ಪಾಪಿ ಪಾಕಿಸ್ತಾನದ ವಿರುದ್ಧ ಮುಸ್ಲಿಂ ಬಾಂಧವರ ಪ್ರತಿಭಟನೆ

| Published : May 11 2025, 01:20 AM IST

ಸಾರಾಂಶ

ಆಪರೇಷನ್ ಸಿಂದೂರ ಹೆಸರಿನಲ್ಲಿ ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಭಾರತ ಗೆಲುವು ಸಾಧಿಸಬೇಕು. ಭಯೋತ್ಪಾದನೆ ಸಂಪೂರ್ಣ ನಿರ್ಮೂಲನೆಯಾಗಬೇಕು. ಪಾಕಿಸ್ತಾನ ಸರ್ವನಾಶವಾಗಲಿ ಎಂದು ಘೋಷಣೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಭಯೋತ್ಪಾದನೆ ಕೃತ್ಯಗಳನ್ನು ಬೆಂಬಲಿಸುತ್ತಿರುವ ಪಾಪಿ ಪಾಕಿಸ್ತಾನದ ವಿರುದ್ಧ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಮುಸ್ಲಿಂಮರು ಪ್ರತಿಭಟನೆ ನಡೆಸಿದರು.

ಕೊಪ್ಪ ಸರ್ಕಲ್‌ನಲ್ಲಿ ಮುಸ್ಲಿಮರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು. ಪಹಲ್ಗಾಂ ದಾಳಿಯನ್ನು ತೀವ್ರವಾಗಿ ಖಂಡಿಸಿದರು.

ಆಪರೇಷನ್ ಸಿಂದೂರ ಹೆಸರಿನಲ್ಲಿ ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಭಾರತ ಗೆಲುವು ಸಾಧಿಸಬೇಕು. ಭಯೋತ್ಪಾದನೆ ಸಂಪೂರ್ಣ ನಿರ್ಮೂಲನೆಯಾಗಬೇಕು ಎಂದು ಕರೆ ನೀಡಿದರು.

ಇದೇ ವೇಳೆ ಪ್ರತಿಭಟನಾಕಾರರು ಪಾಕಿಸ್ತಾನದ ವಿರುದ್ಧ ಧಿಕ್ಕಾರ ಕೂಗಿ ಪಾಕಿಸ್ತಾನ ಸರ್ವನಾಶವಾಗಲಿ ಎಂದು ಘೋಷಣೆ ಕೂಗಿದರು. ಪ್ರಧಾನಿ ಮೋದಿ ಯುದ್ಧ ನಡೆಯನ್ನು ಸ್ವಾಗತಿಸಿ ಭಯೋತ್ಪಾದನೆ ಬೆಂಬಲಿಸೋ ಪಾಕ್‌ಗೆ ತಕ್ಕ ಪಾಠ ಕಲಿಸಲು ಆಗ್ರಹಿಸಿದರು.

ಯುದ್ಧದ ಪ್ರತಿಕ್ರಿಯೆಗಳುಪಹಲ್ಗಾಂ ನರಮೇಧದ ಮೂಲಕ ಭಾರತವನ್ನು ಕೆಣಕಿ ಪಾಕಿಸ್ತಾನ ಯುದ್ಧವನ್ನು ಆಹ್ವಾನಿಸಿಕೊಂಡಿದೆ. ಈಗ ಭಾರತದ ದಾಳಿಯನ್ನು ಎದುರಿಸಲಾಗದೆ ತತ್ತರಿಸುತ್ತಿದೆ. ಉಗ್ರರ ದೇಶ ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ಪಾಕಿಸ್ತಾನ ಇತಿಹಾಸದಿಂದ ಪಾಠ ಕಲಿಯುತ್ತಿಲ್ಲ. ಶಾಂತಿ-ನೆಮ್ಮದಿಯಿಂದ ಇರುವುದಕ್ಕೂ ಬಿಡುತ್ತಿಲ್ಲ. ಮುಂಬೈ ದಾಳಿ, ಪುಲ್ವಾಮಾ, ಪಹಲ್ಗಾಂ ಹೀಗೆ ಎಷ್ಟೂಂತ ತಡೆದುಕೊಳ್ಳಲು ಸಾಧ್ಯ. ಇದಕ್ಕೆಲ್ಲಾ ಅಂತ್ಯ ಕಾಣಿಸಬೇಕಾದರೆ ಭಾರತ ಅನುಸರಿಸುತ್ತಿರುವ ಯುದ್ಧದ ನಡೆಯೇ ಸರಿಯಾದ ದಾರಿ. ಈಗಲೂ ಪಾಕಿಸ್ತಾನ ಎಚ್ಚೆತ್ತುಕೊಳ್ಳದಿದ್ದರೆ ಸರ್ವನಾಶ ಖಚಿತ.

- ಸಿ.ಎಸ್.ಪುಟ್ಟರಾಜು, ಮಾಜಿ ಸಚಿವಆಪರೇಷನ್ ಸಿಂದೂರ ಕಾರ್ಯಾಚರಣೆ ಇಡೀ ದೇಶದ ಜನರಲ್ಲಿ ದೇಶಪ್ರೇಮ ಹೆಚ್ಚುವಂತೆ ಮಾಡಿದೆ. ಪಾಕಿಸ್ತಾನ ಪದೇ ಪದೇ ಉಗ್ರರ ರೂಪದಲ್ಲಿ ಭಾರತವನ್ನು ಕೆಣಕುತ್ತಿದೆ, ಕೆರಳಿಸುತ್ತಿದೆ. ಅದಕ್ಕೆ ತಕ್ಕ ಉತ್ತರ ನೀಡುವ ಕಾಲ ಬಂದಿದೆ. ನಮ್ಮದು ತುಂಬಾ ಶಕ್ತಿಯುತವಾದ ಸೇನೆ. ನಮ್ಮವರು ಪಾಕಿಸ್ತಾನದವರಿಗೆ ದಿಟ್ಟ ಉತ್ತರ ನೀಡುತ್ತಿದ್ದಾರೆ. ಪಿಒಕೆಯನ್ನು ವಶಪಡಿಸಿಕೊಳ್ಳಲು ಇದು ಸೂಕ್ತ ಅವಕಾಶ.

- ಉದಯಕುಮಾರ್, ನಿವೃತ್ತ ಸೈನಿಕನಾವೆಲ್ಲಾ ಸೈನ್ಯದಲ್ಲಿ ಕೆಲಸ ಮಾಡುವಾಗ ತಂತ್ರಜ್ಞಾನ ಇಷ್ಟೊಂದು ಬೆಳವಣಿಗೆ ಸಾಧಿಸಿರಲಿಲ್ಲ. ಟ್ಯಾಂಕರ್‌ಗಳಲ್ಲಿ ಯುದ್ಧ ಮಾಡಬೇಕಿತ್ತು. ಈಗ ಒಂದು ದೇಶ ಇನ್ನೊಂದು ದೇಶದ ಗಡಿ ದಾಟದೆ ಯುದ್ಧ ಮಾಡಬಹುದಾದಷ್ಟು ತಂತ್ರಜ್ಞಾನ ಬೆಳೆದಿದೆ. ಯುದ್ಧ ಭಾರತ-ಪಾಕಿಸ್ತಾನದ ನಡುವಿನ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರೆತು ತಾರ್ಕಿಕ ಅಂತ್ಯ ಕಾಣಬೇಕು. ಆಗ ದೇಶದ ಒಳಗೆ ಶಾಂತಿ-ನೆಮ್ಮದಿ ನೆಲಸಲು ಸಾಧ್ಯ. ಪಿಒಕೆ, ಜಮ್ಮು-ಕಾಶ್ಮೀರ ಸಂಪೂರ್ಣವಾಗಿ ಭಾರತದ ಹಿಡಿತಕ್ಕೆ ಬರಬೇಕು.

- ಮಲ್ಲರಾಜು, ನಿವೃತ್ತ ಸೈನಿಕಸಿಂದೂರದ ಮಹತ್ವವನ್ನು ಭಾರತ ಜಗತ್ತಿಗೇ ಸಾರುವ ರೀತಿಯಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡುತ್ತಿದೆ. ಮನುಷ್ಯತ್ವಕ್ಕೆ ಬೆಲೆ ಕೊಡದೆ ರಾಕ್ಷಸೀಕೃತ್ಯ ನಡೆಸುವ ಉಗ್ರರ ಹುಟ್ಟಡಗಿಸುವುದು ಭಾರತದ ಗುರಿಯಾಗಿದೆ. ಅದಕ್ಕೆ ಪೂರಕವಾಗಿ ಸೇನೆ ಅದ್ಭುತವಾಗಿ ಕಾರ್ಯಾಚರಣೆ ನಡೆಸುತ್ತಾ ನಾಗರೀಕರ ಜೀವಗಳಿಗೆ ಹಾನಿಯಾಗದಂತೆ ಕಟ್ಟೆಚ್ಚರ ವಹಿಸಿದೆ. ಪಾಕಿಸ್ತಾನದ ಕ್ಷಿಪಣಿ, ಬಾಂಬ್ ಭಾರತದೊಳಗೆ ಬೀಳದಂತೆ ಎಲ್ಲವನ್ನೂ ಹೊಡೆದುರುಳಿಸುತ್ತಿದೆ. ಉಗ್ರರ ಅಟ್ಟಹಾಸ, ಪಾಕಿಸ್ತಾನದ ಕುತಂತ್ರ ಯುದ್ಧದೊಂದಿಗೆ ಅಂತ್ಯವಾಗಬೇಕಿದೆ.

- ಡಾ.ಯಾಶಿಕಾ ಅನಿಲ್, ಮಹಿಳಾ ವೈದ್ಯಾಧಿಕಾರಿಭಾರತೀಯ ಸೇನಾ ಯೋಜನಾಬದ್ಧವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಇದು ಹೆಣ್ಣು ಮಕ್ಕಳಿಗೆ ಸಲ್ಲಿಸುತ್ತಿರುವ ದೊಡ್ಡ ಗೌರವ. ಸಿಂದೂರವನ್ನು ಅಳಿಸಿದವರ ಗತಿ ಏನಾಗುತ್ತದೆ ಎನ್ನುವುದಕ್ಕೆ ಪಾಕಿಸ್ತಾನ ಸಾಕ್ಷಿಯಾಗಿದೆ. ಉಗ್ರರನ್ನು ಮುಂದೆ ಬಿಟ್ಟು ಭಾರತವನ್ನು ಕೆಣಕುತ್ತಿದ್ದ ಪಾಕಿಸ್ತಾನದ ಸೊಲ್ಲಡಗಿಸುವಲ್ಲಿ ಸೇನೆ ನಿರತವಾಗಿದೆ. ಸಿಂದೂರ ಆಪರೇಷನ್ ಮೂಲಕ ಪಾಕಿಸ್ತಾನಕ್ಕೆ ತನ್ನ ತಪ್ಪಿನ ಅರಿವಾಗುತ್ತಿದೆ. ಮುಂದೆಂದೂ ಭಾರತದ ತಂಟೆಗೆ ಬರದಂತೆ ಪಾಠ ಕಲಿಸಬೇಕಿದೆ.

- ಕನ್ನಿಕ ಶಿಲ್ಪ, ಸಂಸ್ಥಾಪಕಿ, ಕನ್ನಿಕ ಶಿಲ್ಪ ನವೋದಯ ಟ್ರಸ್ಟ್ಆಪರೇಷನ್ ಸಿಂದೂರ ಭಾರತ ಹೆಮ್ಮೆ ಪಡುವ ವಿಷಯ. ದೇಶದ ನಾಗರಿಕರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಪಾಠ ಕಲಿಸುತ್ತಿದೆ. ಉಗ್ರರ ಹೆಡೆಮುರಿ ಕಟ್ಟುವುದಕ್ಕಿದು ಸಕಾಲ. ಉಗ್ರರು ಮತ್ತೆಂದು ಭಾರತದ ಮೇಲೆ ಕಣ್ಣೆತ್ತಿಯೂ ನೋಡದಂತೆ ಮಟ್ಟ ಹಾಕಬೇಕಿದೆ. ಉಗ್ರರನ್ನು ಪೋಷಿಸಿದರೆ ಎಂತಹ ಗತಿ ಎದುರಾಗುತ್ತದೆ ಎನ್ನುವುದನ್ನು ಪಾಕಿಸ್ತಾನಕ್ಕೆ ಸ್ಪಷ್ಟವಾಗಿ ಮನದಟ್ಟು ಮಾಡಿಕೊಡಬೇಕಿದೆ. ಭಾರತದ ಮಹಿಳೆಯರಿಗೆ ಆಪರೇಷನ್ ಸಿಂದೂರ ಮೂಲಕ ಜಾಗತಿಕ ಮಟ್ಟದಲ್ಲಿ ಗೌರವ ತಂದುಕೊಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

- ನಾಗರತ್ನ, ಗೃಹಿಣಿಭಾರತವನ್ನು ಕೆಣಕಿ ಪಾಕಿಸ್ತಾನ ದೊಡ್ಡ ತಪ್ಪು ಮಾಡಿತು. ಅದಕ್ಕೆ ಪ್ರತಿಯಾಗಿ ಭಾರತ ನಡೆಸಿರುವ ಆಪರೇಷನ್ ಸಿಂದೂರ ಪಾಕಿಸ್ತಾನವನ್ನು ದಿಕ್ಕೆಡಿಸುವಂತೆ ಮಾಡಿದೆ. ಯುದ್ಧ ಮಾಡಲು ಶಕ್ತಿ ಇಲ್ಲದಿದ್ದರೂ ಒಣಜಂಭವನ್ನು ಪ್ರದರ್ಶಿಸುತ್ತಾ ಭಾರತದ ಮೇಲೆ ಉಗ್ರರನ್ನು ಕಳುಹಿಸಿ ನಾಗರಿಕರನ್ನು ಬಲಿತೆಗೆದುಕೊಳ್ಳುತ್ತಿತ್ತು. ಅದಕ್ಕೆ ಭಾರತ ಆಪರೇಷನ್ ಸಿಂದೂರದೊಂದಿಗೆ ತಕ್ಕ ಶಾಸ್ತಿ ಮಾಡಿದೆ. ಭಾರತೀಯ ಸೇನೆಗೆ ದೇಶದ ಪ್ರತಿಯೊಬ್ಬರೂ ಅಭಿನಂದನೆ ಸಲ್ಲಿಸಬೇಕು. ಕೇಂದ್ರಸರ್ಕಾರ ಕದನ ವಿರಾಮ ಘೋಷಿಸಿದ್ದರೂ ಪಿಒಕೆಯನ್ನು ಭಾರತದ ಕೈವಶ ಮಾಡಿಕೊಳ್ಳುವುದಕ್ಕೆ ಸುಸಮಯ. ಈಗ ಮೈಮರೆಯಬಾರದು.

- ಎಂ.ಯು.ಶ್ವೇತಾ, ಶಿಕ್ಷಕಿ