''''''''ಗಜ''''''''ಪಡೆ ಇಂದು ನಾಡಿನಿಂದ ಕಾಡಿಗೆ ''''''''ಪಯಣ''''''''

| Published : Oct 05 2025, 01:00 AM IST

ಸಾರಾಂಶ

ಮೈಸೂರು ಅರಮನೆ ಆವರಣದ ಆನೆ ಬಿಡಾರದಲ್ಲಿ ಕಳೆದ 57 ದಿನಗಳಿಂದ ಬಿಡಾರ ಹೂಡಿದ್ದ ದಸರಾ ಆನೆಗಳು

ಬಿ. ಶೇಖರ್ ಗೋಪಿನಾಥಂಕನ್ನಡಪ್ರಭ ವಾರ್ತೆ ಮೈಸೂರು2025ನೇ ಸಾಲಿನ ವಿಶ್ವವಿಖ್ಯಾತ, ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯನ್ನು ಯಶಸ್ವಿಗೊಳಿಸಿರುವ ದಸರಾ ಗಜಪಡೆಯು ಭಾನುವಾರ (ಅ.5 ರಂದು) ನಾಡಿನಿಂದ ಕಾಡಿಗೆ ಲಾರಿಗಳಲ್ಲಿ ಪಯಣ ಬೆಳಸಲಿವೆ.ಮೈಸೂರು ದಸರಾ ಮಹೋತ್ಸವವನ್ನು ಯಶಸ್ವಿಗೊಳಿಸಲು ಕಾಡಿನಿಂದ ನಾಡಿಗೆ ಬಂದಿದ್ದ 14 ಆನೆಗಳು, ಈಗ ಮತ್ತೆ ನಾಡಿನಿಂದ ಕಾಡಿಗೆ ಪಯಣ ಆರಂಭಿಸಲು ಸಜ್ಜಾಗಿವೆ.ಮೈಸೂರು ಅರಮನೆ ಆವರಣದ ಆನೆ ಬಿಡಾರದಲ್ಲಿ ಕಳೆದ 57 ದಿನಗಳಿಂದ ಬಿಡಾರ ಹೂಡಿದ್ದ ದಸರಾ ಆನೆಗಳು, ದಸರಾ ಜಂಬೂಸವಾರಿಯಲ್ಲಿ ತಮಗೆ ವಹಿಸಿದ್ದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಲಕ್ಷಾಂತರ ಜನರಿಂದ ಜೈ ಎನಿಸಿಕೊಂಡಿವೆ.ದಸರಾ ಆನೆಗಳು ಬಂದ ಕೆಲಸ ಮುಗಿಸಿದ್ದು, ಈಗ ವಾಪಸ್ ಹೋಗುವ ಸಮಯ. ಹೀಗಾಗಿ, ಅರಣ್ಯ ಇಲಾಖೆ ಹಾಗೂ ಮೈಸೂರು ಅರಮನೆ ಮಂಡಳಿಯಿಂದ ಭಾನುವಾರ ಆನೆಗಳಿಗೆ ಸಂಪ್ರದಾಯಬದ್ದವಾಗಿ ಪೂಜೆ ನೆರವೇರಿಸಿ ಬೀಳ್ಕೊಡುಗೆ ನೀಡಲಾಗುತ್ತದೆ. ಪೂಜೆ ಮುಗಿದ ಬಳಿಕ 14 ಪ್ರತ್ಯೇಕ ಲಾರಿಗಳನ್ನೇರಿ ಆನೆಗಳು ತಮ್ಮ ತಮ್ಮ ಆನೆ ಶಿಬಿರಗಳಿಗೆ ಮರಳಲಿವೆ. ಆನೆಗಳ ಜೊತೆಯಲ್ಲಿ ಅವುಗಳ ಮಾವುತರು, ಕಾವಾಡಿಗಳು ಹಾಗೂ ಕುಟುಂಬ ಸದಸ್ಯರು ಸಹ ವಾಪಸ್ ಹೊಗಲು ಸಜ್ಜಾಗಿದ್ದಾರೆ.----ಬಾಕ್ಸ್... 2 ತಂಡಗಳಲ್ಲಿ 14 ಆನೆಗಳು ಆಗಮನಕಳೆದ ಆಗಸ್ಟ್ 10 ರಂದು ಮೊದಲ ತಂಡದಲ್ಲಿ 9 ಆನೆಗಳು ಅರಮನೆಯ ಆನೆ ಬಿಡಾರ ಪ್ರವೇಶಿಸಿದ್ದವು. ಮೊದಲ ತಂಡದಲ್ಲಿ ಅಂಬಾರಿ ಆನೆ ಅಭಿಮನ್ಯು, ಪ್ರಶಾಂತ, ಭೀಮ, ಮಹೇಂದ್ರ, ಧನಂಜಯ, ಕಂಜನ್, ಏಕಲವ್ಯ, ಕಾವೇರಿ ಮತ್ತು ಲಕ್ಷ್ಮಿ ಆನೆಗಳು ಆಗಮಿಸಿದ್ದವು. ಇದಾದ 15 ದಿನಗಳ ಬಳಿಕ ಅಂದರೆ ಆಗಸ್ಟ್ 25 ರಂದು ಎರಡನೇ ತಂಡದಲ್ಲಿ 5 ಆನೆಗಳು ಆಗಮಿಸಿದ್ದವು. ಗೋಪಿ, ಸುಗ್ರೀವ, ಶ್ರೀಕಂಠ, ರೂಪ ಮತ್ತು ಹೇಮಾವತಿ ಆನೆಗಳು ಆಗಮಿಸಿದ್ದು, ಮೊದಲ ತಂಡದೊಂದಿಗೆ ಸೇರಿಕೊಂಡಿದ್ದವು. ಬಂದಾಗ ಪ್ರತ್ಯೇಕವಾಗಿ ಬಂದಿದ್ದ 14 ಆನೆಗಳು, ಹೋಗುವ ಮಾತ್ರ ಎಲ್ಲವೂ ಒಟ್ಟಿಗೆ ತಮ್ಮ ತಮ್ಮ ಕ್ಯಾಂಪ್ ಗಳಿಗೆ ತೆರಳುತ್ತಿವೆ.

-----ಬಾಕ್ಸ್...-- ಯಾವ ಆನೆ? ಯಾವ ಶಿಬಿರಕ್ಕೆ?--ಸತತ 6ನೇ ಬಾರಿ ಅಂಬಾರಿ ಹೊತ್ತ ಅಭಿಮನ್ಯು, ಜನರ ಅಚ್ಚುಮೆಚ್ಚಿನ ಭೀಮ, ಶ್ರೀರಂಗಪಟ್ಟಣ ದಸರಾದಲ್ಲಿ ಅಂಬಾರಿ ಹೊತ್ತ ಮಹೇಂದ್ರ ಮತ್ತು ಅರಮನೆ ಖಾಸಗಿ ದರ್ಬಾರ್ ನಲ್ಲಿ ಪಟ್ಟದ ಆನೆಯಾಗಿದ್ದ ಶ್ರೀಕಂಠ ಮತ್ತಿಗೋಡು ಆನೆ ಶಿಬಿರಕ್ಕೆ ವಾಪಸ್ ಆಗಲಿವೆ.ನಿಶಾನೆ ಆನೆಯಾಗಿ ಜಂಬೂಸವಾರಿ ಮೆರವಣಿಗೆ ಮುನ್ನಡೆಸಿದ ಧನಂಜಯ, ನೌಫತ್ ಆನೆಯಾಗಿ ಸಾಗಿದ ಗೋಪಿ, ಸಾಲಾನೆಯಾಗಿ ಸಾಗಿದ ಕಂಜನ್, ಪ್ರಶಾಂತ, ಸುಗ್ರೀವ, ಹೇಮಾವತಿ ಮತ್ತು ಅಂಬಾರಿ ಆನೆಗೆ ಕುಮ್ಕಿಯಾಗಿದ್ದ ಕಾವೇರಿ ಆನೆಯು ದುಬಾರೆ ಆನೆ ಶಿಬಿರಕ್ಕೆ ತೆರಳಲು ಸಜ್ಜಾಗಿವೆ.ಉಳಿದಂತೆ ಮತ್ತೊಂದು ಪಟ್ಟದ ಆನೆ ಏಕಲವ್ಯ ದೊಡ್ಡಹರವೆ ಆನೆ ಶಿಬಿರಕ್ಕೆ, ಸಾಲಾನೆಯಾಗಿದ್ದ ಲಕ್ಷ್ಮಿ ಬಳ್ಳೆ ಆನೆ ಶಿಬಿರಕ್ಕೆ ಹಾಗೂ ಅಂಬಾರಿ ಆನೆಗೆ ಮತ್ತೊಂದು ಕುಮ್ಕಿ ಆನೆಯಾಗಿದ್ದ ರೂಪಾ ಭೀಮನಕಟ್ಟೆ ಆನೆ ಶಿಬಿರಕ್ಕೆ ತೆರಳಿಲಿವೆ.