ಸಾರಾಂಶ
ಚೆಲುವನಾರಾಯಣಸ್ವಾಮಿ ವೈಭವದ ಬಗ್ಗೆ ಕೇಳಿದ್ದೆ. ಹಲವು ಸಲ ಕ್ಷೇತ್ರಕ್ಕೆ ಬರುಬೇಕೆಂದುಕೊಂಡರೂ ಆಗುತ್ತಿರಲಿಲ್ಲ. ಈ ದಿನ ಮಹಾಭಿಷೇಕ ಇರುವುದು ನನಗೆ ತಿಳಿದಿರಲಿಲ್ಲ. ಕೇವಲ ದರ್ಶನಮಾಡುವ ಸಲುವಾಗಿ ಬಂದಿದ್ದೆ. ಆದರೆ, ಮಹಾಭಿಷೇಕದ ದಿನವೇ ಚೆಲುವನಾರಾಯಣನ ದಿವ್ಯ ಮಂಗಳರೂಪವನ್ನು ದರ್ಶನಮಾಡಿದ್ದು ನನ್ನಪೂರ್ವಜನ್ಮದ ಪುಣ್ಯವಾಗಿದೆ.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಚೆಲುವನಾರಾಯಣಸ್ವಾಮಿ ದಿವ್ಯಕ್ಷೇತ್ರದಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡುವುದಾಗಿ ಖ್ಯಾತಗಾಯಕ ಹಾಗೂ ಸಂಗೀತ ನಿರ್ದೇಶಕ ವಿಜಯಪ್ರಕಾಶ್ ಸಂಕಲ್ಪ ಮಾಡಿದರು.ವೈರಮುಡಿ ಬ್ರಹ್ಮೋತ್ಸವದ ಮಹಾಭಿಷೇಕದ ದರ್ಶನಕ್ಕೆ ಪತ್ನಿ ಮಹತಿರೊಂದಿಗೆ ಆಗಮಿಸಿ ಚೆಲ್ವತಿರುನಾರಾಯಣಸ್ವಾಮಿ ಅಭಿಷೇಕ ದರ್ಶನ ಮಾಡಿದರು. ನಂತರ ಯತಿರಾಜದಾಸರ್ ಗುರುಪೀಠಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಚೆಲುವನಾರಾಯಣಸ್ವಾಮಿ ವೈಭವದ ಬಗ್ಗೆ ಕೇಳಿದ್ದೆ. ಹಲವು ಸಲ ಕ್ಷೇತ್ರಕ್ಕೆ ಬರುಬೇಕೆಂದುಕೊಂಡರೂ ಆಗುತ್ತಿರಲಿಲ್ಲ. ಈ ದಿನ ಮಹಾಭಿಷೇಕ ಇರುವುದು ನನಗೆ ತಿಳಿದಿರಲಿಲ್ಲ. ಕೇವಲ ದರ್ಶನಮಾಡುವ ಸಲುವಾಗಿ ಬಂದಿದ್ದೆ. ಆದರೆ, ಮಹಾಭಿಷೇಕದ ದಿನವೇ ಚೆಲುವನಾರಾಯಣನ ದಿವ್ಯ ಮಂಗಳರೂಪವನ್ನು ದರ್ಶನಮಾಡಿದ್ದು ನನ್ನಪೂರ್ವಜನ್ಮದ ಪುಣ್ಯವಾಗಿದೆ ಎಂದರು.ಇಂದು ನಾನು ಮಾಡಿದ ಸ್ವಾಮಿ ದಿವ್ಯ ದರ್ಶನವನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ರಾಮಾನುಜರ ಕರ್ಮಭೂಮಿ ಮೇಲುಕೋಟೆಯ ಅಭಿವೃದ್ಧಿಗೆ ನನ್ನ ಕೈಲಾದ ಎಲ್ಲರೀತಿಯ ಸಹಕಾರ ನೀಡುತ್ತೇನೆ. ಯತಿರಾಜದಾಸರ್ ಗುರುಪೀಠದೊಂದಿಗೆ ಸಂಪರ್ಕದಲ್ಲಿರುತ್ತೇನೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಇತಿಹಾಸತಜ್ಞ ಪ್ರೊ.ಶಲ್ವಪ್ಪಿಳ್ಳೆ ಅಯ್ಯಂಗಾರ್ ಹಾಜರಿದ್ದು ವಿಯಪ್ರಕಾಶ್‌ಗೆ ದೇವರದರ್ಶನ ಮಾಡಿಸುವ ಜೊತೆಗೆ ಮೇಲುಕೋಟೆಯ ಇತಿಹಾಸ ಪರಂಪರೆ ಸಂಸ್ಕೃತಿಯ ಬಗ್ಗೆ ಮಾಹಿತಿ ನೀಡಿದರು. ಚೆಲುವನಾರಾಯಣನ ಬಗ್ಗೆ ಭಕ್ತಿ ಸಂಗೀತ ಗುಚ್ಚ ತಯಾರಿಸುವ ಜೊತೆಗೆ ಶೇಷ ಸಂಗೀತ ಕಾರ್ಯಕ್ರಮ ನೀಡುವಂತೆ ಕೋರಿದರು.ಸಂಗೀತ ಕಾರ್ಯಕ್ರಮ ನಡೆಸಲು ನಾನು ಸದಾ ಸಿದ್ಧನಿದ್ದೇನೆ ಎಂದು ವಿಜಯಪ್ರಕಾಶ್ ಸಮ್ಮತಿ ಸೂಚಿಸಿದರು. ಇದೇ ವೇಳೆ ಯತಿರಾಜದಾಸರ್ ಗುರುಪೀಠದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್‌ಗುರೂಜಿ ವಿಜಯಪ್ರಕಾಶ್ ಮಹತಿ ದಂಪತಿಗಳನ್ನುಭಗವಂತನ ಸ್ಮರಣಿಕೆ ನೀಡಿ ಗೌರವಿಸಿದರು.
ದೇಗುಲದ ಇಒ ಶೀಲಾ, ಸ್ಥಾನೀಕಂ ಸಂತಾನರಾಮನ್, ಲೇಖಕಿ ಯಶೋದ ಪ್ರಸಾದ್, ಪತ್ರಕರ್ತೆಯರಾದ ಸೌಮ್ಯಸಂತಾನಂ, ಶಾಲಿನಿಸಿಂಹ, ಅನುರಾಧ ಉಪಸ್ಥಿತರಿದ್ದರು. ಮೇಲುಕೋಟೆ ವಿಶೇಷ ಪ್ರಸಾದಗಳಾದ ಮನೋಹರ, ಸಕ್ಕರೆ ಪೊಂಗಲ್, ಪುಳಿಯೋಗರೆಯ ಆತಿಥ್ಯ ನೀಡಿದರು.