22ಕ್ಕೆ ಮುತ್ಯಾಲಮ್ಮ ದೇವಿ ರಥೋತ್ಸವ

| Published : May 14 2024, 02:01 AM IST

ಸಾರಾಂಶ

ಶಿವಾಜಿನಗರ ಸೆಪಿಂಗ್ಸ್ ರಸ್ತೆಯ ಮುತ್ಯಾಲಮ್ಮ ದೇವಿ ರಥೋತ್ಸವ ಮೇ 22ರಂದು ಜರುಗಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮೇ 14ರಂದು ವನ ಭೋಜನದ ಮೂಲಕ ಮಹೋತ್ಸವ ಪ್ರಾರಂಭವಾಗಲಿದೆ.

ದೀಪೋತ್ಸವ ಮೇ 21ರ ಮಂಗಳವಾರ ನಡೆಯಲಿದ್ದು, ಮೇ 29ರಂದು ಶಯನೋತ್ಸವದೊಂದಿಗೆ ಮುಕ್ತಾಯಗೊಳ್ಳಲಿದೆ.

ನೂರಾರು ವರ್ಷಗಳಿಂದ ನಡೆಯುತ್ತಿರುವ ಈ ರಥೋತ್ಸವಕ್ಕೆ ಬೆಂಗಳೂರು, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು ಸೇರಿ ರಾಜ್ಯದ ವಿವಿಧೆಡೆಯಿಂದ ಭಕ್ತರು ಬರಲಿದ್ದಾರೆ.

ಏಪ್ರಿಲ್ ತಿಂಗಳಲ್ಲಿ ರಥೋತ್ಸವ ನಡೆಯಬೇಕಿತ್ತು. ಆದರೆ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿತ್ತು ಎಂದು ಮುತ್ಯಾಲಮ್ಮ ದೇವಿ ಟ್ರಸ್ಟ್ ಪ್ರಕಟಣೆ ತಿಳಿಸಿದೆ.