ಸಾರಾಂಶ
ನಗರ ಪಾಲಿಕೆಯ ಜಯಚಾಮರಾಜ ಒಡೆಯರ್ ಸಭಾಂಗಣ
ಕನ್ನಡಪ್ರಭ ವಾರ್ತೆ ಮೈಸೂರು
ಪುರಭವನ ಆವರಣದಲ್ಲಿ ಬಯಲು ರಂಗಮಂದಿರ ನಿರ್ಮಿಸುವುದು, ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಕಾಂಕ್ರಿಟ್ ರಸ್ತೆಗಳ ನಿರ್ಮಾಣ, ಇ- ಖಾತಾ, ಬಿ- ಖಾತಾ ಆಂದೋಲನ ಸೇರಿದಂತೆ ಹಲವು ಹತ್ತಾರು ಯೋಜನೆಯನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲಿ ನಗರ ಪಾಲಿಕೆಯು ಹಮ್ಮಿಕೊಂಡಿದೆ.ನಗರ ಪಾಲಿಕೆಯ ಜಯಚಾಮರಾಜ ಒಡೆಯರ್ ಸಭಾಂಗಣದಲ್ಲಿ ಗುರುವಾರ ನಡೆದ ನಗರ ಪಾಲಿಕೆ ಬಜೆಟ್ ಸಭೆಯಲ್ಲಿ ಆಡಳಿತಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ಡಿ.ಎಸ್. ರಮೇಶ್ ಬಜೆಟ್ ಮಂಡಿಸಿದರು.2025-26ನೇ ಸಾಲಿಗೆ ನಗರ ಪಾಲಿಕೆ ನಗರ ಪಾಲಿಕೆಯಲ್ಲಿ ಪ್ರಾರಂಭಿಕ ಶಿಲ್ಕು 310.51 ಕೋಟಿ, ಜಮೆ 918.20 ಕೋಟಿ ಸೇರಿ ಒಟ್ಟು 1228.72 ಕೋಟಿಯಾಗಿದ್ದು, ಇದರಲ್ಲಿ ಪಾವತಿ 1219.01 ಕೋಟಿ ಕಳೆದು 9.70 ಕೋಟಿ ಉಳಿತಾಯವನ್ನು ಹೊಂದಿದೆ.ಆದಾಯದ ಮೂಲಗಳುಈ ಸಾಲಿಗೆ ಆಸ್ತಿ ತೆರಿಗೆಯಿಂದ 252.60 ಕೋಟಿಯನ್ನು ನಿರೀಕ್ಷಿಸಲಾಗಿದೆ. ನೀರಿನ ತೆರಿಗೆ ಮತ್ತು ಒಳಚರಂಡಿ ನಿರ್ವಹಣಾ ಕರದಿಂದ 98.51 ಕೋಟಿ, ನಗರ ಪಟ್ಟಣ ಯೋಜನೆಯಿಂದ 15.73 ಕೋಟಿ, ಉದ್ದಿಮೆ ಪರವಾನಗಿಯಿಂದ 6 ಕೋಟಿ, ನಗರ ಪಾಲಿಕೆ ಆಸ್ತಿಯಿಂದ 3.09 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ಮೂಲದಿಂದ ರಾಜ್ಯ ಹಣಕಾಸು ಆಯೋಗದಿಂದ ಮುಕ್ತನಿಧಿ ಅನುದಾನದಡಿ ಕಳೆದ ಸಾಲಿನಲ್ಲಿ 20.34 ಕೋಟಿ ನಿರೀಕ್ಷಿಸಲಾಗಿತ್ತು. ಡಿಸೆಂಬರ್ ಅಂತ್ಯಕ್ಕೆ 10.17 ಕೋಟಿ ಬಿಡುಗಡೆಯಾಗಿದ್ದು, ಈ ಬಾಬ್ತಿನ 8.80 ಕೋಟಿ ಹಾಗೂ ಪ್ರಸಕ್ತ ಸಾಲಿಗೆ ಹೊರಗುತ್ತಿಗೆ ಪೌರಕಾರ್ಮಿಕರ ವೇತನ ಮತ್ತು ವಿಶೇಷ ನೇಮಕಾತಿಯಡಿ ನೇಮಕವಾದ ಪೌರ ಕಾರ್ಮಿಕರ ವೇನತಕ್ಕೆ 35.03 ಕೋಟಿ ನಿಗದಿಪಡಿಸಲಾಗಿದೆ.ರಾಜ್ಯ ಸರ್ಕಾರದಿಂದ ಬೀದಿದೀಪ ಮತ್ತು ನೀರು ಸರಬರಾಜು ಸ್ಥಾವರಗಳ ವಿದ್ಯುಚ್ಛಕ್ತಿ ಬಿಲ್ಲುಗಳ ಪಾವತಿಗಾಗಿ ಈ ಸಾಲಿಗೆ 125.21 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ರಾಜ್ಯ ಹಣಕಾಸು ಆಯೋಗದಿಂದ 87.54 ಕೋಟಿ ಅನುದಾನ ನಿಗದಿಯಾಗಿದೆ. 15ನೇ ಹಣಕಾಸು ಆಯೋಗದಿಂದ 58.43 ಕೋಟಿ, ಲೋಕಸಭಾ, ವಿಧಾನಸಭಾ ಮತ್ತು ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಿಂದ ನಗರದ ಅಭಿವೃದ್ಧಿಗಾಗಿ 45 ಲಕ್ಷ ಅನುದಾನ ನಿರೀಕ್ಷಿಸಲಾಗಿದೆ.ಎಸ್.ಎಫ್.ಸಿ ವಿಶೇಷ ಅನುದಾನದಲ್ಲಿ ಮಳೆಯಿಂದ ಹಾನಿಗೊಳಗಾದ ರಸ್ತೆಗಳ ಅಭಿವೃದ್ಧಿಗೆ 4.88 ಕೋಟಿ, ಕೆ.ಆರ್. ಕ್ಷೇತ್ರ ವ್ಯಾಪ್ತಿಯಲ್ಲಿ ಸಮಗ್ರ ಅಭಿವೃದ್ಧಿಗೆ 32 ಕೋಟಿ, ಚಾಮರಾಜ ಕ್ಷೇತ್ರಕ್ಕೆ 18 ಕೋಟಿ ಮತ್ತು ನರಸಿಂಹರಾಜ ಕ್ಷೇತ್ರಕ್ಕೆ 15 ಕೋಟಿ ಅನುದಾನ ನಿರೀಕ್ಷಿಸಲಾಗಿದೆ.ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ- 1.0 ಅಡಿ ಈ ಸಾಲಿಗೆ 8 ಕೋಟಿ, ನಗರ ವಿಕಾಸ ಯೋಜನೆ- 2.0 ಅಡಿ ಪ್ರಸಕ್ತ ಸಾಲಿಗೆ 30 ಕೋಟಿ ನಿರೀಕ್ಷಿಸಲಾಗಿದೆ. ಕೇಂದ್ರ ಸರ್ಕಾರದ ಸ್ವಚ್ಛಭಾರತ್1.0 ಅನುದಾನದಡಿ 7.54 ಕೋಟಿ, ಸ್ವಚ್ಛ ಭಾರತ್.0 ಅಡಿ 18.56 ಕೋಟಿ, ಐಇಸಿ ಚಟುವಟಿಕೆಗೆ 5.17 ಕೋಟಿ ನಿರೀಕ್ಷೆ ಹೊಂದಲಾಗಿದೆ.ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಉದ್ಯಾನವನ ಮತ್ತು ಜಲಸಂಪನ್ಮೂಲ ಅಭಿವೃದ್ಧಿಗೆ 10 ಕೋಟಿ, ನಗರದಲ್ಲಿ ಸಂಗ್ರಹಣೆಯಾಗುವ ಪಾರಂಪರಿಕ ತ್ಯಾಜ್ಯದ ವೈಜ್ಞಾನಿಕ ನಿರ್ವಹಣೆಗಾಗಿ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯಿಂದ 15 ಕೋಟಿ ನಿರೀಕ್ಷಿಸಲಾಗಿದೆ.ಬಯಲು ರಂಗ ಮಂದಿರನಗರದ ಪುರಭವನ ಆವರಣದಲ್ಲಿ ಬಯಲು ರಂಗಮಂದಿರ ನಿರ್ಮಿಸಿ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶವಿದೆ. ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ಮನೋರಂಜನೆ ಒದಗಿಸಲು ಈ ವ್ಯವಸ್ಥೆ ಮಾಡಲಾಗಿದೆ.ವಲಯ ಕಚೇರಿ ನಿರ್ಮಾಣಸಿದ್ಧವಾಗಿರುವ ವಲಯ ಕಚೇರಿ 3ರ ಉದ್ಘಾಟನೆಗೆ ಕ್ರಮ, ವಲಯ ಕಚೇರಿ 8 ಕಟ್ಟಡ ನಿರ್ಮಿಸಲು ಕ್ರಮ, ವಲಯ ಕಚೇರಿ 9 ನಿರ್ಮಿಲು ನಗರಾಭಿವೃದ್ಧಿ ಪ್ರಾಧಿಕಾರದ ಸಿಎ ನಿವೇಶನ ಗುರುತಿಸಿದ್ದು, ನಿವೇಶನ ಹಸ್ತಾಂತರಗೊಂಡ ಬಳಿಕ ಈ ಆರ್ಥಿಕ ಸಾಲಿನಲ್ಲಿ ಕಾಮಗಾರಿ ಕೈಗೊಳ್ಳುವುದು. ಆರ್.ಕೆ. ನಾರಾಯಣ್ ನಿವಾಸ ಅಭಿವೃದ್ಧಿಖ್ಯಾತ ಲೇಖಕ ಆರ್.ಕೆ. ನಾರಾಯಣ್ ಅವರ ನಿವಾಸವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ವಾರಾಂತ್ಯದಲ್ಲಿ ಜನರು ಹೆಚ್ಚು ಭೇಟಿ ನೀಡುವಂತೆ ಮಾಡುವ ಉದ್ದೇಶವಿದೆ. ಸಿ.ಎಸ್.ಆರ್. ನಿಧಿಯಿಂದ ಈ ಯೋಜನೆ ಕೈಗೊಳ್ಳಲಾಗುತ್ತಿದೆ.ಸ್ಕೈ ವಾಕ್‌ನಗರದ ಮಹಾರಾಣಿ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿಗೆ ಅನುಕೂಲವಾಗುವಂತೆ ಸ್ಕೈ ವಾಕ್ ಅನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಿಸುವುದು. ವಾಹನ ಪಾರ್ಕಿಂಗ್ ವ್ಯವಸ್ಥೆನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕಿದೆ. ಈ ನಿಟ್ಟಿನಲ್ಲಿ ಪುರಭವನದ ಬೇಸ್ ಮೆಂಟ್ ನಲ್ಲಿ ಪಾರ್ಕಿಂಗ್ ಹಾಗೂ ದೇವರಾಜ ಅರಸು ರಸ್ತೆಯಲ್ಲಿ ಪಿಪಿಪಿ ಮಾದರಿಯಲ್ಲಿ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಅನುಷ್ಠಾನಕ್ಕೆ ಉದ್ದೇಶಿಸಲಾಗಿದೆ. ಈಜುಕೊಳ ನಿರ್ಮಾಣನಗರದ ಸ್ವತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಸುಸಜ್ಜಿತ ಈಜುಕೊಳ ನಿರ್ಮಿಸಲು ಉದ್ದೇಶಿಸಲಾಗಿದೆ. ಕಾಂಕ್ರೀಟ್ ರಸ್ತೆಗಳ ನಿರ್ಮಾಣಮಹಾತ್ಮಗಾಂಧಿ ನಗರ ವಿಕಾಸ ಯೋಜನೆ- 2.0 ಅಡಿ ನಗರ ಪಾಲಿಕೆಗೆ 250 ಕೋಟಿ ಅನುದಾನವನ್ನು ಎನ್.ಎಚ್.ಬಿ. ಸಾಲದ ಯೋಜನೆಯಡಿ ಮಂಜೂರು ಮಾಡಿ 3 ವರ್ಷಗಳ ಅವಧಿಗೆ ಹಂತ ಹಂತವಾಗಿ ಅನುದಾನ ಬಿಡುಗಡೆಯಾಗಿದೆ. ಈ ಯೋಜನೆಯಡಿ ನಗರದ ಪ್ರಮುಖ ಭಾಗಗಳಲ್ಲಿ ಯೂಟಿಲಿಟಿ ಡಕ್ಟ್ ಒಳಗೊಂಡ ಬಿಟುಮಿನ್ ಅಂಡ್ ಕಾಂಕ್ರೀಟ್ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ. ನೀರು ಪೂರೈಕೆಯಲ್ಲಿ ಉನ್ನತೀಕರಣಕಬಿನಿ ನದಿ ಮೂಲದಿಂದ 60 ಎಂ.ಎಲ್.ಡಿ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು, ಕಬಿನಿ ಕೆಂಬಾಳು ಜಲಶುದ್ಧೀಕರಣಗಾರದಲ್ಲಿ ನಗರ ಪಾಲಿಕೆ ವತಿಯಿಂದ 60 ಎಂ.ಎಲ್.ಡಿ ಸಾಮರ್ಥ್ಯದ ಜಲಶುದ್ಧೀಕರಣ ಘಟಕವನ್ನು 120 ಎಂ.ಎಲ್.ಡಿ ಸಾಮರ್ಥ್ಯಕ್ಕೆ ಉನ್ನತೀಕರಿಸುವ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಸಕ್ತ ಸಾಲಿನಲ್ಲಿ ಚಾಲನೆಗೊಳಿಸಲಾಗುವುದು. ಬಲ್ಕ್ ಫ್ಲೋ ಮೀಟರ್ ಅಳವಡಿಕೆಕುಡಿಯುವ ನೀರು ಪೂರೈಸುವ ಮೂಲಸ್ಥಾವರಗಳಿಂದ ಸಂಪರ್ಕಿತ ಕೊಳವೆ ಮಾರ್ಗಗಳಲ್ಲಿ ಸೋರುವಿಕೆ ತಡೆಗಟ್ಟಲು ಕೊಳವೆ ಜಾಲದ ಪ್ರಮುಖ ಬಿಂದುಗಳಲ್ಲಿ ನೀರಿನ ಹರಿವಿನ ಪ್ರಮಾಣ ಅಳತೆಗೆ ಅಮೃತ್ ಪ್ರೋತ್ಸಾಹ ಧನದ ಯೋಜನೆಯಡಿ 44 ವಾಟರ್ ಬಲ್ಕ್ ಪ್ಲೋ ಮೀಟರ್ ಗಳನ್ನು ನಗರದ ವಿವಿಧ ಕೇಂದ್ರ ಬಾಗಗಳಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ. ಪಾರಂಪರಿಕ ತ್ಯಾಜ್ಯ ವೈಜ್ಞಾನಿಕ ನಿರ್ವಹಣೆನಗರದಲ್ಲಿ ಉತ್ಪಾದನೆ ಆಗುತ್ತಿರುವ ಪಾರಂಪರಿಕ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಯೋಜನೆ ಕೈಗೊಂಡು ಪ್ರಸ್ತುತ ಶೇ.40 ರಷ್ಟು ಕಾಮಗಾರಿ ಪೂರ್ಣಗೊಳಿಸಲಾಗುತ್ತಿದೆ. ಉಳಿದಂತೆ ಶೀಘ್ರವಾಗಿ ಪಾರಂಪರಿಕ ತ್ಯಾಜ್ಯ ವಿಲೇವಾರಿ ಮಾಡಿ ತ್ಯಾಜ್ಯ ಇರುವ ಸ್ಥಳವನ್ನು ವೇಸ್ಟ್ ಟು ಎನರ್ಜಿ ಯೋಜನೆಗೆ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಗೆ ವಹಿಸಲು ಉದ್ದೇಶಿಸಲಾಗಿದೆ. ಟ್ರ್ಯಾನ್ಸಫರ್ ಘಟಕ ನಿರ್ಮಾಣನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಅಂದಾಜು 535 ಟಿಪಿಡಿ ಘನತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಪ್ರತಿ ವಲಯ ಕಚೇರಿಯಲ್ಲಿ ದ್ವಿತೀಯ ಹಂತದ ತ್ಯಾಜ್ಯ ವಿಲೇವಾರಿಗೆ ಪ್ರಸ್ತುತ 3 ಕಾಂಪ್ಯಾಕ್ಟರ್ ವಾಹನ ಬಳಸುತ್ತಿದ್ದು, ತ್ಯಾಜ್ಯ ವಿಲೇವಾರಿಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದ್ದರಿಂದ ಕಡಿಮೆ ಸಮಯದಲ್ಲಿ ತ್ಯಾಜ್ಯ ಸಂಗ್ರಹಣೆಯ ಸಾಮರ್ಥ್ಯವನ್ನು ಹೆಚ್ಚಿಸಲು ಸ್ವಚ್ಛ ಭಾರತ್‌ಮಿಷನ್ 2.0 ಅನುದಾನ, ರಾಜ್ಯ ಸರ್ಕಾರದ ಅನುದಾನ ಹಾಗೂ ಪಾಲಿಕೆ ವಂತಿಗೆಯನ್ನು ಕ್ರೂಢೀಕರಿಸಿ 9.90 ಕೋಟಿ ಅನುದಾನದಲ್ಲಿ 16 ಕ್ಯೂ.ಮೀ ಸಾಮರ್ಥ್ಯದ 3 ಸಂಖ್ಯೆ ಟ್ರಾನ್ಸಫರ್ ಘಟಕ ನಿರ್ಮಿಸಲು ಉದ್ದೇಶಿಸಲಾಗಿದೆ. ಮೆಟೀರಿಯಲ್ ರಿಕವರಿ ಫೆಸಿಲಿಟಿವಿದ್ಯಾರಣ್ಯಪುರಂ, ರಾಯನಕೆರೆ ಮತ್ತು ಕೆಸರೆಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಸ್ವಚ್ಛ ಭಾರತ್1.0 ಅನುದಾನದಡಿ ನಿರ್ಮಿಸಲಾಗಿದೆ. ಈ ಘಟಕಗಳಿಗೆ ಅಗತ್ಯವಿರುವ ವಾಹನಗಳು, ಯಂತ್ರೋಪಕರಣ ಹಾಗೂ ಸಿವಿಲ್‌ಕಾಮಗಾರಿಗೆ 21.94 ಕೋಟಿ ಅನುಮೋದನೆ ಪಡೆಯಲಾಗಿದೆ. ಪ್ರಸ್ತುತ ಸ್ವಚ್ಛ ಭಾರತ್ ಮಿಷನ್ 2.0 ಅನುದಾನ, ರಾಜ್ಯ ಸರ್ಕಾರದ ಅನುದಾನ ಹಾಗೂ ನಗರ ಪಾಲಿಕೆ ವಂತಿಗೆಯನ್ನು ಕ್ರೂಢೀಕರಿಸಿ ವಿದ್ಯಾರಣ್ಯಪುರಂ ಮತ್ತು ರಾಯನಕೆರೆಯ ಘನತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಮೆಟಿರಿಯಲ್ ರಿಕವರಿ ಫೆಸಿಲಿಟಿ ಅಳವಡಿಸಲು ಉದ್ದೇಶಿಸಲಾಗಿದೆ. ವಿಂಡ್ರೋ ಟರ್ನರ್‌ನಗರದಲ್ಲಿ ಉತ್ಪಾದನೆ ಆಗುತ್ತಿರುವ ಘನತ್ಯಾಜ್ಯವನ್ನು ಆಧುನಿಕ ರೀತಿಯಲ್ಲಿ ವೈಜ್ಞಾನಿಕವಾಗಿ ಸಂಸ್ಕರಿಸಲು ವಿಶ್ವಸಂಸ್ಥೆಯ ಯುಎನ್‌ಐಡಿಎಂ ಅವರಿಂದ ಪುರಸ್ಕೃತಗೊಂಡ ಅನುದಾನದಡಿ ವಿಂಡ್ರೋ ಟರ್ನರ್ ಯಂತ್ರ ಖರೀದಿಸಲು ಉದ್ದೇಶಿಸಲಾಗಿದೆ. ಕಟ್ಟಡ ತ್ಯಾಜ್ಯ ಸಂಸ್ಕರಣ ಘಟಕನಗರದಲ್ಲಿ ಪ್ರತಿನಿತ್ಯ ಅಂದಾಜು 100 ರಿಂದ 150 ಟನ್ ಕಟ್ಟಡಗಳ ಭಗ್ನಾವಶೇಷ ಉತ್ಪತ್ತಿಯಾಗುತ್ತಿದ್ದು, ಇದನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು ಘಟಕ ನಿರ್ಮಾಣಕ್ಕೆ ಅಗತ್ಯವಿರುವ ವಾಹನ ಯಂತ್ರೋಪಕರಣ ಮತ್ತು ಸಿವಿಲ್‌ಕಾಮಗಾರಿಗಾಗಿ ಈ ಆರ್ಥಿಕ ಸಾಲಿನಲ್ಲಿ 11.66 ಕೋಟಿಯನ್ನು ಸ್ವಚ್ಛ ಭಾರತ್‌ಮಿಷನ್.0 ಅನುದಾನ, ರಾಜ್ಯ ಸರ್ಕಾರದ ಅನುದಾನ ಹಾಗೂ ನಗರ ಪಾಲಿಕೆ ವಂತಿಕೆ ಕ್ರೂಢೀಕರಿಸಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಸೂಪರ್ ಸಕ್ಕರ್, ಜಟ್ಟಿಂಗ್ ಯಂತ್ರಒಳಚರಂಡಿ ನಿರ್ವಹಣೆಗೆ ಗುಂಡಿಗಳ ಸ್ವಚ್ಛತೆಗೆ ಒಟ್ಟು 45 ಡಿಸಿಲ್ಟಿಂಗ್ ಯಂತ್ರ ಹಾಗೂ 22 ಜೆಟ್ಟಿಂಗ್ ಯಂತ್ರಗಳ ಅಗತ್ಯವಿದೆ. ಆದ್ದರಿಂದ ಅಮೃತ್‌ಪ್ರೋತ್ಸಾಹಕ ಅನುದಾನದಲ್ಲಿ 2 ಸೂಪರ್ ಸಕ್ಕರ್, 7 ಜೆಟ್ಟಿಂಗ್ ಯಂತ್ರ ಹಾಗೂ 16 ಡಿಸಿಲ್ಟಿಂಗ್ ಯಂತ್ರಗಳನ್ನು ಖರೀದಿಸಲು ಉದ್ದೇಶಿಸಲಾಗಿದೆ.ನಗರ ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸಿಫ್ ಇದ್ದರು.ಬಾಕ್ಸ್ 1--
-- ಇ- ಖಾತಾ ಅಭಿಯಾನ--ಆಸ್ತಿಗಳ ಮಾಲೀಕರಿಗೆ ಇ ಆಸ್ತಿ ತಂತ್ರಾಂಶದಡಿ ಆಸ್ತಿಗಳಿಗೆ ಇ ಖಾತಾ ನೀಡುವ ಉದ್ದೇಶದಿಂದ ಪ್ರತಿ ವಾರ್ಡ್ ವಾರು ಅಭಿಯಾನ ಹಮ್ಮಿಕೊಂಡಿದ್ದು, ಎಲ್ಲಾ ಆಸ್ತಿ ಮಾಲಕರು ನಿಗದಿಪಡಿಸಿದ ದಾಖಲೆ ಸಲ್ಲಿಸಿ 7 ದಿನದೊಳಗೆ ಇ ಖಾತೆ ನೀಡಲು ನಿರ್ಧರಿಸಲಾಗಿದೆ.-- ಬಾಕ್ಸ್ 2--
ಬಿ- ಖಾತಾ ಆಂದೋಲನಅನಧಿಕೃತ ಬಡಾವಣೆ ಹಾಗೂ ಕಂದಾಯ ನಿವೇಶನಗಳಲ್ಲಿ ನಿರ್ಮಿಸಿರುವ ಕಟ್ಟಡ, ನಿವೇಸನ ಆಸ್ತಿ ತೆರಿಗೆ ವ್ಯಾಪ್ತಿಯಲ್ಲಿ ಒಳಡಿಸುವ ಸಂಬಂಧ ಮೇ 10ರೊಳಗೆ ನೋಂದಾಯಿತ ಆಸ್ತಿ ದಾಖಲಾತಿಯನ್ನು ಹೊಂದಿರುವ ಆಸ್ತಿ ಮಾಲೀಕರಿಗೆ ಬಿ - ಖಾತಾ ನೀಡಲು ಆಂದೋಲನ ಹಮ್ಮಿಕೊಳ್ಳಲಾಗಿದೆ. -- ಬಾಕ್ಸ್ 3--ಕಂದಾಯ ಸೇವೆ ವಿಕೇಂದ್ರೀಕರಣಆಸ್ತಿಗಳ ತೆರಿಗೆ, ಖಾತಾ, ಖಾತಾ ವರ್ಗಾವಣೆ, ತಿದ್ದುಪಡಿ, ನೋಂದಣಿ, ಇತರೆ ಕಂದಾಯ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ನಿಗದಿತ ಅವಧಿಯಲ್ಲಿ ಸೇವೆ ಒದಗಿಸಲು 4 ಸಾವಿರ ಚದರ ಅಡಿ ವರೆಗಿನ ಆಸ್ತಿಗಳ ವಹಿವಾಟಿಗೆ ಆಯಾಯ ವಲಯ ಕಚೇರಿ, ವಲಯ ಆಯುಕ್ತರಿಗೆ ಅಧಿಕಾರ ನೀಡಲಾಗಿದೆ. -- ಬಾಕ್ಸ್ 4--
ಪರಿಶಿಷ್ಟ, ಬಡಜನರು, ವಿಶೇಷಚೇತನರುನಗರ ಪಾಲಿಕೆ ವ್ಯಾಪ್ತಿಯಲ್ಲಿನ ಪರಿಶಿಷ್ಟ ಜಾತಿ, ಪಂಗಡದವರಿಗೆ ವಿವಿಧ ಸೌಲಭ್ಯ, ಸಹಾಯಧನ ನೀಡಲು ಸಮುದಾಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂತೆಯೇ ಹಿಂದುಳಿದ ಬಡಜನರ ಶ್ರೇಯೋಭಿವೃದ್ಧಿಗೆ ವೈಯಕ್ತಿಕ ಹಾಗೂ ಸಮುದಾಯ ಕಾರ್ಯಕ್ರಮ, ವಿಶೇಷಚೇತನರ ಕಲ್ಯಾಣಕ್ಕೆ ಆದತ್ಯತೆ ನೀಡಲು ನಿರ್ಧರಿಸಲಾಗಿದೆ.