ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಗುರಿ: ಶರಣಗೌಡ ಕಂದಕೂರು

| Published : Jun 23 2024, 02:05 AM IST

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಗುರಿ: ಶರಣಗೌಡ ಕಂದಕೂರು
Share this Article
  • FB
  • TW
  • Linkdin
  • Email

ಸಾರಾಂಶ

ಗುರುಮಠಕಲ್ ಪಟ್ಟಣದ ಮೋಮಿನಾಪುರ ಬಡಾವಣೆಯಲ್ಲಿ 2023-24ನೇ ಸಾಲಿನ ವಿವಿಧ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಕ್ರಿಯಾ ಯೋಜನೆಯಡಿ 1.15 ಕೋಟಿ ರು.ಗಳ ವೆಚ್ಚದ 11 ಕಾಮಗಾರಿಗಳಿಗೆ ಶಾಸಕರು ಅಡಿಗಲ್ಲು ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಗುರುಮಠಕಲ್

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಗುರಿ. ಪಟ್ಟಣದ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕ ಅನುದಾನದಡಿ ಕಾರ್ಯಯೋಜನೆ ರೂಪಿಸಲಾಗುವುದು. ಅಲ್ಪಸಂಖ್ಯಾತರ ಕಾಲೊನಿ ವಾರ್ಡ್‌ಗಳಿಗೆ ಮೂಲಸೌಕರ್ಯಕ್ಕೆ ಆದ್ಯತೆ ನೀಡಲಾಗಿದೆ. ಇನ್ನುಳಿದ ವಾರ್ಡ್‌ಗಳಿಗೆ ಸೌಕರ್ಯ ಒದಗಿಸಲಾಗುವುದು ಶಾಸಕ ಶರಣಗೌಡ ಕಂದಕೂರು ಹೇಳಿದರು.

ಪಟ್ಟಣದ ಮೋಮಿನಾಪುರ ಬಡಾವಣೆಯಲ್ಲಿ 2023-24ನೇ ಸಾಲಿನ ವಿವಿಧ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಕ್ರಿಯಾ ಯೋಜನೆಯಡಿ 1.15 ಕೋಟಿ ರು.ಗಳ ವೆಚ್ಚದ 11 ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತ ಸಚಿವರು ಕ್ಷೇತ್ರಕ್ಕೆ 5 ಕೋಟಿ ರು. ನೀಡಿದ್ದಾರೆ. 1 ಕೋಟಿ ರು.ಗಳ ವೆಚ್ಚದಲ್ಲಿ ಪುಟಪಾತ್‌ನಲ್ಲಿ ಸಮುದಾಯ ಭವನ, ಬಳಿಚಕ್ರ ಚರ್ಚ್ ಅಭಿವೃದ್ಧಿಗೆ 50 ಲಕ್ಷ, ಬಾಲಛೇಡ ಅಲ್ಪಸಂಖ್ಯಾತ ಶಾಲೆಗೆ 10 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು.

ಅಗ್ನಿಶಾಮಕ, ಕೋರ್ಟ್, ಕ್ರೀಡಾಂಗಣಕ್ಕೆ ಸ್ಥಳ ಗುರುತಿಸಲು ಕಂದಾಯ ಇಲಾಖೆ ಸ್ಥಳ ನೀಡಲು ತಿಳಿಸಿದರು. ಉತ್ತಮ ಗುಣಮಟ್ಟದ ಕಾಮಗಾರಿ ನಿರ್ವಹಣೆ ಮಾಡಲು ಸೂಚನೆ ನೀಡಿದರು.

ಕಳೆದ ಬಾರಿ ದಿ. ನಾಗನಗೌಡ ಕಂದಕೂರ ಶಾಸಕರಾಗಿದ್ದಾಗ ಪ್ರತಿ ವಾರ್ಡ್‌ಗೆ 10 ಲಕ್ಷ ಅನುದಾನ ನೀಡಲಾಗಿತ್ತು. ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡಿಲ್ಲ. ಅಧಿಕಾರಿಗಳು ಬೇಜವಾಬ್ದಾರಿ ವಹಿಸಿದ್ದೀರಿ. ಪಟ್ಟಣದಲ್ಲಿ ದೇಶದ ನಾಯಕರ ಪ್ರತಿಮೆಗಳು ಮುಚ್ಚಿಟ್ಟಿದ್ದೀರಿ ಇದು ಸರಿಯಲ್ಲ ಎಂದು ಮುಖ್ಯಾಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಇಂದಿರಾನಗರ ಮನೆಗಳ ಸ್ಥಿತಿಗತಿ ವರದಿ ನೀಡಲು ಸೂಚನೆ ನೀಡಿದರು.

ನಿರ್ಮಿತಿ ಕೇಂದ್ರ ಅಧಿಕಾರಿ ಕಿರಣ ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿ, ವಿವಿಧ ವಾರ್ಡ್ ಗಳ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸಿಸಿ ರಸ್ತೆ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ತಹಸೀಲ್ದಾರ್ ಕೆ. ನೀಲಪ್ರಭ, ಮುಖ್ಯಾಧಿಕಾರಿ ಭಾರತಿ ದಂಡೋತಿ, ವೈದ್ಯಾಧಿಕಾರಿ ಡಾ. ಶಿವಪ್ರಸಾದ ಮೈತ್ರಿ, ಸಿಡಿಪಿಒ ಶರಣಬಸವ, ಪ್ರವೀಣ್ ಕುಮಾರ್, ಪ್ರಕಾಶ ನೀರಟಿ, ಪಾಪಣ್ಣ ಮನ್ನೆ, ಸಿರಾಜ್ ಚಿಂತಕುಂಟಿ, ನರ್ಮದಾ ಅವಂಗಾಪುರ, ಜಯಶ್ರೀ ಪಾಟೀಲ್, ಮೊಹ್ಮದ್ ಇಸ್ಮಾಯಿಲ್, ಗುಲಾಮ್ ರಸೂಲ್ ಪಟೇಲ್, ಶುಭಾಷ ಕಟಕಟೆ, ಕೃಷ್ಣಾರೆಡ್ಡಿ ಪೊಲೀಸ್ ಪಾಟೀಲ್, ಬಾಲಪ್ಪ ದಾಸರಿ, ಅಂಬಾದಾಸ ಜೀತ್ರಿ, ಆಶನ್ನ ಬುದ್ಧ, ಚಂದುಲಾಲ ಚೌದರಿ, ಮಕಬುಲ್ ಪ್ಯಾರೆ, ಬಸ್ಸಣ್ಣ ದೇವರಹಳ್ಳಿ, ಆಸೀಮ್, ದೀಪಕ ಬೆಳ್ಳಿ, ಅಶೋಕ ಕಲಾಲ್ ಇತರರಿದ್ದರು.