ಸಾರಾಂಶ
ರಾಜ್ಯದಲ್ಲಿ ಇರೋದು ಕಾಂಗ್ರೆಸ್, ಸಿದ್ದರಾಮಯ್ಯ ಸರ್ಕಾರವಲ್ಲ. ಬದಲಾಗಿ ಮುಸ್ಲಿಂ ಸರ್ಕಾರ, ಜಮೀರ್ ಅಹಮದ್ ಸರ್ಕಾರ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಾಜ್ಯದಲ್ಲಿ ಇರೋದು ಕಾಂಗ್ರೆಸ್, ಸಿದ್ದರಾಮಯ್ಯ ಸರ್ಕಾರವಲ್ಲ. ಬದಲಾಗಿ ಮುಸ್ಲಿಂ ಸರ್ಕಾರ, ಜಮೀರ್ ಅಹಮದ್ ಸರ್ಕಾರ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಠ ಮಾನ್ಯಗಳ ಆಸ್ತಿ, ದೇವಸ್ಥಾನದ ಆಸ್ತಿಯನ್ನು ವಕ್ಪ್ ಅಂತಾ ಬರೆಸುತ್ತಾರಲ್ಲ ಎಷ್ಟು ಸೊಕ್ಕು ಇರಬೇಕು. 2018ರಲ್ಲಿ ಯರಕಲ್ ಸಿದ್ದರಾಮ ಮಠಕ್ಕೆ ವಕ್ಫ್ ಆಸ್ತಿ ಅಂತಾ ನೋಟೀಸ್ ಕೊಟ್ಟಿದ್ದಾರೆ. ವಕ್ಫ್ ಅಧಿಕಾರಿಗಳಿಗೆ ಜಮೀರ್ ಅಹಮದ್ ಸಿಎಂ ಆಗಿದ್ದಾರೆ ಎಂದು ಕಿಡಿಕಾರಿದರು.
ಜಮೀರ್ ಅಹಮದ್ ಪಾಕಿಸ್ತಾನದಲ್ಲಿ ಇದ್ದಾನೋ, ಹಿಂದುಸ್ತಾನದಲ್ಲಿ ಇದ್ದಾನೋ? ರಾಷ್ಟ್ರ ದ್ರೋಹಿ ಜಮೀರ್ ಅಹಮದ್ ಪಾಕಿಸ್ತಾನದಲ್ಲಿ ಹುಟ್ಟಬೇಕಿತ್ತು. ಅಪ್ಪಿತಪ್ಪಿ ಹಿಂದುಸ್ತಾನದಲ್ಲಿ ಹುಟ್ಟಿದ್ದಾನೆ. ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲದೇ ನೋಟೀಸ್ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು.ಜಮೀರ್ ಅಹಮದ್ ಮಂತ್ರಿಯಾಗಲು ಅಯೋಗ್ಯ. ಮೊದಲು ಅವನನ್ನು ಕಿತ್ತು ಬಿಸಾಕಿ. ಮಠ ಮಂದಿರ, ದೇವಸ್ಥಾನ, ಸಾಧು ಸಂತರ ಆಸ್ತಿ ವಾಪಸ್ ಕೊಡಿ. ದಲಿತರು, ಕುರುಬರು ನಿಮಗೆ ಓಟು ಹಾಕಿಲ್ವಾ?, ನಿಮಗೆ ರೈತರ, ಬೀರ ದೇವರ ಶಾಪ ತಟ್ಟದೆ ಬಿಡಲ್ಲ. ಶಾಪ ತಟ್ಟಬಾರದು ಅಂದ್ರೆ ರೈತರ ಭೂಮಿ ಉಳಿಸಿಕೊಡಿ ಎಂದು ಕುಟುಕಿದರು.ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ, ಸವದತ್ತಿ ಯಲ್ಲಮ್ಮ, ಹಾಸನಾಂಬೆ ಆಶೀರ್ವಾದ ನಿಮಗೆ ಸಿಗಬೇಕು ಅಂದ್ರೆ, ನೀವು ರೈತರ ಭೂಮಿ ಬಿಡಿಸಿಕೊಡಲಿ. ಇಲ್ಲದಿದ್ದರೆ ದೇವರ ಶಾಪ ತಟ್ಟುತ್ತದೆ, ಜೈಲಿಗೆ ಹೋಗಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಪ ಚುನಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ರೈತರ ಆಸ್ತಿ ಬಿಟ್ಟು ಹೋಗಬಾರದು ಅಂದ್ರೆ ಕಾಂಗ್ರೆಸ್ ಸೋಲಿಸಿ. ಹಿಂದುಪರ ಇರುವ ವ್ಯಕ್ತಿಗಳಿಗೆ ಮತ ಹಾಕಿ ಎಂದು ಕರೆ ನೀಡಿದರು.