ಸಾರಾಂಶ
ಬಾಗಲಕೋಟೆ: ತಾಲೂಕಿನ ಮುತ್ತತ್ತಿ ಗ್ರಾಮದ ಶ್ರೀ ಶಿವಯೋಗೇಶ್ವರ ಮಠದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಶ್ರೀಮಠದ ಪೀಠಾಧಿಪತಿ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಂಕಲ್ಪದಿಂದ ಶ್ರೀ ಶಿವಯೋಗೇಶ್ವರರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ನೆರವೇರಿತು. ಹಿರೇಮೂರಮಟ್ಟಿ ಸದ್ಭಕ್ತರಿಂದ ಮಠದ ಮೇಲೆ ಹಾಗೂ ಚಿಕ್ಕಮೂರಮಟ್ಟಿ ಸದ್ಭಕ್ತರಿಂದ ಕಳಸದ ಮೆರವಣಿಗೆ ಚಿಕ್ಕಹೊದ್ಲೂರ/ಹಿರೇಹೊದ್ಲೂರ ಸದ್ಭಕ್ತರಿಂದ ಹಗ್ಗದ ಮೆರವಣಿಗೆ, ಜಡ್ರಾಮಕುಂಟಿ ಸದ್ಭಕ್ತರಿಂದ ಶಿವಯೋಗೇಶ್ವರ ಗೋಪುರದ ಕಳಸದ ಮೆರವಣಿಗೆ ನೆರವೇರಿತು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ತಾಲೂಕಿನ ಮುತ್ತತ್ತಿ ಗ್ರಾಮದ ಶ್ರೀ ಶಿವಯೋಗೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.ಶ್ರೀಮಠದ ಪೀಠಾಧಿಪತಿ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಂಕಲ್ಪದಿಂದ ಶ್ರೀ ಶಿವಯೋಗೇಶ್ವರರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ನೆರವೇರಿತು. ಹಿರೇಮೂರಮಟ್ಟಿ ಸದ್ಭಕ್ತರಿಂದ ಮಠದ ಮೇಲೆ ಹಾಗೂ ಚಿಕ್ಕಮೂರಮಟ್ಟಿ ಸದ್ಭಕ್ತರಿಂದ ಕಳಸದ ಮೆರವಣಿಗೆ ಚಿಕ್ಕಹೊದ್ಲೂರ/ಹಿರೇಹೊದ್ಲೂರ ಸದ್ಭಕ್ತರಿಂದ ಹಗ್ಗದ ಮೆರವಣಿಗೆ, ಜಡ್ರಾಮಕುಂಟಿ ಸದ್ಭಕ್ತರಿಂದ ಶಿವಯೋಗೇಶ್ವರ ಗೋಪುರದ ಕಳಸದ ಮೆರವಣಿಗೆ ನೆರವೇರಿತು.
ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರುಗಿತು. ಮಠದ ಪೀಠಾಧಿಪತಿಗಳಾದ ಶ್ರೀಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಗಿರಿಸಾಗರ ಶ್ರೀಗಳು, ಬಿಲ್ಕೆರೂರ ಶ್ರೀಗಳು, ನಿಡಗುಂದಿ ಶ್ರೀಗಳು, ಕಲಾದಗಿ ಶ್ರೀಗಳು, ಚಿಮ್ಮಲಗಿ ಶ್ರೀಗಳು ಹಾಗೂ ಮಂಜುನಾಥ ಸ್ವಾಮಿಗಳು ವಿ.ಜಿ. ಪಾಟೀಲ ಹಾಗೂ ಗುರು ಹಿರಿಯರು ಉಪಸ್ಥಿತರಿದ್ದರು.