ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಬ ಹುದು: ಶೈಲಾ ಕುಮಾರ್

| Published : Mar 29 2024, 12:50 AM IST

ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಬ ಹುದು: ಶೈಲಾ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೆ ವಿದ್ಯೆ ಕೆಲವರಿಗೆ ಸೀಮಿತವಾಗಿತ್ತು. ಅದನ್ನು ಕಲಿಯಬೇಕಾದರೆ ಗುರುವಿನ ಗುಲಾಮನಾಗಬೇಕಿತ್ತು. ಗುರುವನ್ನು ಹುಡುಕಿಕೊಂಡು ಹೋಗಬೇಕಾಗಿತ್ತು, ಆದರೆ ಈಗ ಮಠ ಮಾನ್ಯಗಳು, ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿರುವುದರಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಬಹುದಾದ ಅತ್ಯದ್ಭುತ ಅವಕಾಶಗಳಿದ್ದು ಅವುಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಶೈಲಾ ಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಹಿಂದೆ ವಿದ್ಯೆ ಕೆಲವರಿಗೆ ಸೀಮಿತವಾಗಿತ್ತು. ಅದನ್ನು ಕಲಿಯಬೇಕಾದರೆ ಗುರುವಿನ ಗುಲಾಮನಾಗಬೇಕಿತ್ತು. ಗುರುವನ್ನು ಹುಡುಕಿಕೊಂಡು ಹೋಗಬೇಕಾಗಿತ್ತು, ಆದರೆ ಈಗ ಮಠ ಮಾನ್ಯಗಳು, ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿರುವುದರಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಬಹುದಾದ ಅತ್ಯದ್ಭುತ ಅವಕಾಶಗಳಿದ್ದು ಅವುಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಶೈಲಾ ಕುಮಾರ್ ಹೇಳಿದರು.

ನಗರದ ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯ ಕಾಲೇಜ್‌ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಪ್ರಥಮ ವರ್ಷದ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ತರಬೇತಿ ಪಡೆಯುತ್ತಿರುವ ಪ್ರಶಿಕ್ಷಾಣಾರ್ಥಿಗಳು ಮುಂದಿನ ಪೀಳಿಗೆಗೆ ಉತ್ತಮ ಶಿಕ್ಷಣದ ಮೌಲ್ಯಗಳನ್ನು ಕಲಿಸಬೇಕು ಎಂದು ಹೇಳಿದರು. ಈ ದೇಶ ಸುಸಂಸ್ಕೃತವುಳ್ಳ ದೇಶ, ಹಲವಾರು ಮಹನೀಯರು, ದಾರ್ಶನಿಕರು, ಶರಣರು, ಸಂತರು ಆಪಾರ ಮೌಲ್ಯಗಳನ್ನು ಕೊಡುಗೆಯಾಗಿ ನೀಡಿದ್ದಾರೆ, ಅಂತಹ ಮೌಲ್ಯಯುತ ಶಿಕ್ಷಣದ ಮೂಲಕ ಮಕ್ಕಳಲ್ಲಿ ಹುದುಗಿರುವ ಅಂತರ್ಗತದೈವಿ ಶಕ್ತಿಯನ್ನು ಹೊರತೆಗೆಯುವ ಮಹತ್ತರ ಜವಾಬ್ದಾರಿ ಪ್ರಶಿಕ್ಷಾಣಾರ್ಥಿಗಳದ್ದಾಗಿದೆ ಎಂದರು. ಭಾವಿ ಶಿಕ್ಷಕರನ್ನು ನಿರ್ಮಿಸುವ ನೀವು ಮೊದಲು ಸಂಸ್ಕೃತಿ, ನಡೆ, ನುಡಿ, ಗೌರವ ಕೊಡುವುದನ್ನುಕಲಿತು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು, ಕೃತಕ ಬುದ್ದಿ ಮತ್ತೆಯಾದ ಮೊಬೈಲ್‌ಗಳಿಂದ ಆದಷ್ಟು ದೂರವಿದ್ದು, ಪುಸ್ತಕ, ಓದಿಗೆ ಹೆಚ್ಚಿನ ಮಹತ್ವ ನೀಡಿ ಜೀವನದಲ್ಲಿ ಗುರಿ, ಯಶಸ್ಸಿನ ಕಡೆ ಸಾಗಬೇಕಾದರೆ ಮೊದಲು ನಮ್ಮ ಜೀವನದಲ್ಲಿ ಶಿಸ್ತು, ನಿರಂತರ ಪ್ರಯತ್ನ, ಅಳವಡಿಸಿಕೊಳ್ಳಿ ಎಂದರು.

ಮುಖ್ಯ ಅತಿಥಿ ಕಾಳನಹುಂಡಿ ಗುರುಸ್ವಾಮಿ ಮಾತನಾಡಿ, ಮಹಾತ್ಮರ ಸಾಧನೆ ನುಡಿಮುತ್ತುಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ವ್ಯಕ್ತಿಗಳಾಗಬಹುದು. ಮನುಷ್ಯನ ಏಳಿಗೆಗಾಗಿ ಮಹಾತ್ಮರು ನಿಸ್ವಾರ್ಥ ಸೇವೆಯಿಂದ ಅನೇಕ ನುಡಿಮುತ್ತುಗಳನ್ನು ನೀಡಿದ್ದಾರೆ ಎಂದರು.ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಸಿ. ಬಸವಣ್ಣ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ಶಿವಶಂಕರ ಅರಸ್ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಥಮ ವರ್ಷದ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಹೂ ಗುಚ್ಚ ನೀಡಿ ಬರಮಾಡಿಕೊಳ್ಳಲಾಯಿತು.