ಸಾರಾಂಶ
ಹುಬ್ಬಳ್ಳಿ: ಕರ್ನಾಟಕದಲ್ಲಿ ಆಡಳಿತದಲ್ಲಿ ಇರುವುದು ಕಾಂಗ್ರೆಸ್ ಸರ್ಕಾರವಲ್ಲ, ಇದು ಮುಸ್ಲಿಂ ಲೀಗ್ ಸರ್ಕಾರ. ಇದರಿಂದಾಗಿ ಮುಸ್ಲಿಂ ತುಷ್ಟೀಕರಣ ಹೆಚ್ಚಾಗಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದರು.
ಅವಳಿ ನಗರದಲ್ಲಿ ಅನ್ಯ ರಾಜ್ಯದವರ ಚಲನವಲನಕ್ಕೆ ನಿಯಂತ್ರಣ ಹಾಕುವಂತೆ ಒತ್ತಾಯಿಸಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ತಬ್ಲೀಘಿಗಳ ಸಂಖ್ಯೆ ಹೆಚ್ಚಾಗಿದೆ. ಸಮಾಜದ ಸೌಹಾರ್ದ ಹಾಳು ಮಾಡುವವರು ಈ ತಬ್ಲೀಘಿಗಳು. ಹೀಗಾಗಿ, ಅವರ ನಿಯಂತ್ರಣ ಮಾಡಬೇಕು. ದೇಶದ ತುಂಬ ಗಲಭೆಗೆ ಇವರೇ ಕಾರಣೀಕರ್ತರು. ಅವರನ್ನು ಮೊದಲು ಒದ್ದು ಹೊರಗೆ ಹಾಕಬೇಕು. ಅನುಮಾನಾಸ್ಪದ ವ್ಯಕ್ತಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದೀರ್ಘಾವಧಿ ವೀಸಾ ಪಡೆದು ರಾಜ್ಯದಲ್ಲಿ ವಾಸವಾಗಿರುವ ಪಾಕಿಸ್ತಾನಿಗಳನ್ನು ಕ್ಯಾನ್ಸರ್ ಇದ್ದಂತೆ. ಹೀಗಾಗಿ, ಅವರನ್ನು ಹೊರಗೆ ಹಾಕಬೇಕು. ಅವಳಿ ನಗರದಲ್ಲಿ ಇತ್ತೀಚಿಗೆ ಅಕ್ರಮ ಮಸೀದಿ, ದರ್ಗಾ, ಮದರಸಾರಗಳು ಹೆಚ್ಚಾಗಿವೆ. ಹೊಸ ಬಡಾವಣಗೆಳಲ್ಲಿ ವಾಸಕ್ಕೆಂದು ಸೈಟ್ ಪಡೆದು ಮಸೀದಿ, ದರ್ಗಾ, ಮದರಸಾ ನಿರ್ಮಿಸಲಾಗುತ್ತಿದೆ. ಇವುಗಳನ್ನು ತಡೆಯಬೇಕು ಎಂದು ಅವರು ಆಗ್ರಹಿಸಿದರು.ಆಂತರಿಕ ಜಿಹಾದಿಗಳ ಕೈವಾಡ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿಯಲ್ಲಿ ಆಂತರಿಕ ಜಿಹಾದಿಗಳ ಕೈವಾಡವಿದೆ. ಹೊರಗಿನ ಶತ್ರುಗಳನ್ನು ಎದುರಿಸಲು ನಮ್ಮ ಸೈನಿಕರು ಸಿದ್ಧರಿದ್ದಾರೆ. ಆದರೆ, ಆಂತರಿಕ ದೇಶದ್ರೋಹಿಗಳು, ಜಿಹಾದಿಗಳ ನಿಯಂತ್ರಣವಾಗಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ವಿಶೇಷ ಪಡೆ ರಚನೆಯಾಗಬೇಕು ಎಂದೂ ಅವರು ಆಗ್ರಹಿಸಿದರು.
ಇದೇ ವೇಳೆ ಅವಳಿ ನಗರದಲ್ಲಿ ಅಕ್ರಮವಾಗಿ ಮಸೀದಿ, ಮದರಸಾ, ದರ್ಗಾಗಳನ್ನು ನಿರ್ಮಿಸಲಾಗುತ್ತಿದ್ದು, ಇವುಗಳ ಕುರಿತಂತೆ ಸಮಗ್ರವಾಗಿ ಪರಿಶೀಲನೆ ನಡೆಸಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕು. ಕಾನೂನು ಬಾಹಿರ ಚಟುವಟಿಕೆ ಹೆಚ್ಚಾಗುತ್ತಿದ್ದು, ಗಾಂಜಾ, ಡ್ರಗ್ಸ್, ಕೊಲೆ- ಗಲಭೆಗಳು, ಗೋಹತ್ಯೆ, ಲವ್ ಜಿಹಾದ್ ಇತ್ಯಾದಿ ಪ್ರಕರಣಗಳು ದಿನೇ ದಿನೇ ಬೆಳೆಯುತ್ತಲೆ ಇವೆ. ಅವುಗಳ ನಿಯಂತ್ರಣಕ್ಕೆ ಕ್ರಮವಹಿಸಬೇಕು ಒಂದು ಒತ್ತಾಯಿಸಿದರು.ಶಾಸಕ ಅರವಿಂದ ಬೆಲ್ಲದ್ ಸಂಶಯ ವ್ಯಕ್ತಪಡಿಸಿದ ವ್ಯಕ್ತಿಗಳ ಕುರಿತಂತೆ ಆಯುಕ್ತರ ಹೇಳಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಶ್ರೀರಾಮಸೇನೆ, 15ರಿಂದ 50 ವಯಸ್ಸಿನವರು ಗುಜರಾತದಿಂದ ಧರ್ಮ ಪ್ರಚಾರಕ್ಕಾಗಿ ಬಂದಿದ್ದು ಉಲ್ಲೇಖಿಸಿದ್ದಾರೆ. 15 ವಯಸ್ಸಿನವರು ಧರ್ಮದ ಪ್ರಸಾರ ಮಾಡುವ ಅಧ್ಯಯನಶೀಲರು ಆಗಿರುತ್ತಾರೆಯೇ? ಇದು ಹಾಸ್ಯಾಸ್ಪದ. ಸಮಾಜದ, ದೇಶದ ಸುರಕ್ಷತೆಗೆ ಹಾಗೂ ಗಂಭಿರವಾಗಿ ಸ್ವಿಕರಿಸಿ ಸಮಗ್ರ ತನಿಖೆಯಾಗಬೇಕು ಎಂದಿದ್ದಾರೆ.
ಮನವಿ ಸಲ್ಲಿಸುವ ವೇಳೆ ಜಿಲ್ಲಾಧ್ಯಕ್ಷ ಅಣ್ಣಪ್ಪ ದಿವಟಗಿ, ಮಂಜು ಕಾಟಕರ, ಬಸು ದುರ್ಗದ, ಬಸವರಾಜ ಗೌಡರ, ಮಹಾಂತೇಶ ಟೊಂಗಳಿ, ವೀರಯ್ಯ ಸಾಲಿಮಠ, ಗುಣಧರ ಧಡೋತಿ, ಪ್ರವೀಣ ಮಾಳದಕರ ಸೇರಿದಂತೆ ಇತರರಿದ್ದರು.