ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಎಲ್‌ಕೆಜಿ ಯಿಂದ ಪಿಯುಸಿಯವರೆಗೆ ಗುಣಾತ್ಮಕ ಶಿಕ್ಷಣವನ್ನು ನಮ್ಮಲ್ಲಿರುವಂತಹ ಶಿಕ್ಷಕರಿಂದ ಕೊಡಿಸುತ್ತಾ ರಾಜ್ಯಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ಮಾದರಿ ಕ್ಷೇತ್ರವನ್ನಾಗಿಸಬೇಕೆಂದು ಆಸೆ ನನ್ನದು ಇದರಲ್ಲಿ ಯಾವುದೇ ಪಕ್ಷ ಭೇದವಿಲ್ಲದೇ ನಮ್ಮ ಕ್ಷೇತ್ರದ ಮಕ್ಕಳ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸುವ ಮೂಲಕ ಮನೆಗೊಬ್ಬ ಅಧಿಕಾರಿಯನ್ನಾಗಿ ಮಾಡುವ ಆಸೆ ನನ್ನದು ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.

ಪಟ್ಟಣದ ತೀನಂಶ್ರೀ ಭವನದಲ್ಲಿ ಎಸ್.ಬಿ.ಚಾರಿಟಬಲ್‌ಟ್ರಸ್ಟ್‌ ಜ್ಞಾನಕಲ್ಪದ ವತಿಯಿಂದ ಏರ್ಪಡಿಸಲಾಗಿದ್ದ ನಮ್ಮ ಮೇಷ್ಟ್ರು ನಮಗೆ ಪ್ರೇರಣೆ ಶೀರ್ಷಿಕೆಯಡಿಯಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಯಲ್ಲಿ 600ಕ್ಕೂ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ರೂಪಿಸಿದ ಶಿಕ್ಷಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲೂಕಿನಲ್ಲಿ ಉತ್ತಮ ಗುಣಮಟ್ಟದ ಸಂಪನ್ಮೂಲವಿರುವಂತಹ ಶಿಕ್ಷಕರು ಇದ್ದು ಅವರಿಂದ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ಈ ಫಲಿತಾಂಶ ಬರಲು ಸಾಧ್ಯವಾಗಿದೆ. ಪ್ರೇರಣಾ ಶಿಬಿರ, ಸಂಜೀವಿನಿ ಶಿಬಿರಗಳನ್ನು ಮಾಡುವುದರೊಂದಿಗೆ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಉಚಿತ ಸಿಇಟಿ ನೀಟ್ ತರಬೇತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಶೈಕ್ಷಣಕವಾಗಿ ಯಾವುದೇ ತಾರತಮ್ಯವಿಲ್ಲದೇ ಸಹಕಾರ ನೀಡುತ್ತಿದ್ದು ಅದೇ ರೀತಿ ಕೆಎಎಸ್ ಸೇರಿದಂತೆ ಸ್ಪಾರ್ಧತ್ಮಕ ಪರೀಕ್ಷೆಗಳಿಗೂ ನಮ್ಮ ಟ್ರಸ್ಟ್ ವತಿಯಿಂದ ಉಚಿತವಾಗಿ ತರಬೇತಿಯನ್ನು ನೀಡಲಾಗುವುದು. ಯಾವುದೇ ಮಕ್ಕಳು ಯಾವುದೇ ಸಮಸ್ಯಯಿಂದ ಶಿಕ್ಷಣವನ್ನು ಕುಂಠಿತಗೊಳಿಸಬೇಡಿ ನಿಮ್ಮ ಯಾವುದೇ ಸಮಸ್ಯಯನ್ನು ನಾನು ಬಗೆಹರಿಸುತ್ತೇನೆ ನಿಮ್ಮೊಂದಿಗೆ ನಾನಿದ್ದೇನೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ಕಾಂತರಾಜು ಮಾತನಾಡಿ ಮಕ್ಕಳಿಗೆ ಶಿಕ್ಷಕರು ಪ್ರೇರಣೆಯಾದರೆ ನಮಗೆ ನಮ್ಮ ಶಾಸಕರೇ ಪ್ರೇರಣೆಯಾಗಿದ್ದಾರೆ ಶಿಕ್ಷಣಕ್ಷೇತ್ರಕ್ಕೆ ತಮ್ಮ ಎಸ್.ಬಿ.ಚಾರಿಟಬಲ್‌ಟ್ರಸ್ಟ್ ಮೂಲಕ ಸಮಾಜದ ಎಲ್ಲರೊನ್ನೊಳಗೊಂಡು ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ ಬೋರನಕಣಿವೆ ಶಿಕ್ಷಕ ರವಿಕುಮಾರ್ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪಲಿತಾಂಶದಲ್ಲಿ ಈ ಬಾರಿ ಕಳೆದ ಬಾರಿಗಿಂತ ಕಡಿಮೆಯಾಗಿದೆ. ಅದರೆ ನಮ್ಮದು ಗುಣಾತ್ಮಕ ಶಿಕ್ಷಣವಾಗಿದೆ ಅದರೂ ರಾಜ್ಯಕ್ಕೆ ೩ನೇ ರ‍್ಯಾಂಕ್‌ ಪಡೆದಿರುವುದು ನಮ್ಮ ತಾಲೂಕು ಈ ಬಾರಿಯ ಫಲಿತಾಂಶ ನಮ್ಮ ಎಲ್ಲಾ ಶಿಕ್ಷಕರಿಗೂ ಸಂಪನ್ಮೂಲ ವ್ಯಕ್ತಿಗಳಿಗೂ ತೃಪ್ತಿತಂದಿದೆ ಎಂದರು.ಅಕ್ಷರದಾಸೋಹ ಇಲಾಕೆಯ ಅಧಿಕಾರಿ ಗವಿರಂಗಪ್ಪ ಮಾತನಾಡಿದರು. ಸಂಪನ್ಮೂಲ ಶಿಕ್ಷಕ ರಮೇಶ್‌ಮಾತನಾಡಿ ಈ ಬಾರಿಯು ವಿಶೇಷವಾಗಿ ಪ್ರತಿ ತಿಂಗಳು ಪ್ರೇರಣಾ ಶಿಬಿರವನ್ನು ಮಾಡುತ್ತೇವೆ ಹಾಗೂ ಪ್ರೇರಣಾ ಶಿಬಿರಕ್ಕೆ ಮಕ್ಕಳನ್ನು ಪರೀಕ್ಷೆಯ ಮೂಲಕ ಆಯ್ಕೆ ಮಾಡುತ್ತೇವೆ ಈ ಬಾರಿ ಧನಾತ್ಮಕ ಬದಲಾವಣೆಯನ್ನು ಮಾಡುವ ಮೂಲಕ ಉತ್ತಮ ಫಲಿತಾಂಶವನ್ನು ನೀಡುತ್ತೇವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುರಾಜಿವಸತಿ ಶಾಲೆಯ ೬೨೩ಅಂಕಗಳನ್ನು ಗಳಿಸಿದ ವಿದ್ಯಾರ್ಥಿ ಯಶ್ವಂತ್ ಕೆ ಮಾತನಾಡಿ ನಮ್ಮ ಸಾಧನೆಗೆ ನಮ್ಮ ಶಿಕ್ಷಕರು, ಪೋಷಕರು ಪ್ರಾಂಶುಪಾಲರು ಹಾಗೂ ಶಾಸಕರು ಕಾರಣ. ಅದ್ದರಿಂದ ಯಾವುದೇ ನಿಮ್ಮ ಪಠ್ಯದಲ್ಲಿನ ಸಮಸ್ಯೆಗಳನ್ನು ಶಿಕ್ಷಕರಲ್ಲಿ ಕೇಳಿ ಪರಿಹಾರ ಪಡೆಯಿರಿ ಪ್ರೇರಣಾ ಶಿಬಿರದಿಂದ ಹೆಚ್ಚು ಅಂಕಗಳನ್ನು ಗಳಿಸುವುದರೊಂದಿಗೆ ಸಮಯವನ್ನು ಹಾಳುಮಾಡದೇ ಹೆಚ್ಚು ಅದ್ಯಯನ ಮಾಡಿದರೆ ಮಾತ್ರ ಉತ್ತಮವಾದ ಉತ್ತರ ಬರೆಯಲು ಸಾದ್ಯವಾಗುತ್ತದೆ ಎಂದರು.

ಫೋಟೋ :ತೀನಂಶ್ರೀ ಭವನದಲ್ಲಿ ಎಸ್.ಬಿ.ಚಾರಿಟಬಲ್‌ಟ್ರಸ್ಟ್‌ ಜ್ಞಾನಕಲ್ಪದ ವತಿಯಿಂದ ಏರ್ಪಡಿಸಲಾಗಿದ್ದ ನಮ್ಮ ಮೇಷ್ಟ್ರು ನಮಗೆ ಪ್ರೇರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.