ಸಾರಾಂಶ
ಪ್ರವೇಶಾತಿ ಪಡೆದ ಬಳಿಕ ಮತ್ತೆ ಅಂಕ ಪಟ್ಟಿಗಳನ್ನು ಮರಳಿ ನೀಡುವುದಾಗಿ ಕೋರಿದ್ದಾರೆ. ಆದರೆ, ಅಂಕ ಪಟ್ಟಿ ಕೊಡಲು ಲಂಚ ಕೊಡುವಂತೆ ಕೇಳುತ್ತಿರುವುದಾಗಿ ಆರೋಪಿಸಿ ಪ್ರಭಾ ಅವರು ರಸ್ತೆಯಲ್ಲಿ ಮಲಗಿ ಪ್ರತಿಭಟಿಸಿದರು.
ಕನ್ನಡಪ್ರಭ ವಾರ್ತೆ ಮೈಸೂರು
ಅಂಕಪಟ್ಟಿ ನೀಡುವಂತೆ ಆಗ್ರಹಿಸಿ ಮೈಸೂರು ವಿವಿ ಕಾಫ್ರರ್ಟ್ ಹಾಲ್ ಎದುರು ರಸ್ತೆಯಲ್ಲಿ ಮಲಗಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಡಿ.ಸಿ. ಪ್ರಭಾ ಪ್ರತಿಭಟಿಸಿದ್ದಾರೆ.ಬಿ.ಇಡಿ ಪ್ರವೇಶಕ್ಕೆ ಎಸ್‌ಎಸ್‌ಎಲ್ಸಿ ಮತ್ತು ಪದವಿ ಅಂಕಪಟ್ಟಿಗಳನ್ನು ನೀಡುವಂತೆ ಕುಲಸಚಿವರಿಗೆ ಪತ್ರ ಬರೆದಿದ್ದಾರೆ. ಆರ್ಥಿಕ ಸಮಸ್ಯೆ ಇರುವುದರಿಂದ ನಕಲು ಅಂಕ ಪಟ್ಟಿ ಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರವೇಶಾತಿ ಪಡೆದ ಬಳಿಕ ಮತ್ತೆ ಅಂಕ ಪಟ್ಟಿಗಳನ್ನು ಮರಳಿ ನೀಡುವುದಾಗಿ ಕೋರಿದ್ದಾರೆ. ಆದರೆ, ಅಂಕ ಪಟ್ಟಿ ಕೊಡಲು ಲಂಚ ಕೊಡುವಂತೆ ಕೇಳುತ್ತಿರುವುದಾಗಿ ಆರೋಪಿಸಿ ಪ್ರಭಾ ಅವರು ರಸ್ತೆಯಲ್ಲಿ ಮಲಗಿ ಪ್ರತಿಭಟಿಸಿದರು. ಇದರಿಂದ ಸಂಚಾರಕ್ಕೆ ಅಡಚಣೆಯಾಗಿತ್ತು.
;Resize=(128,128))
;Resize=(128,128))
;Resize=(128,128))
;Resize=(128,128))