ಮೈಲಾಪುರ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಗೆ ಯಾದಗಿರಿ ವಿಭಾಗದಿಂದ ವಿಶೇಷ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಯಾದಗಿರಿ ವಿಭಾಗ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಬಿ ಮಂಜುನಾಥ ಅವರು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಮೈಲಾಪುರ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಗೆ ಯಾದಗಿರಿ ವಿಭಾಗದಿಂದ ವಿಶೇಷ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಯಾದಗಿರಿ ವಿಭಾಗ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಬಿ ಮಂಜುನಾಥ ಅವರು ತಿಳಿಸಿದ್ದಾರೆ. ಜ.11ರಿಂದ 17ರ ವರೆಗೆ ಮೈಲಾಪೂರ ಶ್ರೀ ಮೈಲಾರಲಿಂಗೇಶ್ವರ ದೇವರ ಜಾತ್ರೆ ಜರುಗಲಿರುವ ಹಿನ್ನೆಲೆ, ಈ ಜಾತ್ರೆಗೆ ಬರುವ ಭಕ್ತಾಧಿಗಳು, ಪ್ರಯಾಣಿಕರ ಸಾರಿಗೆ ಅನುಕೂಲಕ್ಕಾಗಿ ಯಾದಗಿರಿ ವಿಭಾಗದಿಂದ ವಿಶೇಷ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಈ ವಿಶೇಷ ಬಸ್‌ಗಳು ಯಾದಗಿರಿ, ಶಹಾಪೂರ, ಸುರಪುರ, ಗುರುಮಠಕಲ್, ವಾಡಿ, ಸೇಡಂ, ಕೊಡಂಗಲ್, ನಾರಾಯಣಪೇಟ, ತಾಳಿಕೋಟ, ಹುಣಸಗಿ, ಕೆಂಭಾವಿ, ಸಿಂದಗಿ, ಹುಬ್ಬಳ್ಳಿ, ಗದಗ, ಮುಂತಾದ ಸ್ಥಳಗಳಿಗೆ ಕಾರ್ಯಾಚರಣೆ ಮಾಡಲಾಗುತ್ತದೆ, ಸಾರ್ವಜನಿಕ ಪ್ರಯಾಣಿಕರು ಈ ವಿಶೇಷ ಬಸ್‌ಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಲಾಪುರ ಜಾತ್ರೆ: ಪಾದಯಾತ್ರಿಕರಿಗೆ ಅನ್ನಸೇವೆ

ಯಾದಗಿರಿ: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸುಕ್ಷೇತ್ರ ಮೈಲಾಪುರದ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಗೆ ಪಾದಯಾತ್ರೆಯ ಮೂಲಕ ತೆರಳುವ ಭಕ್ತರಿಗಾಗಿ ಯಾದಗಿರಿ ನಗರದ ಗಂಜ್ ಪ್ರದೇಶದಲ್ಲಿ ಚಿಂತನಳ್ಳಿ ಪರಿವಾರವು ಭಕ್ತಿಪೂರ್ವಕವಾಗಿ ಮಹಾಪ್ರಸಾದ ಸೇವೆ ಕೈಗೊಂಡಿದೆ.

ಗಂಜ್ ಪ್ರದೇಶದ ಮಲ್ಲಿಕಾರ್ಜುನ - ಕನ್ಯಾಕುಮಾರಿ ದಂಪತಿ ನೇತೃತ್ವದ ಚಿಂತನಳ್ಳಿ ಕುಟುಂಬವು ಕಳೆದ 14 ವರ್ಷಗಳಿಂದ ಪ್ರತಿ ವರ್ಷ ಜನವರಿ 11ರಿಂದ 13ರವರೆಗೆ ಮೂರು ದಿನಗಳ ಕಾಲ ಅನ್ನಸಂತರ್ಪಣೆ ನಡೆಸುತ್ತಾ ಬರುತ್ತಿದೆ. ಈ ವರ್ಷವೂ ಜಾತ್ರಾ ಸಂದರ್ಭದಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ನಿರಂತರವಾಗಿ ಪಾದಯಾತ್ರಿಕರಿಗೆ ಆಹಾರ ವಿತರಿಸಲಾಗುತ್ತಿದ್ದು, ದೇವರ ಸೇವೆಯೊಂದಿಗೆ ಮಾನವ ಸೇವೆಯ ಆದರ್ಶವನ್ನು ಕುಟುಂಬ ಪ್ರದರ್ಶಿಸಿದೆ.

ದಿ. ನರಸಪ್ಪ ಮತ್ತು ಚಂದಮ್ಮ ಚಿಂತನಳ್ಳಿ ಅವರ ಸ್ಮರಣಾರ್ಥವಾಗಿ ಆರಂಭಗೊಂಡ ಈ ಸೇವೆ, ದೂರದ ಊರುಗಳಿಂದ ಪಾದಯಾತ್ರೆಯ ಮೂಲಕ ಮೈಲಾಪುರದ ಶ್ರೀ ಮಲ್ಲಯ್ಯನ ಜಾತ್ರೆಗೆ ಆಗಮಿಸುವ ಸಾವಿರಾರು ಭಕ್ತರಿಗೆ ಸಹಕಾರಿಯಾಗುತ್ತಿದೆ. ಸೇವಾಭಾವದಿಂದ ಸಲ್ಲಿಸಲಾದ ಈ ಮಹಾಪ್ರಸಾದವು ಭಕ್ತರಲ್ಲಿ ಸಂತಸ ಮತ್ತು ತೃಪ್ತಿಯನ್ನುಂಟುಮಾಡಿದೆ.

ಧಾರ್ಮಿಕ ನಿಷ್ಠೆ, ಸೇವಾ ಮನೋಭಾವ ಮತ್ತು ಸಮಾಜಪರ ಚಿಂತನೆಯ ಸಂಕೇತವಾಗಿ ಚಿಂತನಳ್ಳಿ ಪರಿವಾರದ ಈ ಅನ್ನಸೇವೆ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದ್ದು, ಭಕ್ತರಿಂದ ಕೃತಜ್ಞತೆಯ ಮಾತುಗಳು ಕೇಳಿಬರುತ್ತಿವೆ.