ಶ್ರೀ ಸದ್ಗುರು ತ್ಯಾಗರಾಜರು ಎಂದು ಶ್ರೀ ರಾಮ ಸೇವಾ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ಎ.ಎಸ್.ಸಾಯಿಕುಮಾರ್ ಹೇಳಿದ್ದಾರೆ.

- 25ನೇ ವರ್ಷದ ಶ್ರೀ ಸದ್ಗುರು ತ್ಯಾಗರಾಜರು, ಶ್ರೀ ಪುರಂದರದಾಸರು ಹಾಗೂ ಶ್ರೀ ಭಕ್ತ ಕನಕದಾಸರ ಆರಾಧನಾ ಮಹೋತ್ಸವ

ಸಂಗೀತವು ಮನಸ್ಸಿಗೆ ಮುದ ನೀಡುತ್ತದೆ. ಆರೋಗ್ಯ ವೃದ್ಧಿಸುತ್ತದೆ ಹಾಗೂ ದೇವರ ದರ್ಶನ ಆಗುತ್ತದೆ ಇದಕ್ಕೆ ಸಾಕ್ಷಿ ಶ್ರೀ ಸದ್ಗುರು ತ್ಯಾಗರಾಜರು ಎಂದು ಶ್ರೀ ರಾಮ ಸೇವಾ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ಎ.ಎಸ್.ಸಾಯಿಕುಮಾರ್ ಹೇಳಿದ್ದಾರೆ.

ಪಟ್ಟಣದ ಶ್ರೀ ರಾಮ ಸೇವಾ ಪ್ರತಿಷ್ಠಾನ ಟ್ರಸ್ಟ್ , ಶ್ರೀ ರಾಮ ಮಂದಿರದಿಂದ ರೈಲ್ಟೆ ನಿಲ್ದಾಣದ ಹತ್ತಿರ ಇರುವ ಶ್ರೀ ರಾಮ ಮಂದಿರ (ತವರು ಮನೆ) ಆವರಣದಲ್ಲಿ ನಡೆದ 25ನೇ ವರ್ಷದ ಶ್ರೀ ಸದ್ಗುರು ತ್ಯಾಗರಾಜರು, ಶ್ರೀ ಪುರಂದರದಾಸರು ಹಾಗೂ ಶ್ರೀ ಭಕ್ತ ಕನಕದಾಸರ ಆರಾಧನಾ ಮಹೋತ್ಸವಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಶ್ರೀರಾಮಮಂದಿರ 1939ರಲ್ಲಿ ಸ್ಥಾಪನೆ ಆಗಿ ಈವರೆವಿಗೂ ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಶ್ರೀ ಸದ್ಗುರು ತ್ಯಾಗರಾಜರು, ಶ್ರೀ ಪುರಂದರದಾಸರು ಹಾಗೂ ಶ್ರೀ ಭಕ್ತ ಕನಕದಾಸರ ಆರಾಧನಾ ಮಹೋತ್ಸವ ವಿದುಷಿ ಶಾರದಮ್ಮನವರ ಅಮೃತ ಹಸ್ತದಿಂದ ಪ್ರಾರಂಭವಾಗಿ ಈ ವರ್ಷ 25 ವರ್ಷಗಳು ತುಂಬಿದೆ ಎಂದು ತಿಳಿಸಲು ಸಂತೋಷವಾಗುತ್ತದೆ ಎಂದು ಹೇಳಿದರು.ಚಿಕ್ಕಮಗಳೂರು ಮನೋರಂಜಿನಿ ಸಂಗೀತ ಮಹಾ ವಿದ್ಯಾಲಯ ವಿದುಷಿ ಅಪರ್ಣ ಜಯರಾಮ್ ಮಾತನಾಡಿ 25ನೇ ಶ್ರೀ ಸದ್ಗುರು ತ್ಯಾಗರಾಜರು, ಶ್ರೀ ಪುರಂದರದಾಸರು ಹಾಗೂ ಶ್ರೀ ಭಕ್ತ ಕನಕದಾಸರ ಆರಾಧನಾ ಮಹೋತ್ಸವ ನಡೆಯು ತ್ತಿರುವುದು ಸಂತೋಷ. ಸಂಗೀತವನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು.ಪತ್ರಕರ್ತ ಅನಂತ ನಾಡಿಗ್ ಕಾರ್ಯಕ್ರಮ ಉದ್ಘಾಟಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದುಷಿ ಅಪರ್ಣ ಜಯರಾಮ್, ಪತ್ರಕರ್ತ ಆನಂತ ನಾಡಿಗ್, ಕಲಾವಿದ ಉಮೇಶ್ ರಾಜ್, ಸಂಗೀತ ಕ್ಷೇತ್ರದಿಂದ ವಿದುಷಿ ರೋಹಿಣಿ ನರಸಿಂಹಮೂರ್ತಿ, ಸುನಿತಾ ಕಿರಣ್ ಕುಮಾರ್, ಸಹನಾ ರಾಘವೇಂದ್ರರನ್ನು ಸನ್ಮಾನಿಸಲಾಯಿತು.ಸಂಗೀತ ಕಲಾವಿದರಾದ ಅಪರ್ಣ ಜಯರಾಮ್ ಅವರಿಂದ ಪಂಚರತ್ನ ಕೃತಿ ಗೋಷ್ಠಿ ಗಾಯನ ನಡೆಯಿತು, ಮೃದಂಗ ಪಕ್ಕ ವಾದ್ಯ ಸಾಯಿಕುಮಾರ್ ಸಾತ್ ನೀಡಿದರು. ಅರುಣ ಜಾವಗಲ್ ಶಿವಮೊಗ್ಗ ಮತ್ತು ಎ.ಎಸ್.ಸಾಯಿಕುಮಾರ್ ಕೊಳಲು ಹಾಗೂ ವೀಣಾ ವಾದನ, ಮಮತ ಮಹಿಳಾ ಸಮಾಜದ ಸದಸ್ಯರಿಂದ ದೇವರನಾಮ ಏರ್ಪಡಿಸಲಾಗಿತ್ತು. ಮಮತ ಮಹಿಳಾ ಸಮಾಜದ ಅಧ್ಯಕ್ಷೆ ಸಹನಾ, ಡಾ.ಟಿ.ಎಂ.ದೇವರಾಜ್, ಡಾ.ಶಂಕರ್, ಮಂಜುಳಾ ವಿಜಯಕುಮಾರ್, ರೇಣು ನವೀನ್, ಲೀಲಾವತಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.-

19ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ಶ್ರೀ ರಾಮ ಸೇವಾ ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ ವಿದುಷಿ ಅಪರ್ಣ ಜಯರಾಮ್, ಪತ್ರಕರ್ತ ಆನಂತ ನಾಡಿಗ್, ಕಲಾವಿದರಾದ ಉಮೇಶ್ ರಾಜ್, ವಿದುಷಿ ರೋಹಿಣಿ ನರಸಿಂಹಮೂರ್ತಿ, ಸುನಿತಾ ಕಿರಣ್ ಕುಮಾರ್, ಸಹನಾ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.ಶ್ರೀ ರಾಮ ಸೇವಾ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ಎ.ಎಸ್.ಸಾಯಿಕುಮಾರ್ ಮತ್ತಿತರರು ಇದ್ದರು.